»   » 'ಬಿಗ್ ಬಾಸ್' ಮನೆಗೆ 'ಕರೆಂಟ್' ಬಂದ ಹಾಗೆ ಬಂದ ಓಂ ಪ್ರಕಾಶ್ ರಾವ್.!

'ಬಿಗ್ ಬಾಸ್' ಮನೆಗೆ 'ಕರೆಂಟ್' ಬಂದ ಹಾಗೆ ಬಂದ ಓಂ ಪ್ರಕಾಶ್ ರಾವ್.!

Posted By:
Subscribe to Filmibeat Kannada

ಮಧ್ಯರಾತ್ರಿ 2.30 ರ ಸುಮಾರಿಗೆ 'ಲಾಕಪ್ ಡೆತ್' ಚಿತ್ರದ 'ಬಂತು ಬಂತು ಕರೆಂಟ್ ಬಂತು...' ಹಾಡು ಪ್ಲೇ ಆಗ್ತಿದ್ದ ಹಾಗೆ, ಅದೇ 'ಲಾಕಪ್ ಡೆತ್' ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್ 'ಬಿಗ್ ಬಾಸ್' ಮನೆಗೆ 'ಸ್ಪರ್ಧಿ'ಯಾಗಿ ಗೃಹ ಪ್ರವೇಶ ಮಾಡಿದರು.

ಇಪ್ಪತ್ತೈದು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿರುವ ಓಂ ಪ್ರಕಾಶ್ ರಾವ್, 'ಹುಚ್ಚ', 'ಸಿಂಹದ ಮರಿ', 'ಎ.ಕೆ.47', 'ಕಲಾಸಿಪಾಳ್ಯ' ಸೇರಿದಂತೆ ಅನೇಕ ಚಿತ್ರಗಳ ಸೂತ್ರಧಾರ.

ನಿರ್ದೇಶಕ ಓಂ ಪ್ರಕಾಶ್ ರಾವ್ ಕುರಿತು

ಖ್ಯಾತ ಕಾಮಿಡಿ ನಟ ಎನ್.ಎಸ್.ರಾವ್ ಮತ್ತು ಯಶೋದಮ್ಮ ದಂಪತಿಯ ಪುತ್ರ ಈ ಓಂ ಪ್ರಕಾಶ್ ರಾವ್.

ಕಾಂಟ್ರವರ್ಸಿ ಕಿಂಗ್

ನಿರ್ದೇಶಕ ಓಂ ಪ್ರಕಾಶ್ ರಾವ್ 'ವಿವಾದ'ಗಳಲ್ಲೂ ಹೆಸರುವಾಸಿ. ಓಂ ಪ್ರಕಾಶ್ ರವರ ವಿವಾದಗಳು ನಿಮಗೆ ಗೊತ್ತಿಲ್ಲ ಅಂದ್ರೆ ಈ ಲಿಂಕ್ ಮಾಡಿ, ಓದಿರಿ...['ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9]

'ಬಿಗ್ ಬಾಸ್' ಸ್ಪರ್ಧಿಗಳಿಗೆ ಮೀಟರ್ ಆಫ್ ಆಗಿದೆ

ಬಹುಶಃ ಇದೇ ಕಾರಣಕ್ಕೋ ಏನೋ, 'ಬಿಗ್ ಬಾಸ್' ಮನೆಯೊಳಗೆ ಓಂ ಪ್ರಕಾಶ್ ರಾವ್ ರವರನ್ನ ನೋಡಿದ ತಕ್ಷಣ ಅನೇಕರಿಗೆ ಮೀಟರ್ ಆಫ್ ಆಗಿದೆ. [ಇನ್ನೊಂದು ಎಡವಟ್ಟು ಮಾಡಿಕೊಂಡ ಓಂಪ್ರಕಾಶ್ ರಾವ್]

ಮಂಚದಿಂದ ಕೆಳಗೆ ಇಳಿಯದ ಪ್ರಥಮ್

'ಬಿಗ್ ಬಾಸ್' ಮನೆಯೊಳಗೆ ಓಂ ಪ್ರಕಾಶ್ ರಾವ್ ಎಂಟ್ರಿಕೊಟ್ಟ ತಕ್ಷಣ ಅವರನ್ನ ಎಲ್ಲರೂ ಮಾತನಾಡಿಸಿದರು. ಆದ್ರೆ, 'ಒಳ್ಳೆ ಹುಡುಗ' ಪ್ರಥಮ್ ಅಂತೂ ಮಂಚ ಬಿಟ್ಟು ಕೆಳಗೆ ಇಳಿಯಲೇ ಇಲ್ಲ. ಬೆಳಗ್ಗೆ ಮಾತನಾಡುತ್ತೇನೆ ಅಂತ ಮಲಗಿಬಿಟ್ಟರು. ['ಹುಚ್ಚ' ಓಂ ಪ್ರಕಾಶ್ರಾವ್ಗೆ 'ಕಿಚ್ಚ' ಸುದೀಪ್ ಮತ್ತೆ ಸಿಕ್ಕಲ್ವಾ?]

ಮಾಳವಿಕಾ ಅವಿನಾಶ್ ಗೆ ಚಮಕ್

'ಬಿಗ್ ಬಾಸ್' ಮನೆಗೆ ಎಂಟ್ರಿ ಆಗ್ತಿದ್ದಂತೆ ನಟಿ ಮಾಳವಿಕಾ ಅವಿನಾಶ್ ರವರಿಗೆ ''ನಿಮ್ಮ ಲವ್ವರ್ ನಿಮ್ಮನ್ನ ಕೇಳ್ತಿದ್ರು'' ಅಂತ್ಹೇಳಿ ನಿರ್ದೇಶಕ ಓಂ ಪ್ರಕಾಶ್ ರಾವ್ ಚಮಕ್ ನೀಡಿದರು. ಬಳಿಕ ''ಅವಿನಾಶ್ ರವರು ಕೇಳ್ತಿದ್ರು'' ಅಂತ ಓಂ ಪ್ರಕಾಶ್ ರಾವ್ ಸ್ಪಷ್ಟನೆ ಕೊಟ್ಟ ಬಳಿಕ ಮಾಳವಿಕಾ ಮೊಗದಲ್ಲಿ ಮಂದಹಾಸ ಮೂಡಿತು.

ಅಸಲಿ ಆಟ ಈಗ ಶುರು?

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ 'ಖಾಲಿ ಪಲಾವ್' ಆಯ್ತಲ್ಲಾ ಅಂತ ವೀಕ್ಷಕರು ಗೊಣಗುತ್ತಿರುವಾಗಲೇ ಓಂ ಪ್ರಕಾಶ್ ರಾವ್ ಎಂಟ್ರಿಕೊಟ್ಟಿರುವುದು ಕುತೂಹಲ ಮೂಡಿಸಿದೆ. ಇನ್ನಾದರೂ, ಅಸಲಿ ಆಟ ಶುರು ಆಗುತ್ತಾ, ನೋಡೋಣ....

['ಬಿಗ್ ಬಾಸ್ ಕನ್ನಡ-4' ಕುರಿತ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

English summary
Bigg Boss Kannada 4, Week 2 : Kannada Director Om Prakash Rao makes entry into Bigg Boss House as contestant.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada