»   » ಮತ್ತೆ ಬಂದ ಮಾಳವಿಕಾ; ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ ಸ್ತಬ್ಧ.!

ಮತ್ತೆ ಬಂದ ಮಾಳವಿಕಾ; ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ ಸ್ತಬ್ಧ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ನಟಿ ಮಾಳವಿಕಾ ಅವಿನಾಶ್ ಔಟ್ ಎಂದು ಭಾವಿಸಿ ''ಗೆಲ್ಲುವ ಚಾನ್ಸ್ ನನಗೆ ಜಾಸ್ತಿ'' ಅಂತ ಇಷ್ಟು ದಿನ ಬೀಗಿದವರ ಬಾಯಿಗೆ ಇದೀಗ ಗೋದ್ರೆಜ್ ಬೀಗ ಜಡಿದಂತಾಗಿದೆ. ಯಾಕಂದ್ರೆ, 'ಬಿಗ್ ಬಾಸ್' ಮನೆಯೊಳಗೆ ಮತ್ತೆ ಮಾಳವಿಕಾ ಪ್ರತ್ಯಕ್ಷವಾಗಿದ್ದಾರೆ.[ಪ್ರಥಮ್, ಮಾಳವಿಕಾ ಎಲಿಮಿನೇಷನ್ ನಾಟಕಕ್ಕೆ 'ಬಿಗ್' ಟ್ವಿಸ್ಟ್!]

ಮೂರ್ನಾಲ್ಕು ದಿನ ದೊಡ್ಮನೆಯ ಗ್ಯಾರೇಜ್ (ಸೀಕ್ರೆಟ್ ರೂಮ್)ನಲ್ಲಿದ್ದು, ಮನೆಯವರ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿದ್ದ ಮಾಳವಿಕಾ, ನಿನ್ನೆ 'ಬಿಗ್ ಬಾಸ್' ಆದೇಶದ ಪ್ರಕಾರ ಮನೆಯೊಳಗೆ ಕಾಲಿಟ್ಟಿದ್ದಾರೆ. ಆಗಲೇ ನೋಡಿ ಉಳಿದ ಐದು ಸ್ಪರ್ಧಿಗಳ ಎದೆಯಲ್ಲಿ ಪುಕ..ಪುಕ.. ಶುರುವಾಗಿದ್ದು..!

ಮೊದಲೇ ಕಷ್ಟ ಎನ್ನುತ್ತಿದ್ದ ಮೋಹನ್.!

''ಬಿಗ್ ಬಾಸ್' ಕಾರ್ಯಕ್ರಮ 16 ವಾರ ಎಕ್ಸ್ ಟೆಂಡ್ ಆಗಿರುವುದು ನಿಜವೇ ಅದರೆ.. ತುಂಬಾ ಕಷ್ಟ'' ಅಂತ ಬೆಳ್ಳಂಬೆಳಗ್ಗೆಯೇ ಮೋಹನ್ ಗೊಣಗುತ್ತಾ ಕೂತಿದ್ದರು.[ಖುಷಿಯಲ್ಲಿ ಮಸ್ತಿ ಮಾಡ್ತಿದ್ದೋರಿಗೆ ಶಾಕ್ ಸಿಕ್ಕಾಗ ಮಾತೇ ಬರ್ಲಿಲ್ಲ.!]

ಮಾಳವಿಕಾ ಎಂಟ್ರಿ

94 ನೇ ದಿನ ಸಂಜೆ 4.40ಕ್ಕೆ ಮಾಳವಿಕಾ ಅವಿನಾಶ್ 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಟ್ಟರು.['ಬಿಗ್ ಬಾಸ್' ಮನೆಯಲ್ಲಿ ಸಕಲ ಇಷ್ಟಾರ್ಥ ನೆರವೇರಿಸಿಕೊಂಡ ಪ್ರಥಮ್!]

ಮೋಹನ್ ಮೂಕ ಪ್ರೇಕ್ಷಕ

ಮಾಳವಿಕಾ ರೀ ಎಂಟ್ರಿಕೊಟ್ಟಿದ್ದನ್ನ ನೋಡಿ ಮೋಹನ್ ಗೆ ಮಾತೇ ಬರಲಿಲ್ಲ. ['ಬಿಗ್ ಬಾಸ್' ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ.?]

ಶಾಲಿನಿಗೆ ಶಾಕ್

ಶಾಲಿನಿ ಕೂಡ ಮಾಳವಿಕಾ ರವರನ್ನ ನೋಡಿ ಶಾಕ್ ಆಗ್ಬಿಟ್ರು.

'ಸಣ್ಣ ಆಗಿದ್ಯಾ' ಎಂದ ಶ್ರುತಿ

ಮಾಳವಿಕಾ ಅವಿನಾಶ್ ಎಂಟ್ರಿಕೊಟ್ಟ ಮೇಲೆ ನಟಿ ಶ್ರುತಿ ಯೋಗಕ್ಷೇಮ ವಿಚಾರಿಸಿದರು.

ಇನ್ನೊಂದು ಆಟಂ ಬಾಂಬ್ ಬರುತ್ತೆ.!

ಮಾಳವಿಕಾ ಅವಿನಾಶ್ ಕಾಲಿಟ್ಟ ಬಳಿಕ ''ಇನ್ನೊಂದು ಆಟಂ ಬಾಂಬ್ ಬರುತ್ತೆ. ನಾನು ಮಜಾ ತೆಗೆದುಕೊಳ್ಳಬೇಕು'' ಅಂತ ಅಯ್ಯಪ್ಪ ಹೇಳ್ತಿದ್ರು.

ಡೌಟ್ ನಲ್ಲಿ ಇದ್ದಾರಂತೆ.!

''ಪ್ರಥಮ್ ನೂ ಆ ಕಡೆಯಿಂದ ಕಳುಹಿಸಿಬಿಡಬೇಕಾಗಿತ್ತಲ್ಲ' ಅಂತ ಮೋಹನ್ ಕೂಡ ಡೌಟ್ ನಲ್ಲಿದ್ದಾರೆ'' ಅಂತ ಅಯ್ಯಪ್ಪ ಬಳಿ ರಿಶಿಕಾ ಹೇಳಿದ್ರು.

ಮೂಡ್ ಆಫ್ ಆಗಿದ್ದಾರಂತೆ.!

''ಮಾಳವಿಕಾ ಬಂದ್ಮೇಲೆ ಪ್ರಥಮ್ ಕೂಡ ಬರಬಹುದು ಅಂತ ಎಲ್ಲರೂ ಮೂಡ್ ಆಫ್ ಆಗಿದ್ದಾರೆ'' ಅಂತ ಅಯ್ಯಪ್ಪ, ರಿಶಿಕಾ ಬಳಿ ಹೇಳಿದವರು ನೀತು.

ಆರ್ಡರ್ ಈಸ್ ಪಾಸ್ಡ್..!

ಅಯ್ಯಪ್ಪ - ಆಟಂ ಬಾಂಬ್ ಬರಬೇಕು

ರಿಶಿಕಾ - ಅವನು ಹಾಗೇ ಬರ್ತಾನೆ... ಆರ್ಡರ್ ಈಸ್ ಪಾಸ್ಡ್... ಆರ್ಡರ್ ಈಸ್ ಪಾಸ್ಡ್ ಅಂತ. ಬೇಗ ಬರಲಿ

ನೀತು - ಪಾಪಾ... ಎಲ್ಲರ ಜೋಶ್ ಕಮ್ಮಿ ಆಗ್ಬಿಡ್ತು

ರಿಶಿಕಾ - ಒಳ್ಳೆ ಮಜಾ ತೆಗೆದುಕೊಳ್ಳಬೇಕು

ಎರಡು ದಿನದ ಸ್ಟೋರಿ ಹೇಳಿ...

ಮಾಳವಿಕಾ ಬಂದ್ಮೇಲೆ ಶಾಲಿನಿ ಮತ್ತು ಕೀರ್ತಿ ''ಎರಡು ದಿನದ ಸ್ಟೋರಿ ಹೇಳಿ'' ಅಂತ ಬೆನ್ನುಬಿದ್ದರು.

ಪ್ರಥಮ್ ಕೂಡ ಬರ್ತಾನಾ?

''ಪ್ರಥಮ್ ಕೂಡ ಬರ್ತಾನೋ ಈಗ.?'' ಎಂಬ ಪ್ರಶ್ನೆಯನ್ನ ಮಾಳವಿಕಾ ಬಳಿ ಶಾಲಿನಿ ಡೈರೆಕ್ಟ್ ಆಗೇ ಕೇಳಿದರು.

ಡೈರೆಕ್ಷನ್ ಆಗ್ಹೋಗಿದೆ.!

ಮಾಳವಿಕಾ ಒಬ್ಬರೇ ಬಂದಿರೋದ್ರಿಂದ ಅವರೊಬ್ಬರೇ ಸೀಕ್ರೆಟ್ ರೂಮ್ ನಲ್ಲಿದ್ದರು ಅಂತ ಶಾಲಿನಿ, ಕೀರ್ತಿ ಲೆಕ್ಕಾಚಾರ ಮಾಡಿಬಿಟ್ಟಿದ್ದಾರೆ.

ಜಾತ್ರೆ ಮಾಡ್ತಾರಾ?

''ಇಬ್ಬರಿಗೆ ಬಗ್ಗಿಸಿ ಬರೆ ಹಾಕಿ ಕಳುಹಿಸ್ತಾರೆ. ಆರು ಜನ ಇಟ್ಕೊಂಡು ಜಾತ್ರೆ ಮಾಡುತ್ತಾರಾ?'' ಎನ್ನುತ್ತಾ ಮೋಹನ್ ಮುಂದಾಲೋಚನೆಯಲ್ಲಿ ತೊಡಗಿದ್ದರು.

English summary
Bigg Boss Kannada 4: Week 14, Kannada Actress Malavika Avinash re-enters the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada