Just In
Don't Miss!
- News
ನಂದಿಬೆಟ್ಟಕ್ಕೆ ರೋಪ್ ವೇ; ದಶಕಗಳ ಕನಸಿನ ಯೋಜನೆ ಹೇಗಿರಲಿದೆ?
- Sports
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ, ಸಂಪೂರ್ಣ ಮಾಹಿತಿ
- Automobiles
ಪ್ರೀಮಿಯಂ ಹ್ಯಾಚ್ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
1 ವಾರದಲ್ಲಿ 27 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಿಯಾಝ್ ಔಟ್ ಆಗಿದ್ದು ಯಾಕೆ.? ವೀಕ್ಷಕರೇ ಕೊಟ್ಟ ಹತ್ತು ಕಾರಣಗಳಿವು.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹದಿಮೂರನೇ ವಾರ 'ಕಾಮನ್ ಮ್ಯಾನ್' ರಿಯಾಝ್ ಔಟ್ ಆದರು. ಹಾಗ್ನೋಡಿದ್ರೆ, 'ಬಿಗ್ ಬಾಸ್' ಶೋ ಶುರು ಆದಾಗ, ರಿಯಾಝ್ ಗ್ರ್ಯಾಂಡ್ ಫಿನಾಲೆ ವರೆಗೂ ಬಂದೇ ಬರುತ್ತಾರೆ ಅಂತ ವೀಕ್ಷಕರು ಊಹಿಸಿದ್ದರು.
ರಿಯಾಝ್, ದಿವಾಕರ್, ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಕೂಡ ಆರಂಭ ಆಯ್ತು. 'ಬಿಗ್ ಬಾಸ್ ಕನ್ನಡ-5' ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ರಿಯಾಝ್ ಹೊರ ಹೊಮ್ಮುತ್ತಿರುವಾಗಲೇ, ಎಲಿಮಿನೇಟ್ ಆಗ್ಬಿಟ್ಟರು.
ಇದಕ್ಕೆ ಕಾರಣ ಏನಿರಬಹುದು.? ಮಾತ್ತೆತ್ತಿದ್ರೆ ರೂಲ್ಸ್ ಬಗ್ಗೆ ಮಾತನಾಡುತ್ತಿದ್ದ ರಿಯಾಝ್ ಗೆ ಅದೇ ರೂಲ್ಸ್ ಪೆಟ್ಟಾಯ್ತಾ.? 'ಕಾಮನ್ ಮ್ಯಾನ್' ಗುಂಪಲ್ಲಿ ಬಿರುಕು ಮೂಡಿದ್ದೇ ರಿಯಾಝ್ ನಿರ್ಗಮನಕ್ಕೆ ಕಾರಣ ಆಯ್ತಾ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನ ತಪ್ಪದೇ ವೀಕ್ಷಿಸುವ ಸಹನಾ ಸಾಗರ್ ಎಂಬುವರು ರಿಯಾಝ್ ಔಟ್ ಆಗಿದ್ದು ಏಕೆ ಎಂಬುದಕ್ಕೆ ಕೆಲವು ಕಾರಣಗಳನ್ನ ಪಟ್ಟಿ ಮಾಡಿದ್ದಾರೆ. ಅದನ್ನ ನೀವೇ ಓದಿರಿ...

ರಿಯಾಝ್ ಔಟ್ ಆಗಿದ್ದು ಉತ್ತಮ ನಿರ್ಧಾರ.!
''ರಿಯಾಝ್ ನ ಎಲಿಮಿನೇಟ್ ಮಾಡಿದ್ದು ಸರಿಯಾದ ನಿರ್ಧಾರ. ಆದರೆ ಸ್ವಲ್ಪ ತಡವಾಗಿ ಎಲಿಮಿನೇಟ್ ಆಗಿದ್ದಾರೆ. ರಿಯಾಝ್ ಒಬ್ಬ ಒಳ್ಳೆಯ ಸ್ಪರ್ಧಿ ಮತ್ತು ಉತ್ತಮ ಮಾತುಗಾರ. ಆದರೆ ಅವರು ಮಾಡಿದ ಹಲವಾರು ತಪ್ಪುಗಳೇ ಎಲಿಮಿನೇಟ್ ಆಗೋಕೆ ಕಾರಣ'' - ಸಹನಾ ಸಾಗರ್
'ಬಿಗ್ ಬಾಸ್' ಮನೆಯಿಂದ ಹೊರ ಬಂದ ರಿಯಾಝ್ ಬಾಷಾ

ಬೇರೆಯವರಿಗೆ ಮಾತ್ರ ರೂಲ್ಸ್.
''ಬೇರೆಯವರು ರೂಲ್ಸ್ ನ ಪಾಲಿಸಬೇಕು ಅಂತ ರಿಯಾಝ್ ಒತ್ತಾಯ ಮಾಡುತ್ತಿದ್ದರು. ಆದರೆ ರೂಲ್ಸ್ ಅವರಿಗೆ ಮಾತ್ರ ಅಪ್ಲೈ ಆಗೊಲ್ಲ ಅನ್ನೋ ರೀತಿಯಲ್ಲಿ ಇರುತ್ತಿದ್ದರು'' - ಸಹನಾ ಸಾಗರ್
ಕಾಲಲ್ಲಿ ಒದ್ದು ಸಮೀರಾಚಾರ್ಯಗೆ ಬೇಷರತ್ ಕ್ಷಮೆ ಕೇಳಿದ ರಿಯಾಝ್

ಸ್ನೇಹಿತನಾಗಿ ನಡೆದುಕೊಂಡಿದ್ದು ಹೇಗೆ.?
''ಮಾತು ಮಾತಿಗೂ ಸಮೀರ್ ನನ್ನ ಸ್ನೇಹಿತ ಅಂತ ಕೇವಲ ಬಾಯಲ್ಲಿ ಹೇಳುತ್ತಿದ್ದರು. ಆದರೆ ಉತ್ತಮ ಸ್ನೇಹಿತನ ಹಾಗೆ ಯಾವತ್ತೂ ನಡೆದುಕೊಳ್ಳಲಿಲ್ಲ. ಸಮೀರ್ ಗೆ ಮೋಸಗಾರನ ಪಟ್ಟ ಕೊಟ್ಟರು. ಟಾಸ್ಕ್ ಶುರುವಾಗುವ ಮೊದಲೇ ಸಮೀರ್ ಗೆ ಕಳಪೆ ಬೋರ್ಡ್ ತಗೊಳೋಕೆ ರೆಡಿಯಾಗಿ ಎಂದು ಹೇಳಿದ್ದರು. ಆದರೆ ಸಮೀರ್ ಚೆನ್ನಾಗಿ ಟಾಸ್ಕ್ ಮಾಡಿದ್ದರೂ ಕಳಪೆ ಬೋರ್ಡ್ ಕೊಟ್ಟರು'' - ಸಹನಾ ಸಾಗರ್

ಈ ವರ್ತನೆ ಯಾಕೆ.?
''ಬಿಗ್ ಬಾಸ್'ನಲ್ಲಿ ಮ್ಯಾನ್ ಹ್ಯಾಂಡಲಿಂಗ್ ಮಾಡಬಾರದು ಅನ್ನೋ ರೂಲ್ಸ್ ಇದೆ. ಆದ್ರೆ ಸಂಯುಕ್ತ ಸಮೀರ್ ಗೆ ಹೊಡೆದಾಗ, ರಿಯಾಝ್ ಸಂಯುಕ್ತಗೆ ಸಮಾಧಾನ ಮಾಡಿದರು. ಆದರೆ ತಪ್ಪು ಮಾಡದೆ ಹೊಡೆತ ತಿಂದು ಬೇಸರದಲ್ಲಿದ್ದ ಸಮೀರ್ ಗೆ ರಿಯಾಝ್ ಒಂದೇ ಒಂದು ಸಮಾಧಾನದ ಮಾತನ್ನೂ ಆಡಲಿಲ್ಲ'' - ಸಹನಾ ಸಾಗರ್

ಪಶ್ಚಾತ್ತಾಪ ಆಗಲಿಲ್ಲ.!
''ಸ್ಪರ್ಧಿಗಳನ್ನು ಕುರ್ಚಿಯಿಂದ ಎಬ್ಬಿಸಬೇಕು ಎಂಬ ರೂಲ್ಸ್ ಇತ್ತು. ಆದರೆ ರಿಯಾಝ್ ಕುರ್ಚಿಯನ್ನು ಒದ್ದು, ಸಮೀರ್ ನ ಬೀಳಿಸಿ, ಕ್ಯಾಮರಾ ಮುಂದೆ ಯಾವ ಪಶ್ಚಾತ್ತಾಪವೂ ಇಲ್ಲದೆ ತನ್ನ ತಪ್ಪನ್ನು ಸಮರ್ಥನೆ ಮಾಡಿಕೊಂಡರು. ಬೈ ಮಿಸ್ಟೇಕ್ ದಿವಾಕರ್ ನಿಂದ ರಿಯಾಝ್ ಕೈಗೆ ಪೆಟ್ಟದಾಗ, ದಿವಾಕರ್ ಬೇಕು ಅಂತಲೇ ಪೆಟ್ಟು ಮಾಡಿದ ಎಂದು ಆರೋಪ ಮಾಡಿದ್ದರು. ಆದರೆ ರಿಯಾಝ್ ಇನ್ಟೆಂಷನಲ್ ಆಗಿ ಸಮೀರ್ ಗೆ ಒದ್ದರೂ, ಅದನ್ನು ಜಸ್ಟ್ ಪುಶ್ ಮಾಡಿದೆ ಎಂದು ಹೇಳಿದರು'' - ಸಹನಾ ಸಾಗರ್

ರಿಯಾಝ್ ಬಾಯಲ್ಲಿ ಬಂದ ಮಾತು...
''ರೈತರಿಗೆ ಸಹಾಯ ಮಾಡಲು ಹಣಕ್ಕಾಗಿ ಮೊಟ್ಟೆಗಳನ್ನು ತಿನ್ನಬೇಕು ಎಂದು ಸಮೀರ್ ಗೆ ರಿಯಾಝ್ ಸವಾಲು ಹಾಕಿದ್ದರು. ಆದರೆ ತಾವು ನಾನ್ ವೆಜ್ ತಿನ್ನೋದು ಬಿಟ್ಟು, ಅದರಿಂದ ಉಳಿತಾಯವಾದ ಹಣವನ್ನು ರೈತರಿಗೆ ಕೊಡುತ್ತೇನೆಂಬ ಮಾತು ರಿಯಾಝ್ ಬಾಯಲ್ಲಿ ಬರಲಿಲ್ಲ'' - ಸಹನಾ ಸಾಗರ್

ಮನೆ ಕಟ್ಟೋಕೆ ಗೆಲ್ಲಬೇಕಿತ್ತು.!
''ರಿಯಾಝ್ 5-6 ಕೋಟಿ ರೂಪಾಯಿಯ ಸದಾಶಿವನಗರದ ಸೈಟ್ ನಲ್ಲಿ ಮನೆ ಕಟ್ಟೋಕೆ ಗೆಲ್ಲಬೇಕಂತೆ. ಆದರೆ ಬೇರೆಯವರು ತಮ್ಮ ಕಷ್ಟಗಳಿಗೆ, ಬೇರೆಯವರ ಸಹಾಯ ಸೇವೆಗಳಿಗೆ ಗೆಲ್ಲಬಾರದು ಅಂತ ಯೋಚಿಸುತ್ತಾರೆ'' - ಸಹನಾ ಸಾಗರ್

ಫಿಟ್ಟಿಂಗ್ ಇಡುತ್ತಿದ್ದರು ರಿಯಾಝ್.!
''ಸಮೀರ್ ನ ಹತ್ತಿರ ಚಂದು & ನಿವೇದಿತಾ ಬಗ್ಗೆ, ಚಂದು ಹತ್ತಿರ ಸಮೀರ್ & ನಿವೇದಿತಾ ಬಗ್ಗೆ, ನಿವೇದಿತಾ ಹತ್ತಿರ ಸಮೀರ್ & ಚಂದು ಬಗ್ಗೆ ಕೆಟ್ಟ ಅಭಿಪ್ರಾಯ ಬರೋ ಹಾಗೆ ಫಿಟ್ಟಿಂಗ್ ಇಡುತ್ತಿದ್ದರು ರಿಯಾಝ್'' - ಸಹನಾ ಸಾಗರ್

'ಹಾರ-ಮಸಿ' ಟಾಸ್ಕ್ ನಲ್ಲಿ ಆಗಿದ್ದೇನು.?
''ಓಪನ್ ನಾಮಿನೇಷನ್ ನಲ್ಲಿ ಚಂದು, ರಿಯಾಝ್ ನ ಸೇವ್ ಮಾಡಿದಾಗ, ನಿನ್ನ ಭಿಕ್ಷೆ ನನಗೆ ಬೇಡ ಅನ್ನುವ ಅಹಂಕಾರದ ಮಾತನ್ನು ಆಡಿದರು. ಸಮೀರ್ ಹತ್ತಿರ ಅನುಪಮನ ಬಗ್ಗೆ ಕೆಟ್ಟದಾಗಿ ಮಾತನಾಡಿ, ಮಾರನೇ ದಿನ ಅನುಪಮ ಕ್ಯಾಪ್ಟನ್ ಆದಮೇಲೆ, ಅನುಗೆ ಹಾರ ಹಾಕಿ ಲಾಭ ತಗೊಳೋಕೆ ನೋಡಿದರು. ಆದರೆ ಹಾರ ಹಾಕಿದ್ದ ಸಮೀರ್ ಗೆ ಕಿತ್ತೋದ ಕಾರಣಗಳನ್ನು ಕೊಟ್ಟು ಮಸಿ ಹಚ್ಚಿದರು'' - ಸಹನಾ ಸಾಗರ್

ಸ್ವಂತ ಶ್ರಮದಿಂದ ಕ್ಯಾಪ್ಟನ್ ಆಗಿಲ್ಲ
''ರಿಯಾಝ್ ಎಲಿಮಿನೇಟ್ ಆದ ನಂತರ ಸುದೀಪ್ ಸರ್ ಜೊತೆ ಮಾತನಾಡುವಾಗ ಅನುಪಮಗೆ ನೌಟಂಕಿ, ನಾಟಕ ಅಂತ ಹೇಳಿದರು. ಆದರೆ ಅದೇ ಅನು ಗೆ ಒಳ್ಳೆಯವರು ಅಂತ ಹಾರ ಹಾಕಿದ್ದರು. ನಿವೇದಿತಾನ ಸ್ಮಾರ್ಟ್ ಫಾಕ್ಸ್ ಅಂತ ಹೇಳಿದರು. ಆದರೆ ರಿಯಾಜ಼್ ಟಾಸ್ಕ್ ನಲ್ಲಿ ಸ್ವಂತ ಶ್ರಮದಿಂದ 2 ಸಾರಿಯೂ ಕ್ಯಾಪ್ಟನ್ ಆಗಿರಲಿಲ್ಲ. ಅನುಪಮ & ನಿವೇದಿತಾ ಇಬ್ಬರ ಸಹಾಯದಿಂದ ರಿಯಾಜ಼್ 2 ಬಾರಿ ಕ್ಯಾಪ್ಟನ್ ಆಗಿದ್ದರು. ಆದರೆ ಹೊರಗಡೆ ಅವರಿಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿದರು'' - ಸಹನಾ ಸಾಗರ್

ತಾವೇ ಗುಂಡಿಯೊಳಗೆ ಬಿದ್ದರು
''ತನ್ನ ಲಾಭಕ್ಕಾಗಿ ಡ್ರಾಮಾ ಮಾಡುತ್ತಿದ್ದ, ಫಿಟ್ಟಿಂಗ್ ಇಡುತ್ತಿದ್ದ, ಕೆಲವು ಸಾರಿ ಫಿಟ್ಟಿಂಗ್ ಇಟ್ಟವರ ಹತ್ತಿರವೇ ಬಕೆಟ್ ಹಿಡಿಯುತ್ತಿದ್ದರು. ಇಂತಹ ಹಲವಾರು ತಪ್ಪುಗಳಿಂದಾಗಿ ತಮ್ಮ ಸೋಲಿಗೆ ತಾವೇ ಕಾರಣನಾದರು. ರಿಯಾಝ್ ಸೋಲಿಗೆ ಬೇರೆಯವರು ಕಾರಣರಾಗಲಿಲ್ಲ. ಬೇರೆಯವರನ್ನು ಗುಂಡಿಗೆ ತಳ್ಳೋಕೆ ಹೋಗಿ, ತಾವೇ ಗುಂಡಿಯೊಳಗೆ ಬಿದ್ದರು'' - ಸಹನಾ ಸಾಗರ್