»   » ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!

ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!

Posted By:
Subscribe to Filmibeat Kannada
Bigg Boss Kannada Season 5 : ಅನುಪಮಾ ಗೌಡ ಮೇಲೆ ಗರಂ ಆದ ಜಗನ್ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ, 'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ 'ಮಾಜಿ ಪ್ರೇಮಿಗಳು' ಎಂಬ ಸಂಗತಿ ಕರುನಾಡ ಜನತೆಗೆ ಗೊತ್ತೇ ಇರಲಿಲ್ಲ.

ಅದ್ಯಾವಾಗ, ಜಗನ್ ಮತ್ತು ಅನುಪಮಾ ಮಧ್ಯೆ ಶೀತಲ ಸಮರ ಶುರು ಆಯ್ತೋ... ಹಳೇ ನೆನಪುಗಳಿಗೆ ಜಾರಲು ಅನುಪಮಾ ಆರಂಭ ಮಾಡಿದ್ರೋ, ಹಳೆಯದ್ದನ್ನೆಲ್ಲ ಆಶಿತಾ ಕೆದಕಿದರೋ... ಆಗ, ಅನುಪಮಾ ಹಾಗೂ ಜಗನ್ 'ಹಳೇ ಲವರ್ಸ್' ಎಂಬ ಸಂಗತಿ ಬಯಲಾಯ್ತು.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಇನ್ನೂ, ತಮ್ಮ ಪ್ರೀತಿ ಮುರಿದು ಬಿದ್ದದ್ದು ಹೇಗೆ ಎಂಬುದರ ಬಗ್ಗೆಯೂ ನಟಿ ಅನುಪಮಾ ಗೌಡ 'ಬಿಗ್ ಬಾಸ್' ಮನೆಯಲ್ಲಿಯೇ ಹೇಳಿಕೊಂಡಿದ್ದಾರೆ. ತಮ್ಮ ಬ್ರೇಕಪ್ ಕಹಾನಿಯನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾ ರವರ ವರ್ತನೆ ಜಗನ್ ಗೆ ಇಷ್ಟ ಆಗಿಲ್ಲ. ಎರಡು ವಾರಗಳ ಹಿಂದೆ ನಡೆದ ಈ ಘಟನೆಯನ್ನ ಇಟ್ಟುಕೊಂಡು ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಅನುಪಮಾಗೆ ಜಗನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಮುಂದೆ ಓದಿರಿ...

ಅನುಪಮಾಗೆ ಜಗನ್ ಕ್ಲಾಸ್

''ಮಾತುಕತೆ ಮಾಡುವಾಗ, ಏನೋ ಒಂದು ಮಾತನಾಡಿದ್ದೀಯಾ... ಇಲ್ಲಿ ಮಾತನಾಡುವಾಗ ನನಗೆ ಕೇಳಿಸ್ತು. ಹೊರಗಡೆ ಏನು ಮಾತನಾಡಿದ್ದೀಯೋ, ಯಾರ ಹತ್ತಿರ ಏನು ಮಾತನಾಡಿದ್ದೀಯೋ, ನನಗೆ ಗೊತ್ತಿಲ್ಲ'' ಎಂದು ಜಗನ್ ಹೇಳುತ್ತಿದ್ದಂತೆಯೇ, ''ನಾನು ಯಾರ ಹತ್ತಿರವೂ, ಏನನ್ನೂ ಮಾತನಾಡಿಲ್ಲ'' ಎಂದು ಅನುಪಮಾ ವಾದ ಮಾಡಿದರು.

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಕ್ಯಾಮರಾ ಮೇಲೆ ಗಮನ

''ನೀನು ಒಂದನ್ನ ಅರ್ಥ ಮಾಡಿಕೊಳ್ಳಬೇಕು. ನೀನು ಕ್ಯಾಮರಾ ಮುಂದೆ ಇದ್ದೀಯಾ. ಇಡೀ ಕರ್ನಾಟಕ ನಿನ್ನನ್ನ ನೋಡ್ತಿದೆ. ಏನೇ ಮಾತನಾಡುವ ಮುನ್ನ ಯೋಚನೆ ಮಾಡಿ ಮಾತಾಡು. ಸುಮ್ಮನೆ ಮಾತನಾಡಿದರೆ, ಅದು ಎಲ್ಲೆಲ್ಲಿ ಲೀಡ್ ಆಗುತ್ತೋ ಗೊತ್ತಿಲ್ಲ. ನಾನು-ನೀನು ಮಾತನಾಡಿದಾಗ ತೊಂದರೆ ಆಗಲ್ಲ. ಈ ತರಹ ಮಾಡಿದಾಗ ತೊಂದರೆ ಆಗುತ್ತದೆ'' ಎಂದು ಅನುಪಮಾಗೆ ಜಗನ್ ಬುದ್ಧಿ ಮಾತು ಹೇಳಿದರು.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ಮಾತಾಡುವ ರೈಟ್ಸ್ ಇದೆ

''ನನಗೆ ಅರ್ಧಂಬರ್ಧ ಕೇಳಿಸಿದ್ದಕ್ಕೆ ಓಕೆ. ನನಗೆ ಗೊತ್ತಾಗದೆ ಇದ್ದಿದ್ರೆ...? ನನ್ನ ಬಗ್ಗೆ ಮಾತನಾಡು. ರೈಟ್ಸ್ ಇದೆ'' ಅಂತ ಜಗನ್ ಹೇಳುತ್ತಿದ್ದಂತೆಯೇ, ''ಅದನ್ನೇ ಇಪ್ಪತ್ತು ಬಾರಿ ಮಾತನಾಡಬೇಡ. ಆಗ್ಲಿಂದ ರೈಟ್ಸ್ ಬಗ್ಗೆ ಮಾತನಾಡುತ್ತಿದ್ದೀಯಾ'' ಎಂದು ಅನುಪಮಾ ಸ್ವಲ್ಪ ರಾಂಗ್ ಆದರು.

ಮತ್ತೆ ಜಗಳ

''ಅರ್ಥ ಮಾಡಿಸಲು ಟ್ರೈ ಮಾಡಿದೆ. ಓವರ್ ಆಗಿ ಆಡಿದರೆ, ಮಾತನಾಡಿಸುವುದನ್ನೇ ಬಿಟ್ಟುಬಿಡುತ್ತೇನೆ'' ಎಂದು ಜಗನ್ ಸಿಟ್ಟಾದರು.

ಕ್ಷಮೆ ಕೇಳಿದ ಅನುಪಮಾ

ಒಂದು ರೌಂಡ್ ಕಿತ್ತಾಟ ಆದ್ಮೇಲೆ, ತಿಂಡಿಯನ್ನು ತಿನಿಸುವ ಮೂಲಕ ಜಗನ್ ಗೆ ಅನುಪಮಾ ಕ್ಷಮೆ ಕೇಳಿದರು.

English summary
Bigg Boss Kannada 5: Week 5: Jagan is upset with Anupama Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada