»   » ಟಾರ್ಗೆಟ್ ಮಾಡಿ ಮಾತನಾಡಿದ ದಿವಾಕರ್ ಗೆ ಬುದ್ಧಿ ಹೇಳಿದ ಅಕುಲ್

ಟಾರ್ಗೆಟ್ ಮಾಡಿ ಮಾತನಾಡಿದ ದಿವಾಕರ್ ಗೆ ಬುದ್ಧಿ ಹೇಳಿದ ಅಕುಲ್

Posted By:
Subscribe to Filmibeat Kannada
ಟಾರ್ಗೆಟ್ ಮಾಡಿ ಮಾತನಾಡಿದ ದಿವಾಕರ್ ಗೆ ಬುದ್ಧಿ ಹೇಳಿದ ಅಕುಲ್ | Filmibeat Kannada

'ಬಿಗ್ ಬಾಸ್' ಮನೆಯಲ್ಲಿ 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದಾಗ... ಕರಡಿಯನ್ನು (ಸಮೀರಾಚಾರ್ಯ) ಸೆರೆ ಹಿಡಿಯುತ್ತಿದ್ದಾಗ... ದಿವಾಕರ್ ನಡೆದುಕೊಂಡ ರೀತಿ 'ಮಾಸ್ಟರ್' ಅಕುಲ್ ಬಾಲಾಜಿಗೆ ಕೊಂಚ ಕೂಡ ಇಷ್ಟ ಆಗ್ಲಿಲ್ಲ.!

ಕರಡಿ (ಸಮೀರಾಚಾರ್ಯ) ಹಾಗೂ ಬೆಟ್ಟಪ್ಪ (ರಿಯಾಝ್) ಮಧ್ಯೆ ಜಟಾಪಟಿ ನಡೆಯುತ್ತಿದ್ದರೆ, ಮಧ್ಯದಲ್ಲಿ ಮೂಗು ತೂರಿಸಿದ ದಿವಾಕರ್ ಬೇಕಾಬಿಟ್ಟಿ ಮಾತನಾಡಿದರು.

'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

''ಕ್ಯಾಮರಾ ಮುಂದೆ ರಿಯಾಝ್ ಡ್ರಾಮಾ ಮಾಡ್ತಿದ್ದಾರೆ'' ಅಂತೆಲ್ಲ ಆರೋಪ ಮಾಡಿದ ದಿವಾಕರ್, 'ಥೂ' ಎಂದು ಉಗಿದರು. ಸಂಬಂಧ ಇಲ್ಲದ ವಿಚಾರಕ್ಕೆ ಮಧ್ಯ ಪ್ರವೇಶಿಸಿ ಇಷ್ಟೆಲ್ಲ ರಾದ್ಧಾಂತ ಮಾಡಿದ ದಿವಾಕರ್ ಗೆ ಅಕುಲ್ ಬುದ್ದಿ ಹೇಳಿದರು. ಮುಂದೆ ಓದಿರಿ....

ದಿವಾಕರ್ ಗೆ ಬುದ್ಧಿ ಹೇಳಿದ ಅಕುಲ್

''ಅಲ್ಲಿ ಏನೆಲ್ಲ ಮಾತುಗಳು ಬಂತು ಅಂತ ನಿಮ್ಗೆ ಗೊತ್ತಾ.? ಅಲ್ಲಿ ಎಳೆಯುತ್ತಿರುವುದು ನಿಮ್ಮನ್ನಲ್ಲ. ಕಾಡು ಪ್ರಾಣಿಗಳಾಗಿ ನೀವು ಹೀಗೆ ವರ್ತಿಸುತ್ತಿದ್ದರೆ, ನಾವು ಹೇಗೆ ವರ್ತಿಸಬೇಕು.?'' ಎಂದು ರೊಚ್ಚಿಗೆದ್ದಿದ್ದ ದಿವಾಕರ್ ಗೆ ಅಕುಲ್ ಬುದ್ಧಿ ಹೇಳಿದರು.

'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

ಬಾಯಿ ತಪ್ಪಿ ಮಾತು ಬಂದಿರುತ್ತೆ.!

''ಬಾಯಿ ತಪ್ಪಿ ಮಾತು ಬಂದಿರುತ್ತದೆ. ಅವರೊಬ್ಬರೇನಾ (ರಿಯಾಝ್) ಹಾಗೆ ಹೇಳಿದ್ದು.? ''ನಿಮ್ಮ ಅಪ್ಪ ಬಂದರೂ ಕೂಡ ನನ್ನನ್ನ ಕರ್ಕೊಂಡು ಹೋಗಕ್ಕಾಗಲ್ಲ'' ಅಂತ ಅವರು (ಸಮೀರಾಚಾರ್ಯ) ಕೂಡ ಅಂದರು'' ಎಂದು ಪರಿಸ್ಥಿತಿಯನ್ನ ಅಕುಲ್ ವಿವರಿಸಿದಾಗ ''ಅದು ತಪ್ಪು'' ಎಂದು ದಿವಾಕರ್ ಒಪ್ಪಿಕೊಂಡರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಮಧ್ಯದಲ್ಲಿ ಯಾಕೆ ಬರಬೇಕಿತ್ತು.?

''ನಾವೂ ಸಹಿಸಿದ್ವಿ ತಾನೇ. ಈ ಸೂಕ್ಷ್ಮಗಳನ್ನ ತುಂಬ ಆಳಕ್ಕೆ ಇಳಿದು ಯೋಚನೆ ಮಾಡುವುದು ಸರಿ ಅಲ್ಲ. ನೀವು ಸುಮ್ಮನೆ ಇರಬೇಕಿತ್ತು. ಟಾರ್ಗೆಟ್ ಮಾಡಿ ಯಾಕೆ ಮಾತನಾಡಿದ್ರಿ.? ನಿಮಗೆ ಅವರೇನೂ ಅಂದಿಲ್ಲ. ಅಲ್ಲಿಯ ಪರಿಸ್ಥಿತಿ ಹೇಗಿತ್ತು.? ಕರಡಿ ಅಪರೂಪಕ್ಕೆ ಸಿಕ್ಕಿತ್ತು. ನಮ್ಗೂ ಹಿಡಿಯಬೇಕು ಅಂತಿತ್ತು'' - ಅಕುಲ್ ಬಾಲಾಜಿ

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ಹೀಗೆ ಮಾಡಲು ಕಾರಣ ಏನು.?

''ಮಧ್ಯದಲ್ಲಿ ಹೀಗೆ ಮಾಡಿದರೆ ಏನೇನೋ ಆಗುತ್ತದೆ. ನಮ್ಮನ್ನ ಪಕ್ಕದ ದಾರಿಗೆ ಇಳಿಸುವ ಪ್ರಯತ್ನ ಮಾಡಿದ್ರೋ ಅಥವಾ ನಿಜವಾಗಲೂ ಕೋಪ ಬಂದು ಬೈಯ್ದ್ರೋ ಗೊತ್ತಿಲ್ಲ. ಮಾಡುತ್ತಿರುವುದನ್ನ ನಿಲ್ಲಿಸಿ, ನಿಮ್ಮ ಮಾತು ಕೇಳಬೇಕಿತ್ತು'' ಎಂದು ಹೇಳಿದಾಗ ದಿವಾಕರ್ ಗೆ ತಮ್ಮ ತಪ್ಪಿನ ಅರಿವಾಯಿತು.

ಸಮರ್ಥಿಸಿಕೊಂಡ ದಿವಾಕರ್

ಅಕುಲ್ ಇಷ್ಟೆಲ್ಲ ಹೇಳಿದ್ಮೇಲೆ, ಹಿಂದೆ ದಿವಾಕರ್ ಗೆ ರಿಯಾಝ್ ಬೈಯ್ದಿದ್ರಿಂದ, ಈಗ ಹಾಗೆ ಮಾಡಿರುವುದಾಗಿ ದಿವಾಕರ್ ಸಮರ್ಥಿಸಿಕೊಂಡರು.

ನಿಮ್ಮ ಅಭಿಪ್ರಾಯ ಏನು.?

ದಿವಾಕರ್ ಮಾಡಿದ್ದು ಸರಿಯೇ.? ತಮ್ಮದಲ್ಲದ ವಿಷಯಕ್ಕೆ ಮೂಗು ತೂರಿಸಿ, ಬಾಯಿಗೆ ಬಂದ ಹಾಗೆ ಮಾತನಾಡಿದ ದಿವಾಕರ್ ನಡವಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ...

English summary
Bigg Boss Kannada 5: Week 8: Akul Balaji advices Diwakar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada