Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ನಿಮಗೆಷ್ಟು ತಿಳಿದಿದೆ?
'ಬಿಗ್ ಬಾಸ್' ಕನ್ನಡದ ಕಾರ್ಯಕ್ರಮದ ಈ ಹಿಂದಿನ ಆವೃತ್ತಿಗಳಲ್ಲಿ ಕಂಡಂತೆ ಈ ಬಾರಿ ಯಾರಾದರೂ ಧಾರ್ಮಿಕ ಪ್ರತಿಪಾದಕರು ಬರಬಹುದು ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆಗೆ ಉತ್ತರವಾಗಿ ಬಂದವರೇ ಪಂಡಿತ ಸಮೀರಾಚಾರ್ಯ.
ದೇವಾಸ್ಥಾನದ ಆರ್ಚಕರು ಎಂದಾಕ್ಷಣ ಬರಿ ಪೂಜೆ, ಪುನಸ್ಕಾರ, ದೈವ ಆರಾಧನೆ ಮಾತ್ರ ಗೊತ್ತಿರುತ್ತೆ ಎಂದುಕೊಂಡಿದ್ದರೇ ತಪ್ಪು. ಸಮೀರಾಚಾರ್ಯ ಅವರು ಬಹುಮುಖ ಪ್ರತಿಭೆ.
ಧಾರ್ಮಿಕ ತತ್ವಗಳು, ಆದರ್ಶಗಳ ಜೊತೆಗೆ ವಿವಿಧ ಬಗೆಯ ಪ್ರತಿಭೆ ಹೊಂದಿರುವ ವ್ಯಕ್ತಿ. ಬಿಗ್ ಬಾಸ್ ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ಒಂದು ಸಣ್ಣ ಪರಿಚಯ ಇಲ್ಲಿದೆ ನೋಡಿ.

ಹುಬ್ಬಳ್ಳಿಯ ಆರ್ಚಕರು
ಪಂಡಿತ ಸಮೀರಾಚಾರ್ಯ. ವಯಸ್ಸು 28. ಮದುವೆ ಆಗಿ ಒಂದೂವರೆ ವರ್ಷವಾಗಿದೆ. ಇವರ ಪತ್ನಿಯ ಹೆಸರು ಶ್ರಾವಣಿ.

ರಕ್ಷಿತ್ ಶೆಟ್ಟಿ ಅಂದ್ರೆ ಇಷ್ಟ
ಪಂಡಿತ ಸಮೀರಾಚಾರ್ಯ ಅವರಿಗೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅಂದ್ರೆ ತುಂಬ ಇಷ್ಟ. ಹಾಗೂ ಆಲೂ ಪರೋಟ ಅಂದ್ರೆ ಇಷ್ಟ,

ಬಹುಮುಖ ಪ್ರತಿಭೆ
ಪಂಡಿತ ಸಮೀರಾಚಾರ್ಯ ಅವರು ಬರಿ ಆರ್ಚಕರು ಮಾತ್ರವಲ್ಲ. ಒಳ್ಳೆಯ ಪ್ರತಿಭೆ ಕೂಡ ಹೌದು. ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು ತಬಲ ನುಡಿಸುತ್ತಾರೆ. ಮಿಮಿಕ್ರಿ ಕೂಡ ಮಾಡ್ತಾರೆ.

ಟಿವಿಯಲ್ಲೂ ಕಾರ್ಯಕ್ರಮ ನೀಡಿದ್ದಾರೆ
ಟಿವಿಯಲ್ಲಿ ಹಲವು ಬಾರಿ ಪ್ರವಚನ ಕಾರ್ಯಕ್ರಮಗಳನ್ನ ಪಂಡಿತ ಸಮೀರಾಚರ್ಯ ಅವರು ನೀಡಿದ್ದಾರೆ.

'ಬಿಗ್ ಬಾಸ್'ಗೆ ಬಂದ ಉದ್ದೇಶ
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆಲ್ಲುವ ಹಣದಿಂದ ದೇವಸ್ಥಾನಕ್ಕೆ ಬಳಸಬೇಕು ಹಾಗೂ ಶಾಲೆಯೊಂದನ್ನ ಉದ್ಧಾರ ಮಾಡಬೇಕು ಎಂಬ ಆಸೆಯಿಂದ ಬಂದಿದ್ದಾರೆ.