»   » ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿ ಭಾವುಕರಾದ ಚಂದನ್ ಶೆಟ್ಟಿ

ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿ ಭಾವುಕರಾದ ಚಂದನ್ ಶೆಟ್ಟಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಲು ಕ್ಷಣಗಣನೆ ಶುರು ಆಗಿರುವುದರಿಂದ ಚಂದನ್ ಶೆಟ್ಟಿ ಕೊಂಚ ಭಾವುಕರಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ತಮ್ಮ 105 ದಿನಗಳ ಜರ್ನಿಯನ್ನ ಮೆಲುಕು ಹಾಕುತ್ತಿರುವ ಚಂದನ್ ಶೆಟ್ಟಿ, ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ತಮಗೆ ಶ್ರುತಿ ಪ್ರಕಾಶ್ ಮೇಲೆ ಕ್ರಷ್ ಆಗಿದೆ ಎಂದು ಚಂದನ್ ಶೆಟ್ಟಿ ಹೇಳಿದ್ದರು. ಆದ್ರೆ, ಶ್ರುತಿ ಪ್ರಕಾಶ್ ಹೆಚ್ಚು ಆತ್ಮೀಯರಾಗಿದ್ದು ಜಯರಾಂ ಕಾರ್ತಿಕ್ ಜೊತೆಗೆ. ಹೀಗಾಗಿ, ಈ ಬಾರಿಯ 'ಬಿಗ್ ಬಾಸ್' ಒಂಥರಾ ಲವ್ ಟ್ರೈಯಾಂಗಲ್ ಗೆ ಸಾಕ್ಷಿ ಆಗಿತ್ತು.

ಇದೇ ಗ್ಯಾಪ್ ನಲ್ಲಿ ಶ್ರುತಿ ಪ್ರಕಾಶ್ ಅವರನ್ನ ಚಂದನ್ ಶೆಟ್ಟಿ ನಾಮಿನೇಟ್ ಮಾಡಿದ್ದರು. ಸಾಲದಕ್ಕೆ, ಶ್ರುತಿ ಪ್ರಕಾಶ್ ಜೊತೆ ಮಾಡ್ತಿರೋದೆಲ್ಲ ಬರೀ ಡವ್ ಅಂತೆಲ್ಲ ಹೇಳಿಕೆ ನೀಡಿದ್ದರು. ಇದರಿಂದ ಶ್ರುತಿಗೆ ಸ್ವಲ್ಪ ಬೇಸರ ಕೂಡ ಆಗಿತ್ತು.

Bigg Boss Kannada 5: Chandan shetty becomes emotional

ಇದೀಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದ್ಮೇಲೆ ಶ್ರುತಿಗೆ ಚಂದನ್ ಕ್ಷಮೆ ಕೇಳಿದ್ದಾರೆ. ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಶ್ರುತಿ ಪ್ರಕಾಶ್ ಬಳಿ ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಇತ್ತ ದೊಡ್ಡ ಮನಸ್ಸಿನ ಶ್ರುತಿ ಕೂಡ ಚಂದನ್ ರನ್ನ ಕ್ಷಮಿಸಿದ್ದಾರೆ.

'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?

ಗ್ರ್ಯಾಂಡ್ ಫಿನಾಲೆ ವರೆಗೂ ಬಂದ ಶ್ರುತಿ ಪ್ರಕಾಶ್ ಸದ್ಯ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ. ನಿವೇದಿತಾ ಕೂಡ ಔಟ್ ಆಗಿದ್ದಾರೆ.

ಚಂದನ್ ಶೆಟ್ಟಿ, ದಿವಾಕರ್ ಹಾಗೂ ಜಯರಾಂ ಕಾರ್ತಿಕ್ ಟಾಪ್ 3 ಹಂತಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಮೂವರ ಪೈಕಿ ಯಾರಿಗೆ 'ಬಿಗ್ ಬಾಸ್' ಟ್ರೋಫಿ ಸಿಗುತ್ತೋ ನೋಡ್ಬೇಕು.

English summary
Bigg Boss Kannada 5: Grand Finale: Chandan shetty becomes emotional and apologizes Shruti Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada