»   » ಪ್ರತಿಷ್ಟೆಯ ಆಟದಲ್ಲಿ ಗೆದ್ದ ಚಂದನ್; ಸೋತ ಅಯ್ಯಪ್ಪ!

ಪ್ರತಿಷ್ಟೆಯ ಆಟದಲ್ಲಿ ಗೆದ್ದ ಚಂದನ್; ಸೋತ ಅಯ್ಯಪ್ಪ!

Posted By:
Subscribe to Filmibeat Kannada

''ಚಂದನ್ ಮುಂದೆ ಈ ವಾರ ನಾನು ಸೇಫ್ ಆದ್ರೆ, ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ'' ಅಂತ ಕ್ರಿಕೆಟರ್ ಅಯ್ಯಪ್ಪ ಹೇಳುತ್ತಲೇ ಇದ್ದರು. ಆದ್ರೆ, ಅಯ್ಯಪ್ಪ ಅಂದುಕೊಂಡಂತೆ ನಿನ್ನೆ ನಡೆಯಲೇ ಇಲ್ಲ.!

ವೀಕ್ಷಕರ ಎಸ್.ಎಂ.ಎಸ್ ಕೃಪೆಯಿಂದ ನಟ ಚಂದನ್ ಸೇಫ್ ಆಗಿ ಫೈನಲ್ ತಲುಪಿದರು. ಅಯ್ಯಪ್ಪ 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಟ್ಟು, ತಮ್ಮ ಮನೆಯತ್ತ ಮುಖ ಮಾಡಿದರು.['ಡೇಂಜರ್ ಝೋನ್'ನಲ್ಲಿದ್ದಾರೆ ಚಂದನ್ ಮತ್ತು ಅಯ್ಯಪ್ಪ!]

Bigg Boss Kannada 3 - Week 13 - Cricketer Aiyappa evicted

ಮೊದಮೊದಲು ಆಪ್ತ ಗೆಳೆಯರಾಗಿದ್ದ ಅಯ್ಯಪ್ಪ ಮತ್ತು ಚಂದನ್ ನಡುವೆ ನಂತರ ಅದೇನಾಯ್ತೋ ಏನೋ, ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗ್ದೇಯಿರೋವಷ್ಟು ದ್ವೇಷ ಹುಟ್ಟಿಕೊಳ್ತು.['ಬಿಗ್ ಬಾಸ್-3' ಫೈನಲ್ ಗೆ ಅಯ್ಯಪ್ಪ ಹೋಗಲೇ ಬಾರದು!]

ಟಾಸ್ಕ್ ವಿಷಯದಲ್ಲಿ ಅಯ್ಯಪ್ಪ ವಿರುದ್ಧ ಚಂದನ್, ಚಂದನ್ ವಿರುದ್ಧ ಅಯ್ಯಪ್ಪ ತೊಡೆ ತಟ್ಟಿ ನಿಲ್ಲುತಿದ್ದರು. ಫೈನಲ್ ಗೆ ಇನ್ನೊಂದು ವಾರ ಬಾಕಿ ಇರುವಾಗಲೇ, ಚಂದನ್ ವಿರುದ್ಧ ತಾವು ಗೆದ್ದು ಫೈನಲ್ ಪ್ರವೇಶಿಸಬೇಕು ಎಂಬುದು ಅಯ್ಯಪ್ಪ ಬಯಕೆ ಆಗಿತ್ತು. ಆದ್ರೆ, ವೀಕ್ಷಕರ ನಿರ್ಧಾರದಿಂದ ಅಯ್ಯಪ್ಪ ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.

ಚಂದನ್, ನಟಿ ಶ್ರುತಿ, ಪೂಜಾ ಗಾಂಧಿ, ರೆಹಮಾನ್ ಮತ್ತು ಮಾಸ್ಟರ್ ಆನಂದ್ ಫೈನಲ್ ಹಂತ ಪ್ರವೇಶಿಸಿದ್ದಾರೆ.

English summary
Ranaji Cricketer Aiyappa eliminated from Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada