»   » ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ

ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ

Posted By:
Subscribe to Filmibeat Kannada

ಮುಂಗಾರು ಮಳೆ ಬೆಡಗಿ ನಟಿ ಪೂಜಾ ಗಾಂಧಿ ಅವರು ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ಮನೆಯಿಂದ ಈ ವಾರ ಔಟ್ ಆಗಿದ್ದಾರೆ.

ಅಂದಹಾಗೆ ಮನೆಯಲ್ಲಿ ಯಾರ ಕೆಂಗಣ್ಣಿಗೂ ಗುರಿಯಾಗದೇ ತನ್ನಷ್ಟಕ್ಕೆ ತಾನಿದ್ದ ಪೂಜಾ ಗಾಂಧಿ ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದು ವೀಕ್ಷಕರಿಗೆ ಬಿಗ್ ಸರ್ ಪ್ರೈಸ್.

Bigg Boss Kannada 3 Week 5: Actress Pooja Gandhi gets eliminated

ಹಾಗೆ ನೋಡಿದರೆ ವೀಕ್ಷಕರು ರೆಹಮಾನ್ ಮತ್ತು ಸುನಾಮಿ ಕಿಟ್ಟಿಯನ್ನು ಮನೆಯಿಂದ ಆಚೆ ಹಾಕುವ ಇರಾದೆಯಲ್ಲಿದ್ದರು. ಅಲ್ಲದೇ ಅವರಿಬ್ಬರನ್ನು ಮನೆಯಿಂದ ಹೊರಗಟ್ಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.[ಬಿಗ್ ಹೌಸ್ ನಲ್ಲಿ ಪುಟ್ಟ ಮಕ್ಕಳ ಕಲರವ, ಅಮ್ಮಂದಿರು ಸುಸ್ತೋ ಸುಸ್ತು.!]

ಇನ್ನು ನಿನ್ನೆಯ ಟಾಸ್ಕ್ ಮುಗಿದ ನಂತರ ಮನೆಯ ಸದಸ್ಯರು ಪೂಜಾ ಅವರಿಗೆ ಸೆಂಡಾಫ್ ಮಾಡೋಣ ಎನ್ನುತ್ತಿದ್ದಾಗ ಮಳೆ ಹುಡುಗಿ ಪೂಜಾ ಅವರು ತುಂಬಾ ಸೈಲೆಂಟ್ ಆಗಿದ್ದರು.

ಹಾಗಾದರೆ ಪೂಜಾ ಮನೆಯಿಂದ ಹೊರ ನಡೆಯುವ ವಿಚಾರ ಮನೆಯ ಸದಸ್ಯರಿಗೆ ಮೊದಲೇ ತಿಳಿದಿತ್ತೇ ಎಂದು ತಲೆ ಕೆರೆದುಕೊಳ್ಳುವ ಸರದಿ ನಮ್ಮದು.

Bigg Boss Kannada 3 Week 5: Actress Pooja Gandhi gets eliminated

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಪೂಜಾ ಗಾಂಧಿ ಮನೆಯಿಂದ ಆಚೆ ಬಂದಿದ್ದು, ಪೂಜಾ ಮನೆಯವರಿಗೆ ಭಾರಿ ಸರ್ ಪ್ರೈಸ್ ಆಗಿತ್ತಂತೆ. ಮಾತ್ರವಲ್ಲದೇ ನಿನ್ನೆ ಬೆಳಗ್ಗೆ ಪೂಜಾ ಅವರ ತಂದೆ ಪವನ್ ಅವರು ಪೂಜಾ ಅವರಿಗೆ ಬೇಕಾದ ಬಟ್ಟೆ-ಬರೆ ಹಾಗೂ ಅಗತ್ಯ ಸಾಮಾನುಗಳನ್ನು ತಂದು ಕೊಟ್ಟಿದ್ದರಂತೆ.[ಆನಂದ್ ಗೆ ತುಂಟಾಟ, ರೆಹಮಾನ್ ಗೆ ಪ್ರಾಣಸಂಕಟ..!]

ಆದರೆ ಯಾರು ಊಹಿಸಿರದ ಆಶ್ಚರ್ಯ ಘಟನೆ ನಡೆದಿದ್ದು, ನಟಿ ಪೂಜಾ ಗಾಂಧಿ ಅವರು ಮನೆಯಿಂದ ಹೊರನಡೆದಿದ್ದಾರೆ. ಇವರೊಂದಿಗೆ ಈ ವಾರ ರೆಹಮಾನ್, ಸುನಾಮಿ ಕಿಟ್ಟಿ, ನೇಹಾ ಗೌಡ ನಾಮಿನೇಟ್ ಆಗಿದ್ದು, ಕೊನೆಗೂ ಪೂಜಾ ಗಾಂಧಿ ಹೊರ ಬಂದಿದ್ದಾರೆ.

English summary
Week 5 Elimination: Actress Pooja Gandhi has been eliminated from 'Bigg Boss 3' Kannada during the Weekend with Kichcha Sudeep's Show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada