»   » 'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಜನಸಾಮಾನ್ಯರನ್ನ ಮೂಲೆಗುಂಪು ಮಾಡ್ತಿದ್ದಾರೆ ಸೆಲೆಬ್ರಿಟಿಸ್ | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಇದೇ ಮೊದಲ ಬಾರಿಗೆ ಜನಸಾಮಾನ್ಯರು ಕಾಲಿಟ್ಟಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಕಾಮನ್ ಮ್ಯಾನ್ ಸ್ಪರ್ಧಿಗಳಿಗೂ ಅವಕಾಶ ಮಾಡಿಕೊಡಲಾಗಿದೆ.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಒಂದೇ ಮನೆಯಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯರು ಹೇಗೆ ಹೊಂದಾಣಿಕೆ ಮಾಡಿಕೊಂಡು ಇರಬಹುದು ಎಂದು ಕುತೂಹಲದಿಂದ 'ಬಿಗ್ ಬಾಸ್' ನೋಡುತ್ತಿರುವ ವೀಕ್ಷಕರಿಗೆ ಮೇಲ್ನೋಟಕ್ಕೆ 'ದೊಡ್ಮನೆ' ಇಬ್ಭಾಗವಾದಂತೆ ಕಾಣುತ್ತಿದೆ.

ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಒಂದು ಗುಂಪಾಗಿದ್ದರೆ, ಜನಸಾಮಾನ್ಯ ಸ್ಪರ್ಧಿಗಳೇ ಇನ್ನೊಂದು ಗುಂಪಾಗಿರುವಂತೆ ಕಾಣುತ್ತಿದೆ. ಮುಂದೆ ಓದಿರಿ....

ಮೇಘ ಕಂಡ್ರೆ ಸೆಲೆಬ್ರಿಟಿಗಳಿಗೆ ಅಷ್ಟಕಷ್ಟೆ.!

ಮೇಘ ಜೊತೆ ಸೆಲೆಬ್ರಿಟಿ ಸ್ಪರ್ಧಿಗಳ ಮಾತುಕತೆ ಅಷ್ಟಕಷ್ಟೆ. ಒಂದು ವೇಳೆ ಮಾತುಕತೆ ಆದರೂ, ಆಕೆಯ ನಡವಳಿಕೆ ಬದಲಾಗಬೇಕು ಎಂದು ಸೆಲೆಬ್ರಿಟಿ ಸ್ಪರ್ಧಿಗಳು ಸೂಚಿಸುತ್ತಾರೆ ಹೊರತು ಎಂದಿನಂತೆ ಮಾತನಾಡುವುದು, ಹರಟುವುದು ಕಮ್ಮಿಯೇ.

'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

ಹಣ್ಣು ತಿಂದರೆ ಸಮಸ್ಯೆ.!

ಆಕೆಯ ಪಾಲಿನ ಹಣ್ಣು ತೆಗೆದುಕೊಂಡು ತಿಂದಾಗಲೂ, ತೇಜಸ್ವಿನಿ ಆಕೆಯನ್ನ (ಮೇಘ) ಪ್ರಶ್ನೆ ಮಾಡುತ್ತಾರೆ. ''ನಿನಗೆ ಹೇಳಿದ್ರಾ ತೆಗೆದುಕೊಂಡು ತಿನ್ನೋಕೆ.?'' ಎಂದು ಮೇಘರಿಗೆ ಪ್ರಶ್ನೆ ಮಾಡಿದಂತೆ ಸೆಲೆಬ್ರಿಟಿಗಳು ತಮ್ಮ ತಮ್ಮಲ್ಲಿ ಪ್ರಶ್ನೆ ಮಾಡಿಕೊಳ್ಳುತ್ತಾರಾ.? ವೀಕ್ಷಕರ ಕಣ್ಣಿಗಂತೂ ಅದೆಲ್ಲ ಬಿದ್ದಿಲ್ಲ.!

ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ

ದಿವಾಕರ್ ಮೇಲೆ ಎಲ್ಲರ ಕೆಂಗಣ್ಣು

ಮೇಘ, ಸಮೀರಾಚಾರ್ಯ, ಜಯಶ್ರೀನಿವಾಸನ್ ಪರ ನಿಲ್ಲುವ ದಿವಾಕರ್ ಸೆಲೆಬ್ರಿಟಿ ಸ್ಪರ್ಧಿಗಳ ಕೆಂಗಣ್ಣಿಗೆ ಆಗಾಗ ಗುರಿಯಾಗುತ್ತಲೇ ಇದ್ದಾರೆ.

ಟಾರ್ಗೆಟ್ ಜಯಶ್ರೀನಿವಾಸನ್

ಸೆಲೆಬ್ರಿಟಿ ಸ್ಪರ್ಧಿಗಳ ಪಟ್ಟಿಯಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಎಂಟ್ರಿಕೊಟ್ಟಿದ್ದರೂ, 'ಬಿಗ್ ಬಾಸ್' ಮನೆಯಲ್ಲಿ ಅವರು ಜನಸಾಮಾನ್ಯರೇ ಆಗಿ ಹೋಗಿದ್ದಾರೆ. ಎಲ್ಲವನ್ನೂ ಪ್ರಶ್ನೆ ಮಾಡುವ ಜಯಶ್ರೀನಿವಾಸನ್ ಕೂಡ ಕೆಲ ಕಿತ್ತಾಟಗಳಿಗೆ ನಾಂದಿ ಹಾಡಿದ್ದಾರೆ.

ಜನಸಾಮಾನ್ಯರು ಅಂದ್ರೆ ನಿರ್ಲಕ್ಷ್ಯ

''ಸೆಲೆಬ್ರಿಟಿಗಳಿಗೆ ನಮ್ಮನ್ನ ಕಂಡ್ರೆ ನಿರ್ಲಕ್ಷ್ಯ, ಅವರ ಗುಂಪಿಗೆ ನಮ್ಮನ್ನ ಸೇರಿಸಿಕೊಳ್ಳುವುದಿಲ್ಲ'' ಎಂದು ದಿವಾಕರ್ ಅವರೇ ಬಾಯಿ ಬಿಟ್ಟು ಹೇಳಿದ್ದಾರೆ.

ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯರು'

''ಸೆಲೆಬ್ರಿಟಿಗಳಂತೆ ಸುಮ್ ಸುಮ್ಮನೆ ನಗುವುದು, ಅಳುವುದು ಬರಲ್ಲ. ಪ್ಲಾನ್ನಿಂಗ್ ಮಾಡಿಕೊಂಡು ಬಂದಿಲ್ಲ'' ಎನ್ನುವ ಜನಸಾಮಾನ್ಯರು 'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ, ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಭಾವನೆ ವೀಕ್ಷಕರಲ್ಲಿ ಮೂಡಿರುವುದಂತೂ ಸತ್ಯ.

English summary
Bigg Boss Kannada 5: Celebrity contestants targets Common People

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X