»   » ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್

ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್

Posted By:
Subscribe to Filmibeat Kannada

ಮಾತು ಮಾತಿಗೂ ಪ್ರತಿಭಟನೆ ಮಾಡಬಹುದು. ಮಾತಿನಲ್ಲಿ ಒರಟು ಇರಬಹುದು. ಜೋರು ಜೋರಾಗಿ ಜಗಳ ಮಾಡಬಹುದು. ಸ್ವಲ್ಪ ಅತಿರೇಕ ಅನಿಸಿದರೂ, ಇತರೆ ಸ್ಪರ್ಧಿಗಳ ತರಹ 'ಡಬಲ್ ಗೇಮ್' ಆಡುವ ಬುದ್ಧಿ ಪ್ರಥಮ್ ಗೆ ಇಲ್ಲ. ಅದನ್ನ ನೀವು ಕೂಡ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಗಮನಿಸಿರುತ್ತೀರಾ.

ಹೀಗಿದ್ದರೂ, 'ಬಿಗ್ ಬಾಸ್' ಮನೆ ಸದಸ್ಯರಿಗೆ ಪ್ರಥಮ್ ಕಂಡ್ರೆ ಆಗಲ್ಲ. ಆಗಾಗ, ಒಂದಲ್ಲ ಒಂದು ಕಾರಣಕ್ಕೆ ಪ್ರಥಮ್ ನ ಟಾರ್ಗೆಟ್ ಮಾಡುವ ಇತರೆ ಸ್ಪರ್ಧಿಗಳು, ನಿನ್ನೆ ಕೂಡ ಪ್ರಥಮ್ ಮುಖಕ್ಕೆ ಮಸಿ ಬಳಿದು ಅವಮಾನಿಸಿದರು.['ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮತ್ತೊಮ್ಮೆ ಅವಕಾಶ ವಂಚಿತ.!]

'ಬಿಗ್ ಬಾಸ್' ನೀಡಿದ 'ಮಸಿ-ಹಾರ' ಎಂಬ ವಿಶೇಷ ಚಟುವಟಿಕೆಯಲ್ಲಿ ಬಹುತೇಕ ಮಂದಿ ಒಂದೊಂದು ಕಾರಣ ಕೊಟ್ಟು ಪ್ರಥಮ್ ಮುಖಕ್ಕೆ ಮಸಿ ಬಳಿದರು. ಮುಂದೆ ಓದಿ....

ಪ್ರಥಮ್ ಮುಖಕ್ಕೆ ಮಸಿ ಬಳಿದವರು ಯಾರು.?

'ವ್ಯಕ್ತಿತ್ವದ ತೂಕದಲ್ಲಿ ಎಲ್ಲರಿಗಿಂತ ಪ್ರಥಮ್ ಕಮ್ಮಿ' ಅಂತ ಕೀರ್ತಿ, 'ಕೆಲವು ಕ್ಯಾರೆಕ್ಟರ್ ಇಷ್ಟ ಆಗಲ್ಲ' ಅಂತ ಭುವನ್, 'ಒಳ್ಳೆ ವ್ಯಕ್ತಿ, ಆದರೂ ಪರ್ಸನಲ್ ಸ್ಪೇಸ್ ಕೊಡುವುದಿಲ್ಲ' ಅಂತ ಶಾಲಿನಿ ಮತ್ತು 'ಕೇವಲ ಟಾಸ್ಕ್ ಗಾಗಿ' ಅಂತ ಮೋಹನ್ ಕಾರಣ ನೀಡಿ ಪ್ರಥಮ್ ಮುಖಕ್ಕೆ ಮಸಿ ಬಳಿದರು. [ಪ್ರಥಮ್ ಬಗ್ಗೆ ಶೀತಲ್, ಶಾಲಿನಿ, ರೇಖಾ ಉದುರಿಸಿದ ಮಾತಿನ ಮುತ್ತುಗಳಿವು]

ಅನವಶ್ಯಕ ಟಾರ್ಗೆಟ್ ಮಾಡಿದ ಮಾಳವಿಕಾ

''ರೇಖಾಗೆ ನನ್ನ ಮೇಲೆ ತುಂಬಾ ಬೇಸರ ಇದೆ, ರೇಖಾ ಬಗ್ಗೆ ಗೊಂದಲ ಇದ್ದರೂ ಮಸಿ ಬಳಿಯುವುದಿಲ್ಲ. ಆದರೆ ಮಸಿ ಬಳಿಯಲು ನನಗೆ ಕಾಣಿಸುತ್ತಿರುವುದು ಪ್ರಥಮ್ ಮಾತ್ರ'' ಅಂತ ಹೇಳ್ತಾ ಪ್ರಥಮ್ ಮುಖಕ್ಕೆ ಮಾಳವಿಕಾ ಮಸಿ ಬಳಿದರು.[ಹೋಗಿ ಬಂದು ಪ್ರಥಮ್ ಗೆ ಸೂಜಿ ಚುಚ್ಚುವ 'ಬಿಗ್ ಬಾಸ್' ಸ್ಪರ್ಧಿಗಳು.!]

ಮಾಳವಿಕಾಗೆ ಮಸಿ ಬಳಿದ ರೇಖಾ

''ಪ್ರಥಮ್ ನ ಟಾರ್ಗೆಟ್ ಮಾಡಿ ಮಸಿ ಬಳಿಯೋಕೆ ಇಷ್ಟ ಇಲ್ಲ. ಸತ್ಯ ಹೇಳಬೇಕು ಅಂದ್ರೆ ಮಾಳವಿಕಾ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಅಸಮಾಧಾನ ಇದೆ. ಅವರು ನಿಜವಾಗಲೂ ಏನು ಅನ್ನೋದು ಗೊತ್ತಾಗಲಿಲ್ಲ'' ಅಂತ ಹೇಳ್ತಾ ಮಾಳವಿಕಾಗೆ ರೇಖಾ ಮಸಿ ಬಳಿದರು.

ರೇಖಾ ಮಾತಿಗೆ ಭಾವುಕರಾದ ಪ್ರಥಮ್

''ಎಲ್ಲರಿಂದ ಉತ್ತಮ ಎನಿಸಿಕೊಂಡ ರೇಖಾ ಅವರು ನನ್ನನ್ನ ಹೊಗಳಿದರು'' ಎಂದು ಹೇಳುತ್ತಾ ಪ್ರಥಮ್ ಭಾವುಕರಾದರು.

ಹಾರ ಹಾಕಿದ್ದು ಮಾಳವಿಕಾ ರವರಿಗೆ

''ನನ್ನನ್ನ ಇಷ್ಟು ದಿನ ಸಹಿಸಿಕೊಂಡರು'' ಎಂಬ ಕಾರಣಕ್ಕೆ ಮಾಳವಿಕಾ ರವರಿಗೆ ಪ್ರಥಮ್ ಹಾರ ಹಾಕಿದರು.

ಶಾಲಿನಿಗೆ ಮಸಿ ಬಳಿದ ಪ್ರಥಮ್

''ಭುವನ್ ಗೆ ಪ್ರಥಮ್ ಮಸಿ ಬಳಿಯುತ್ತಾರೆ'' ಅಂತ ಎಲ್ಲರೂ ಅಂದುಕೊಂಡರೂ, ಅವರು ಮಸಿ ಬಳಿದದ್ದು ಮಾತ್ರ ಶಾಲಿನಿಗೆ. ಅದರಲ್ಲೂ ಕೆಲವರ ಪರ ಶಾಲಿನಿ ಸಾಫ್ಟ್ ಕಾರ್ನರ್ ತೋರಿಸುತ್ತಾರೆ ಎಂಬ ಕಾರಣಕ್ಕೆ.!

ಹಾರಗಳು ಯಾರ್ಯಾರಿಗೆ.?

ರೇಖಾಗೆ ಕೀರ್ತಿ ಮತ್ತು ಶಾಲಿನಿ ಹಾರ ಹಾಕಿದರೆ, ಮೋಹನ್ ಗೆ ಭುವನ್, ಕೀರ್ತಿಗೆ ಮೋಹನ್, ಶಾಲಿನಿಗೆ ಮಾಳವಿಕಾ, ಭುವನ್ ಗೆ ರೇಖಾ, ಮಾಳವಿಕಾಗೆ ಪ್ರಥಮ್ ಹಾರ ಹಾಕಿದರು.

ಶಾಲಿನಿ-ಮಾಳವಿಕಾ ಮುಖಕ್ಕೆ ಮಸಿ

ಪ್ರಥಮ್ ಜೊತೆಗೆ ಶಾಲಿನಿ ಮತ್ತು ಮಾಳವಿಕಾ ಮುಖಕ್ಕೂ ಮಸಿ ಮೆತ್ತಿಕೊಳ್ತು.

English summary
Bigg Boss Kannada 4, Week 13 : Kannada Director Pratham was inked by other Contestants. Read the article to know what all happened on Day 85 in #BBK4.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada