»   » 'ಬಿಗ್ ಬಾಸ್' ಮನೆಯಿಂದ ಭುವನ್ ಔಟ್, 99 ದಿನಗಳ ಆಟ ಅಂತ್ಯ

'ಬಿಗ್ ಬಾಸ್' ಮನೆಯಿಂದ ಭುವನ್ ಔಟ್, 99 ದಿನಗಳ ಆಟ ಅಂತ್ಯ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ನಟ ಭುವನ್ ಪೊನ್ನಣ್ಣ ಹೊರಬಂದಿದ್ದಾರೆ. 'ಬಿಗ್ ಬಾಸ್'ನಲ್ಲಿ ಲವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಂಡಿದ್ದ ಭುವನ್ ತಮ್ಮ ಆಟವನ್ನ 99 ನೇ ದಿನಗಳಿಗೆ ಮುಗಿಸಿದ್ದಾರೆ. ಈ ಮೂಲಕ 14 ವಾರಗಳ ಯಶಸ್ವಿ ಆಟವಾಡಿದ ಭುವನ್ ಅವರ ಫೈನಲ್ ಕನಸು ಭಗ್ನವಾಗಿದೆ.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ ! ]

ಅಂದ್ಹಾಗೆ, ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಸರ್ಪ್ರೈಸ್ ನಾಮಿನೇಷನ್ ಆಗಿತ್ತು. ಮನೆಯಲ್ಲಿ ಉಳಿಯಲು ಮೋಹನ್, ಹಾಗೂ ಶಾಲಿನಿ ಅತಿ ಹೆಚ್ಚು ಪಡೆದು ಸೇಫ್ ಆಗಿದ್ದರು. ಕೀರ್ತಿ ಕ್ಯಾಪ್ಟನ್ ಆಗಿದ್ದರಿಂದ ಸೇಫ್ ಆಗಿದ್ದರು. ಹೀಗಾಗಿ, ಮಾಳವಿಕಾ, ಪ್ರಥಮ್, ರೇಖಾ ಹಾಗೂ ಭುವನ್ ಪೊನ್ನಣ್ಣ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆದ್ರೆ, ವೀಕ್ಷಕರಿಂದ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಭುವನ್ ಪೊನ್ನಣ್ಣ 'ಬಿಗ್' ಮನೆಯಿಂದ ಔಟ್ ಆಗಿದ್ದಾರೆ.[ಈ ವಾರ ಸರ್ಪ್ರೈಸ್ ನಾಮಿನೇಷನ್! ಸೇಫ್ ಆದ ರೇಖಾ ಮತ್ತೆ ನಾಮಿನೇಟ್ ಆಗಿದ್ದೇಕೆ?]

Bigg Boss Kannada 4: Week 14- Bhuvan Ponnanna eliminated

''ಬಿಗ್ ಬಾಸ್' ಮನೆಯಲ್ಲಿ 5-6 ವಾರ ಇರುತ್ತೇನೆ ಎಂದುಕೊಂಡಿದ್ದೆ. ಆದರೆ, 99 ದಿನಗಳ ಕಾಲ ಮನೆಯಲ್ಲಿದ್ದೇನೆ. ಜೀವನದಲ್ಲಿ ನನಗೆ ನಾನೇ ಚಾಲೆಂಜ್ ಹಾಕಿಕೊಂಡೆ. ಬೇರೆ, ಬೇರೆ ಕ್ಷೇತ್ರಗಳ ಜನರೊಂದಿಗೆ ಬೆರೆತು, ವಿಭಿನ್ನ ಅನುಭವ ಪಡೆದಿದ್ದೇನೆ. ಖುಷಿಯಿಂದಲೇ ಹೋಗುತ್ತೇನೆ'' ಎಂದು ಭುವನ್ ಹೇಳಿದರು.[ಭುವನ್ ಗೆ ಎಲಿಮಿನೇಷನ್ ಬಿಸಿ ಮುಟ್ಟಿಸಿದ ಕಿಚ್ಚ: ಕಣ್ಣೀರಿಟ್ಟ ಸಂಜನಾ]

'ಬಿಗ್ ಬಾಸ್' ಮನೆಯಿಂದ ಹೊರ ಬಂದ ಭುವನ್ ಪೊನ್ನಣ್ಣ ಅವರಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರವೊಂದನ್ನ ನೀಡಿತ್ತು. 'ಬಿಗ್ ಬಾಸ್' ಸೂಚನೆಯಂತೆ ಒಬ್ಬ ಅಭ್ಯರ್ಥಿಯನ್ನ ಫಿನಾಲೆಗೆ ಆಯ್ಕೆ ಮಾಡಬೇಕಿತ್ತು. ಹೀಗಾಗಿ, ಭುವನ್ ಅವರು, ಮೋಹನ್ ಅವರನ್ನ ಹೆಸರನ್ನ ಸೂಚಿಸಿದರು. ಈ ಮೂಲಕ 'ಬಿಗ್ ಬಾಸ್ ಕನ್ನಡ-4' ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಸದಸ್ಯ ಮೋಹನ್ ಆಗಿದ್ದಾರೆ.

English summary
Bigg Boss Kannada 4, Week 14: Kannada Actor Bhuvan Ponnanna is eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada