»   » ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ.!

ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ.!

Posted By:
Subscribe to Filmibeat Kannada
ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ | FIlmibeat Kannada

'ಜೊತೆ ಜೊತೆಯಲಿ' ಹಾಗೂ 'ನೀಲಿ' ಸೀರಿಯಲ್ ಗಳಲ್ಲಿ ಅಭಿನಯಿಸಿದ ನಟಿ ಆಶಿತಾ ಚಂದ್ರಪ್ಪಗೆ 'ಗಣರಾಜ್ಯ' ಅಂದ್ರೇನು ಎಂಬುದೇ ಗೊತ್ತಿಲ್ಲ.! ಹಾಗೇ, 'ಬಾಹುಬಲಿ' ಅಂದ್ರೆ ಗೊಮ್ಮಟೇಶ್ವರನ ಇನ್ನೊಂದು ಹೆಸರೂ ಅನ್ನೋದೂ ಕೂಡ ಆಕೆಗೆ ತಿಳಿದಿಲ್ಲ.!

ಹೌದು, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರದ ಕ್ಯಾಪ್ಟನ್ ಟಾಸ್ಕ್ ಅನುಸಾರವಾಗಿ ಸ್ಪರ್ಧಿಗಳ ಸಾಮಾನ್ಯ ಜ್ಞಾನವನ್ನ 'ಬಿಗ್ ಬಾಸ್' ಪರೀಕ್ಷಿಸಿದರು.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

Bigg Boss Kannada 5: Ashita's General Knowledge put to test

ಇದರಂತೆ, ನಟಿ ಆಶಿತಾಗೆ ''ಭಾರತ ಗಣರಾಜ್ಯಗೊಂಡಿದ್ದು ಯಾವಾಗ.?'' ಎಂದು 'ಬಿಗ್ ಬಾಸ್' ಪ್ರಶ್ನಿಸಿದರು. ಆಗ, ''ವಾಟ್ ಈಸ್ ಗಣರಾಜ್ಯ.?'' ಎಂದು ಕೇಳಿಬಿಟ್ಟರು ಆಶಿತಾ.

'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!

'ಗಣರಾಜ್ಯ' ಅಂದರೆ 'ರಿಪಬ್ಲಿಕ್' ಅಂತ ಸಮೀರಾಚಾರ್ಯ ಹೇಳಿದ್ದಕ್ಕೆ '1960' ಅಂತ ತಪ್ಪು ಉತ್ತರ ಕೊಟ್ಟರು ಆಶಿತಾ.

ಬಳಿಕ, ''ಬಾಹುಬಲಿ ಪ್ರತಿಮೆ ಇರುವ ಜಾಗ ಯಾವುದು.?'' ಎಂದು 'ಬಿಗ್ ಬಾಸ್' ಪ್ರಶ್ನಿಸಿದ್ದಕ್ಕೆ, ''ಸಿನಿಮಾನಾ.? ಹೈದರಾಬಾದ್.!'' ಎಂದು ಆಶಿತಾ ಉತ್ತರಿಸಿದಾಗ ಎಲ್ಲರೂ ನಕ್ಕರು.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

''ಸರಿಯಾದ ಉತ್ತರ ಶ್ರವಣಬೆಳಗೊಳ'' ಎಂದು 'ಬಿಗ್ ಬಾಸ್' ಹೇಳಿದಾಗ ''ಓ... ದೇವರದ್ದಾ.? ನನಗೇನು ಗೊತ್ತು.?'' ಎಂದರು ಆಶಿತಾ. ''ಗೊಮ್ಮಟೇಶ್ವರನ ಹೆಸರು ಬಾಹುಬಲಿ'' ಎಂದು ಸಿಹಿ ಕಹಿ ಚಂದ್ರು ಹೇಳಿದಕ್ಕೆ ''ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ'' ಎಂದರು ಆಶಿತಾ.

ಎರಡೂ ತಪ್ಪು ಉತ್ತರಗಳನ್ನು ನೀಡಿದ ಆಶಿತಾ, ಕ್ಯಾಪ್ಟನ್ ರೇಸ್ ನಿಂದ ಹೊರಬಿದ್ದರು.

English summary
Bigg Boss Kannada 5: Week 6: Ashita's General Knowledge put to test

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada