For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮೇಲೆ ರೆಹಮಾನ್ ಮಾಡಿದ ಆರೋಪ ಏನು?

  By Harshitha
  |

  ಮೊದಲ ಎರಡು ವಾರ 'ಬಿಗ್ ಬಾಸ್' ಮನೆಯಲ್ಲಿ ಇದ್ದ ಹಾಗೆ ರೆಹಮಾನ್ ಈಗಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ.

  'ಅಣ್ಣ-ತಂಗಿ' ಖ್ಯಾತಿಯ ರೆಹಮಾನ್-ನೇಹ ಗೌಡ ನಡವಳಿಕೆ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಓರ್ವ ಕಾಲರ್ ಕೂಡ ಪ್ರಶ್ನೆ ಮಾಡಿದರು. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

  ಕಾಲರ್ ಕೇಳಿದ ಪ್ರಶ್ನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರೆಹಮಾನ್ 'ಬಿಗ್ ಬಾಸ್' ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮುಂದೆ ಓದಿ.....

  ರೆಹಮಾನ್ ಮಾಡಿರುವ ಆರೋಪ ಏನು?

  ರೆಹಮಾನ್ ಮಾಡಿರುವ ಆರೋಪ ಏನು?

  ''ನನಗೆ ಅನಿಸಿದ್ದು Genuine ಕಾಲರ್ ಅಲ್ಲ ಅದು. Scripted..!''-ರೆಹಮಾನ್

  ['ಬಿಗ್ ಬಾಸ್' ಮನೆಯಿಂದ ಈ ವಾರ ಗೇಟ್ ಪಾಸ್ ಯಾರಿಗೆ?]

  ರೆಹಮಾನ್ ಮಾತಿನ ಅರ್ಥವೇನು?

  ರೆಹಮಾನ್ ಮಾತಿನ ಅರ್ಥವೇನು?

  Genuine ಅಲ್ಲ Scripted ಅಂದ್ರೆ, ಬೇಕಂತಲೇ ಯಾರಿಂದಲೋ ಕರೆ ಮಾಡಿಸಿ ರೆಹಮಾನ್ ಗೆ 'ಅಣ್ಣ-ತಂಗಿ' ಸಂಬಂಧದ ಬಗ್ಗೆ ಪ್ರಶ್ನೆ ಮಾಡುವಂತೆ 'ಬಿಗ್ ಬಾಸ್' ಸೂಚಿಸಿದ್ರಾ?

  ಭಾವನಾ-ಶ್ರುತಿ ಏನ್ ಮಾತನಾಡಿಕೊಂಡರು ಗೊತ್ತಾ?

  ಭಾವನಾ-ಶ್ರುತಿ ಏನ್ ಮಾತನಾಡಿಕೊಂಡರು ಗೊತ್ತಾ?

  ರೆಹಮಾನ್ ಮತ್ತು ನೇಹ ಗೌಡ ನಡವಳಿಕೆ ಕುರಿತು ಸುದೀಪ್ ಮುಂದೆ ಕಾಲರ್ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ರೆಹಮಾನ್ ಉತ್ತರ ಕೊಟ್ಟ ಬಗೆ ಕುರಿತು ಭಾವನಾ ಮತ್ತು ಶ್ರುತಿ ನಡುವೆ ನಡೆದ ಸಂಭಾಷಣೆ ಇಲ್ಲಿದೆ.
  ಶ್ರುತಿ - ಸುದೀಪ್ ಪ್ರಶ್ನೆ ಕೇಳುವಾಗ ಗೌರವವಾಗಿ ಉತ್ತರ ನೀಡಬಹುದಲ್ವಾ?
  ಭಾವನಾ - ಹೀ ಗಾಟ್ ಆಂಗ್ರಿ.!
  ಶ್ರುತಿ - ಇವರು ಹಂಗೆ ಮಾಡ್ತಿದ್ದಾರಲ್ವಾ?
  ಭಾವನಾ - ಅದು ನಿಜ, ಮಾಡ್ತಿದ್ದಾರೆ. ಕಾಲರ್ ತುಂಬಾ ನೀಟಾಗಿ ಹೇಳಿದ್ರು. ಅದನ್ನ ಹಾರ್ಡ್ ಆಗಿ ಪ್ರೂವ್ ಮಾಡ್ತಿದ್ದೀರಾ. ಬಿಟ್ಬಿಡಿ ಅಲ್ಲಿಗೆ ಅಲ್ಲೇ. ಅಂದ್ರೆ ನಾವಿಬ್ಬರು ಅಣ್ಣ ತಂಗಿನೇ ಅಂತ. ಬಿಟ್ಬಿಡ್ಬೇಕ್ ಅಲ್ಲಿಗೆ ಅಲ್ಲಿನೇ.
  ನಾನು ಹೇಳೋಣ ಅಂತ ಇದ್ದೆ. ನೀವಿಬ್ಬರೇ ಇದ್ಕೊಂಡು ನಿಮ್ಮ Identity ಕಳ್ಕೊಂತಿದ್ದೀರಾ ಅಂತ.

  ರೆಹಮಾನ್ ಹೇಗಿರಬೇಕು?

  ರೆಹಮಾನ್ ಹೇಗಿರಬೇಕು?

  ಶ್ರುತಿ - ಅವರಿಬ್ಬರೇನು ಚಿಕ್ಕವರಲ್ಲ. ರೆಹಮಾನ್ ತುಂಬಾ ಬುದ್ದಿವಂತ. ಈ ತರಹ ನೂರು ಸೆಲೆಬ್ರಿಟಿಗಳ ಕಥೆ ನೋಡಿರೋರು. ಒಂದು ನ್ಯೂಸ್ ಚಾನೆಲ್ ನಲ್ಲಿ ಕೂತ್ಕೊಂಡು ಎಷ್ಟು ಜನರ ಕಥೆ ಕೇಳಿರಲ್ಲ. ಹ್ಯಾಂಡಲ್ ಮಾಡಿರಲ್ವಾ. ನಮಗಿಂತ ಜಾಸ್ತಿ ಎಷ್ಟು ಆಂಗಲ್ ನಲ್ಲಿ ನೋಡೋ ಶಕ್ತಿ ಇದೆ ರೆಹಮಾನ್ ಗೆ. ಬೇರೆ ಸೆಲೆಬ್ರಿಟಿಗಳನ್ನ ನೋಡಿರ್ತಾರಲ್ಲ. ಹೀಗಿದ್ದರೂ, ನಂಗೆ ಗೊತ್ತಿಲ್ಲ. ಯಾಕೆ ಈ ತರ ಆಡ್ತಿದ್ದಾರೆ ಅಂತ.!

  ರೆಹಮಾನ್ ಸಮರ್ಥನೆ ಏನು?

  ರೆಹಮಾನ್ ಸಮರ್ಥನೆ ಏನು?

  ರೆಹಮಾನ್ - ಪ್ರತಿಯೊಬ್ಬರ ಮನೆಯಲ್ಲಿ ಅಣ್ಣ-ತಂಗಿ ಒಂದೊಂದು ತರ ಇರ್ತಾರೆ. ನನಗೆ ಬರಲ್ವಾ ಮಾತಾಡೋಕೆ. ನಾನು 10 ವರ್ಷ ಸುಮ್ನೆ ಕೆಲಸ ಮಾಡಿದ್ದೀನಾ ಟಿವಿ9ನಲ್ಲಿ. ಯಾವನೂ ನನ್ನನ್ನ ಮಾತಲ್ಲಿ ಸೋಲಿಸೋಕೆ ಚಾನ್ಸೇ ಇಲ್ಲ. ಸುದೀಪ್ ಅದನ್ನ ಕಟ್ ಮಾಡಿದ್ರು. ಇಲ್ಲಾಂದ್ರೆ ಇನ್ನೂ ಮಾತಾಡ್ತಿದ್ದೆ.

  ಕಾಲರ್ ಕೇಳಿದ ಪ್ರಶ್ನೆ ಏನು?

  ಕಾಲರ್ ಕೇಳಿದ ಪ್ರಶ್ನೆ ಏನು?

  ಬೆಂಗಳೂರಿನ ರಾಜಾಜಿನಗರದ ದೀಪ ಅನ್ನೋದು ಕರೆ ಮಾಡಿ, ''ರೆಹಮಾನ್ ಮತ್ತು ನೇಹ ಗೌಡ ಅಣ್ಣ-ತಂಗಿ ಅನ್ನೋದನ್ನ ಪ್ರೂವ್ ಮಾಡೋದಕ್ಕೆ ಹೋಗ್ತಿದ್ದಾರೆ. ಇದರಿಂದ ಮಿತಿ ಮೀರುತ್ತಿದೆ. ಕೆಲವು ಕಡೆ Uncomfortable ಫೀಲ್ ಆಗುತ್ತೆ'' ಅಂತ ಪ್ರಶ್ನೆ ಕೇಳಿದರು. [ಬಿಗ್ ಮನೆಯಲ್ಲಿ ಅಣ್ಣ-ತಂಗಿ ಸಂಬಂಧಕ್ಕೆ, ತೆರೆ ಎಳೆದ ರೆಹಮಾನ್]

  ರೆಹಮಾನ್ ಕೊಟ್ಟ ಸಬೂಬು

  ರೆಹಮಾನ್ ಕೊಟ್ಟ ಸಬೂಬು

  ''ನಾನು ಈವರೆಗೂ ನನ್ನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ನಾನು 'ಬಿಗ್ ಬಾಸ್' ಮನೆಗೆ ಬಂದಾಗ ಮನೆಯ ಸದಸ್ಯರಲ್ಲಿ ನೇಹ ಅದಕ್ಕೆ ಅರ್ಹಳು ಎಂದು ಅನಿಸಿತು. ನಮ್ಮಿಬ್ಬರ ಮೈಂಡ್ ಸೆಟ್ ಒಂದೇ ರೀತಿ ಇದೆ. ಹಾಗಾಗಿ ನಾನು ನನ್ನ ಫೀಲಿಂಗ್ಸ್ ನ ನೇಹ ಅವರ ಜೊತೆ ಶೇರ್ ಮಾಡಿಕೊಂಡೆ. ಹಾಗೆ ನಾವು ಸ್ವಲ್ಪ ಕ್ಲೋಸ್ ಆದ್ವಿ, ಬಿಟ್ಟರೆ ಬೇರೆ ಏನೂ ಇಲ್ಲ'' ಅಂತ ರೆಹಮಾನ್ ಹೇಳಿದರು.

  English summary
  Tv9 Kannada Anchor Rahman alleged that Caller during 'Varada Kathe Kicchana Jothe' was scripted and not a genuine one.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X