»   » 'ಬಿಗ್ ಬಾಸ್ ಕನ್ನಡ-4' ಆಟದಿಂದ ಹೊರಬಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್

'ಬಿಗ್ ಬಾಸ್ ಕನ್ನಡ-4' ಆಟದಿಂದ ಹೊರಬಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಆಟದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ಹೊರಬಿದ್ದಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದ ಎರಡು ದಿನಗಳ ಹಿಂದೆ 'ಬಿಗ್ ಬಾಸ್' ಮನೆಯಿಂದ ಹೊರ ಬಂದಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ರವರನ್ನ ಎಲಿಮಿನೇಟ್ ಮಾಡಲಾಗಿದೆ.

'ಬಿಗ್ ಬಾಸ್' ಮನೆಯಿಂದ ಏಳನೇ ವಾರ ನಟಿ ಸಂಜನಾ ನಿರ್ಗಮಿಸುತ್ತಾರೆ ಎಂಬ ಗಾಸಿಪ್ ನಿನ್ನೆ ಎಲ್ಲಾ ಕಡೆ ಹಬ್ಬಿತ್ತು. ಆದ್ರೆ, ಕಡೆಗೆ ಓಂ ಪ್ರಕಾಶ್ ರಾವ್ ರವರನ್ನ ಔಟ್ ಮಾಡಲಾಗಿದೆ ಅಂತ ಕಿಚ್ಚ ಸುದೀಪ್ ಘೋಷಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓಂ ಪ್ರಕಾಶ್ ರಾವ್

ವಿಪರೀತ ಕಾಲು ನೋವು ಕಾಣಿಸಿಕೊಂಡ ಪರಿಣಾಮ, ನಿರ್ದೇಶಕ ಓಂ ಪ್ರಕಾಶ್ ರಾವ್ ರವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಓಂ ಪ್ರಕಾಶ್ ರಾವ್ ಚಿಕಿತ್ಸೆ ಪಡೆಯುತ್ತಿದ್ದಾರೆ. ['ಬಿಗ್ ಬಾಸ್' ಮನೆಗೆ 'ಕರೆಂಟ್' ಬಂದ ಹಾಗೆ ಬಂದ ಓಂ ಪ್ರಕಾಶ್ ರಾವ್.!]

ಏಳು ಮಂದಿ ನಾಮಿನೇಟ್ ಆಗಿದ್ದರು.!

ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದರು. [ಓಂ ಪ್ರಕಾಶ್ ರಾವ್ ಮುಂಗೋಪಿ: ತಲೆ ಕೆಟ್ಟರೆ, ಒದೆ ಗ್ಯಾರೆಂಟಿ.!]

ಯಾರ್ಯಾರು.?

ಪ್ರಥಮ್, ಸಂಜನಾ, ನಿರಂಜನ್ ದೇಶಪಾಂಡೆ, ಮಾಳವಿಕಾ, ರೇಖಾ, ಮೋಹನ್ ಮತ್ತು ಓಂ ಪ್ರಕಾಶ್ ರಾವ್ ಈ ವಾರ ನಾಮಿನೇಟ್ ಆಗಿದ್ದರು. ['ಬಿಗ್ ಬಾಸ್ ಕನ್ನಡ-4': ಈ ವಾರ ಯಾರು ಔಟ್ ಆಗ್ಬೇಕು.?]

ಕಡಿಮೆ ಎಸ್.ಎಂ.ಎಸ್ ಪಡೆದಿದ್ದ ಓಂ ಪ್ರಕಾಶ್ ರಾವ್

ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದಿದ್ದರಿಂದ ಓಂ ಪ್ರಕಾಶ್ ರಾವ್ ರವರಿಗೆ ಗೇಟ್ ಪಾಸ್ ಸಿಕ್ಕಿದೆ.

'ಕಿರಿಕ್' ಕೀರ್ತಿ ಕಾರಣ.!

'ಕಿರಿಕ್' ಕೀರ್ತಿ ಮತ್ತು ಸಂಜನಾ ಜೋಡಿ ಮಾತ್ರ ಈ ವಾರ ನಿರ್ದೇಶಕ ಓಂ ಪ್ರಕಾಶ್ ರಾವ್ ರವರನ್ನ ನಾಮಿನೇಟ್ ಮಾಡಿದ್ದರು. ಒಂದು ವೋಟ್ ನಿಂದ ಡೇಂಜರ್ ಝೋನ್ ಗೆ ಬಂದಿದ್ದ ಓಂ ಪ್ರಕಾಶ್ ರಾವ್ 'ಬಿಗ್ ಬಾಸ್' ಮನೆಯಿಂದ ನಿರ್ಗಮಿಸುವಂತಾಯ್ತು.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಆದ ಒಂದು ವಾರ ಬಳಿಕ ನಿರ್ದೇಶಕ ಓಂ ಪ್ರಕಾಶ್ ರಾವ್ 'ಬಿಗ್ ಬಾಸ್' ಮನೆ ಪ್ರವೇಶಿಸಿದರು. ಯಾವುದೇ ವಿವಾದ, ಜಗಳಗಳಿಗೆ ನಾಂದಿ ಹಾಡದೆ ತಮ್ಮ ಪಾಡಿಗೆ ತಾವು ಇದ್ದರು ನಿರ್ದೇಶಕ ಓಂ ಪ್ರಕಾಶ್ ರಾವ್

English summary
Bigg Boss Kannada 4, Week 7 : Director Om Prakash Rao is eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada