»   » ಇದಪ್ಪಾ ಆಟ ಅಂದ್ರೆ... ರಿಯಾಝ್ ಮೇಲೆ ಅನುಪಮಾಗೆ ಗೌರವ ಮೂಡಿದೆ.!

ಇದಪ್ಪಾ ಆಟ ಅಂದ್ರೆ... ರಿಯಾಝ್ ಮೇಲೆ ಅನುಪಮಾಗೆ ಗೌರವ ಮೂಡಿದೆ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರುವಾದ ಮೊದಲ ವಾರದಿಂದಲೂ ರಿಯಾಝ್ ಕಂಡ್ರೆ ಕೆಲವರಿಗೆ ಅಷ್ಟಕಷ್ಟೆ. ಅದರಲ್ಲೂ, ರಿಯಾಝ್ ಕ್ಯಾಪ್ಟನ್ ಆದ್ಮೇಲೆ ಅನುಪಮಾ ಗೌಡ ಉರಿದು ಬೀಳ್ತಿದ್ರು. ರೇಷನ್ ಮೇಲೆ ನಿಗಾ ಇಟ್ಟ ಮೇಲಂತೂ ರಿಯಾಝ್ ರನ್ನ ಅನುಪಮಾ ದ್ವೇಷಿಸಲು ಶುರು ಮಾಡಿದರು.

ಆದ್ರೀಗ, ವಾರಗಳು ಕಳೆದಂತೆ ಸ್ಪರ್ಧಿಗಳ ಮನೋಭಾವ ಬದಲಾಗಿದೆ. ರಿಯಾಝ್ ರನ್ನ ದ್ವೇಷಿಸುತ್ತಿದ್ದ ಅನುಪಮಾ ಗೌಡ ಇದೀಗ ಅದೇ ರಿಯಾಝ್ ರನ್ನ ಗೌರವಿಸಲು ಆರಂಭಿಸಿದ್ದಾರೆ.

Bigg Boss Kannada 5: Anupama Gowda praises Riyaz Basha

ಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳು

ಮತ್ತೆತ್ತಿದ್ರೆ ರೂಲ್ಸ್ ಬಗ್ಗೆ ಮಾತನಾಡುವ ರಿಯಾಝ್ ಬಗ್ಗೆ ಅನುಪಮಾ ರವರಲ್ಲಿ ಇದ್ದ ಅಭಿಪ್ರಾಯ ಈಗ ಚೇಂಜ್ ಆಗಿದೆ.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

''ನಾನು ರಿಯಾಝ್ ರನ್ನ ದ್ವೇಷಿಸುತ್ತಿದ್ದೆ. ಆದ್ರೆ ಈಗ ನಾನು ಅವರನ್ನ ಗೌರವಿಸಲು ಶುರು ಮಾಡಿದ್ದೇನೆ. ನಾನು ಅವರಲ್ಲಿ ತುಂಬಾ ಬದಲಾವಣೆ ನೋಡಿದ್ದೇನೆ. ನಾನೀಗ ಅವರಿಗೆ ತುಂಬಾ ಹತ್ತಿರವಾಗುತ್ತಿದ್ದೇನೆ. ಇಷ್ಟು ದಿನ ಅವರ ಮೇಲೆ ನನಗೆ ಇದ್ದ ಅಭಿಪ್ರಾಯ ಬೇರೆ. ಈಗ ನನಗೆ ಅವರ ಬಗ್ಗೆ ಗೌರವ ಮೂಡಿದೆ'' ಎಂದು ಜಗನ್ ಜೊತೆ ಮಾತನಾಡುವಾಗ ಅನುಪಮಾ ಗೌಡ ಹೇಳಿದ್ದಾರೆ.

ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...

ಅಷ್ಟಕ್ಕೂ, ಅನುಪಮಾ ಗೌಡ ಇದನ್ನೆಲ್ಲ ಹೇಳಿದ್ದು ಸಿಹಿ ಕಹಿ ಚಂದ್ರು ಔಟ್ ಆದ್ಮೇಲೆ.!

ಇಷ್ಟು ದಿನ ಸಿಹಿ ಕಹಿ ಚಂದ್ರು ಜೊತೆ ಆತ್ಮೀಯವಾಗಿದ್ದ ಅನುಪಮಾ ಗೌಡ ಇದೀಗ ರಿಯಾಝ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ.

English summary
Bigg Boss Kannada 5: Week 7: Anupama Gowda praises Riyaz Basha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada