»   » ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?

ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?

Posted By:
Subscribe to Filmibeat Kannada
ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು | Filmibeat Kannada

ಎದುರಿಗೆ ಇರುವವರನ್ನ ಯಾಮಾರಿಸಬಹುದು. ಆದ್ರೆ, ಮನೆಯ ಮೂಲೆ ಮೂಲೆಯಲ್ಲೂ ಇರುವ ಕ್ಯಾಮರಾ ಕಣ್ಣುಗಳನ್ನ ಯಾಮಾರಿಸಲು ಸಾಧ್ಯವೇ.? ಮನುಷ್ಯ ಕಣ್ಣು ಮಿಟುಕಿಸಬಹುದು. ಆದ್ರೆ, 24*7 ಕಣ್ಣು ಮಿಟುಕಿಸದೇ ಸದಾ ಸ್ಪರ್ಧಿಗಳ ಚಲನ ವಲನಗಳನ್ನು ಗಮನಿಸುವ 'ಬಿಗ್ ಬಾಸ್'ಗೆ ಚಳ್ಳೆಹಣ್ಣು ತಿನ್ನಿಸಲು ಆಗುತ್ತದೆಯೇ.?

ಇದೆಲ್ಲ ಸಾಧ್ಯ ಇಲ್ಲ ಅಂತ ಗೊತ್ತಿದ್ದರೂ, 'ಬಿಗ್ ಬಾಸ್' ನೀಡಿದ್ದ ಆದೇಶ ಮೀರಿ ನಟಿ ಅನುಪಮಾ ಗೌಡ, ಇನ್ನೊಬ್ಬರಿಗೆ ಸೇರಿದ್ದ ಚಾಕಲೇಟ್ ನ ಕದ್ದು ತಿಂದಿದ್ದಾರೆ. ಸಾಲದಕ್ಕೆ, ಸಿಹಿ ಕಹಿ ಚಂದ್ರು ಹಾಗೂ ಆಶಿತಾಗೂ ತಿನ್ನಿಸಿದ್ದಾರೆ.

ಒಮ್ಮೆ ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಟು, ಸಮೀರಾಚಾರ್ಯ ಅವರಿಗೆ ಒಂದು ಲೋಟ ಹಾಲು ಕೊಡದೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ದ ಅನುಪಮಾ ಗೌಡ ಇದೀಗ ಚಾಕಲೇಟ್ ನ ಕದ್ದು ತಿಂದು 'ಬಿಗ್ ಬಾಸ್' ನಿಂದ ಶಿಕ್ಷೆಗೆ ಒಳಗಾಗಿದ್ದಾರೆ. ಮುಂದೆ ಓದಿರಿ....

ಅನುಪಮಾ ಗೌಡಗೆ ಹಸಿವಾಗಿತ್ತಂತೆ.!

ಮಧ್ಯಾಹ್ನ ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ, ನಟಿ ಅನುಪಮಾ ಗೌಡಗೆ ಹಸಿವು ಶುರು ಆಗಿದೆ. ''ಉಪ್ಸಾರು ತಿಂದಿದ್ದು, ಹೊಟ್ಟೆಯಲ್ಲಿ ಕರಗಿ ಹೋಯ್ತು ಅನ್ಸುತ್ತೆ'' ಎನ್ನುತ್ತಾ ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್ ತೆಗೆದು ನೋಡಿದ ಅನುಪಮಾ ಗೌಡಗೆ ಚಾಕಲೇಟ್ ಕಾಣಿಸಿದೆ.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

ಸನ್ನೆ ಮಾಡಿ ಚಂದ್ರು ರನ್ನ ಕರೆದ ಅನುಪಮಾ

ಫ್ರಿಡ್ಜ್ ನಲ್ಲಿದ್ದ ಚಾಕಲೇಟ್ ನ ತೆಗೆಯಲು ಅನುಪಮಾ ಗೌಡಗೆ ಆಗಲಿಲ್ಲ. ಹೀಗಾಗಿ, ಅಲ್ಲೇ ಪಕ್ಕದಲ್ಲಿ ಇದ್ದ ಸಿಹಿ ಕಹಿ ಚಂದ್ರು ರನ್ನ ಅನುಪಮಾ ಗೌಡ ಸನ್ನೆ ಮಾಡಿ ಕರೆದರು.

ಚಿಕನ್ ಅಂತ ಸುಳ್ಳು ಬೇರೆ.!

ಚಾಕಲೇಟ್ ಅಂತ ಹೇಳುವ ಬದಲು, ಚಿಕನ್ ಅಂತ ಉದ್ದೇಶಿಸಿ, ''ಇದು ಚಿಕನ್ ನೋಡಿ ಏನಾಗಿದೆ, ಯಾವಾಗ ಇಟ್ಟಿದ್ದು, ಏನು ಮಾಡೋಣ'' ಅಂತ ಹೇಳ್ತಾ ಚಂದ್ರು ರವರ ಕೈಯಿಂದ ಚಾಕಲೇಟ್ ತೆಗೆದುಕೊಂಡು ಅನುಪಮಾ ತಿಂದರು. ಆಗ ಸಿಹಿ ಕಹಿ ಚಂದ್ರು ಕೂಡ ಚಾಕಲೇಟ್ ನ ಬಾಯಿಗೆ ಹಾಕಿಕೊಂಡರು.

ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

ಆಶಿತಾಗೆ ಚಾಕಲೇಟ್ ತಿನ್ನಿಸಿದ ಅನುಪಮಾ

''ನನ್ನ ಕೈ ವಾಸನೆ ನೋಡು'' ಅಂತ ಹೇಳ್ತಾ ಆಶಿತಾ ಬಾಯಿಗೆ ಅನುಪಮಾ ಗೌಡ ಚಾಕಲೇಟ್ ಹಾಕಿದರು.

ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!

ಸಮೀರಾಚಾರ್ಯಗೆ ಏನೂ ಗೊತ್ತಾಗಲಿಲ್ಲ.!

ಎದುರಿಗೆ ಇಷ್ಟೆಲ್ಲ ಆಗುತ್ತಿದ್ದರೂ, ಅಡುಗೆ ಮನೆಯಲ್ಲೇ ಇದ್ದ ಸಮೀರಾಚಾರ್ಯ ಅವರಿಗೆ ಏನೂ ಗೊತ್ತಾಗಲಿಲ್ಲ. ಅಷ್ಟು ಚೆನ್ನಾಗಿ ಆ ಮೂವರು 'ಚಿಕನ್' ಎನ್ನುತ್ತ ಚಾಕಲೇಟ್ ತಿಂದರು.

ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...

ಭೇದ ಭಾವ ಅಂದ್ರೆ ಇದೇ ಅಲ್ವೇ.?

''ನಾವು ಸೆಲೆಬ್ರಿಟಿ, ಕಾಮನ್ ಮ್ಯಾನ್ ಅಂತ ಭೇದ ಭಾವ ಮಾಡಿಲ್ಲ. ಅದೆಲ್ಲ ಅವರ ತಲೆಯಲ್ಲಿ ಇದೆ ಅಷ್ಟೇ. ನಾವು ಎಲ್ಲವನ್ನೂ ಹಂಚಿಕೊಂಡು ತಿನ್ನುತ್ತೇವೆ, ಭಾಗ ಮಾಡಲ್ಲ'' ಎಂದು ಪ್ರತಿ ಬಾರಿ ಸಮರ್ಥನೆ ಮಾಡಿಕೊಳ್ಳುವ ಸೆಲೆಬ್ರಿಟಿ ಸ್ಪರ್ಧಿಗಳು ಚಾಕಲೇಟ್ ತಿನ್ನುತ್ತಿರುವಾಗ, ಎದುರಿಗೆ ಇದ್ದ ಸಮೀರಾಚಾರ್ಯ ಅವರಿಗೆ ಬಾಯಿ ಮಾತಿಗಾದರೂ 'ಬೇಕಾ' ಅಂತ ಕೇಳಲಿಲ್ಲ. ಆಶಿತಾಗೆ ಗುಟ್ಟಾಗಿ ಕೊಟ್ಟ ಹಾಗೆ ಕೊಡಲೂ ಇಲ್ಲ.

ಅಷ್ಟಕ್ಕೂ ಆ ಚಾಕಲೇಟ್ ಯಾರದ್ದು.?

ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜಯರಾಂ ಕಾರ್ತಿಕ್ ಅವರಿಗೆ 'ಬಿಗ್ ಬಾಸ್' ಚಾಕಲೇಟ್ ನೀಡಿದ್ದರು. ಚಾಕಲೇಟ್ ಅವರೊಬ್ಬರ ಸೇವನೆಗೆ ಮಾತ್ರ ಎಂದು 'ಬಿಗ್ ಬಾಸ್' ಆದೇಶಿಸಿದ್ದರು. ಈ ಆದೇಶವನ್ನು ಉಲ್ಲಂಘಿಸಿ, ಅನುಪಮಾ ಗೌಡ, ಆಶಿತಾ ಹಾಗೂ ಸಿಹಿ ಕಹಿ ಚಂದ್ರು ಚಾಕಲೇಟ್ ತಿಂದಿದ್ದು 'ಬಿಗ್ ಬಾಸ್' ಗಮನಕ್ಕೆ ಬಂತು.

ಶಿಕ್ಷೆ ಕೊಟ್ಟ 'ಬಿಗ್ ಬಾಸ್'

ನೀಡಿದ್ದ ಆದೇಶವನ್ನು ಉಲ್ಲಂಘಿಸಿ ಚಾಕಲೇಟ್ ತಿಂದಿದ್ದಕ್ಕೆ, ಶಿಕ್ಷೆಯ ರೂಪದಲ್ಲಿ ಚಂದ್ರು, ಆಶಿತಾ ಹಾಗೂ ಅನುಪಮಾ ಗೌಡ ಒಂದು ಲೋಟ ಹಾಗಲಕಾಯಿ ರಸವನ್ನ ಕುಡಿಯಬೇಕಿತ್ತು.

ಕ್ಷಮೆ ಕೇಳಿ ಶಿಕ್ಷೆ ಅನುಭವಿಸಿದ ಮೂವರು

''ನನಗೆ ತುಂಬಾ ಹಸಿವು ಆಯ್ತು. ಫ್ರಿಡ್ಜ್ ನಲ್ಲಿ ಏನೂ ಇರಲಿಲ್ಲ. ಅದಕ್ಕೆ ಕದ್ದು ತಿಂದುಬಿಟ್ಟೆ. ಕ್ಷಮಿಸಿ'' ಎನ್ನುತ್ತಾ ಅನುಪಮಾ ಗೌಡ ಹಾಗಲಕಾಯಿ ರಸವನ್ನ ಕುಡಿದರು. ಇನ್ನೂ 'ಬಿಗ್ ಬಾಸ್' ಬಳಿ ಕ್ಷಮೆ ಕೇಳುತ್ತಾ ಚಂದ್ರು ಹಾಗೂ ಆಶಿತಾ ಕೂಡ ಹಾಗಲಕಾಯಿ ರಸವನ್ನು ಕುಡಿದರು.

ಬೇರೆಯವರ ಮೇಲೆ ಬೆಟ್ಟು ಮಾಡುವುದು ಯಾಕೆ.?

ಒಮ್ಮೆ ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಟು, ಇನ್ನೊಮ್ಮೆ ಚಾಕಲೇಟ್ ನ ಕದ್ದು ತಿಂದು 'ಬಿಗ್ ಬಾಸ್'ನಿಂದ ಶಿಕ್ಷೆಗೆ ಒಳಗಾದ ಅನುಪಮಾ ಗೌಡ ಪದೇ ಪದೇ ಅಡುಗೆ ವಿಷಯಕ್ಕೆ, ಹಣ್ಣುಗಳ ವಿಚಾರಕ್ಕೆ ಜನಸಾಮಾನ್ಯ ಸ್ಪರ್ಧಿಗಳ ಮೇಲೆ ಬೆಟ್ಟು ಮಾಡಿ ದೂಷಿಸುವುದಾದರೂ ಯಾಕೆ.?

ಹೇಳುವುದು ಒಂದು ಮಾಡುವುದು ಇನ್ನೊಂದು

''ರಿಯಾಝ್ ಸ್ಟಾಕ್ ಚೆಕ್ಕಿಂಗ್ ಮಾಡಿದರೆ ಉರಿಯುತ್ತೆ. ಹಣ್ಣುಗಳನ್ನ ಹಂಚುವುದು ಸರಿಯಲ್ಲ'' ಅಂತ ಕೂಗಾಡುವ ಅನುಪಮಾ ತಾವೇ ಬಿಸ್ಕತ್ತು, ಕೇಕ್ ಗಳನ್ನು ಲೆಕ್ಕ ಮಾಡಿ ತಮಗೆ ಬೇಕಾದವರ ಭಾಗವನ್ನೂ ಎತ್ತಿಕೊಳ್ಳುತ್ತಾರೆ.

ಇದಕ್ಕೆ ನೀವೇನಂತೀರಿ.?

''ಹಾಲನ್ನ ಎತ್ತಿಟ್ವಿ ನಿಜ. ಹಾಗಂತ ನಾವು ಅದರಿಂದ ಏನನ್ನೂ ಮಾಡಿಕೊಂಡು ತಿಂದಿಲ್ಲ. ಒಂದು ಟೀ ಮಾಡುವಾಗ ನಾಲ್ಕು ಜನ ಎದುರಿಗೆ ನಿಂತುಕೊಳ್ಳುತ್ತಾರೆ, ಯಾಕೆ.? ಅವರ ಮನೆಯಿಂದ ಏನಾದರೂ ತಂದು ನಾನು ಮಾಡ್ತಿದ್ದೀನಾ ಲೆಕ್ಕ ನೋಡೋಕೆ. ಸ್ಟಾಕ್ ಚೆಕ್ಕಿಂಗ್ ಮಾಡಿದರೆ ಉರಿಯುತ್ತೆ'' ಅಂತೆಲ್ಲ ಹೇಳುವ ಅನುಪಮಾ ಈಗ ಕದ್ದುಮುಚ್ಚಿ ಚಾಕಲೇಟ್ ತಿಂದು ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ

English summary
Bigg Boss Kannada 5: Week 5: Anupama Gowda gets punishment
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada