»   » ನಟ ಜಗನ್ನಾಥ್ ಹೀಗೊಂದು ಶಪಥ ಮಾಡಿದ್ದಾರೆ.! ಏನದು.?

ನಟ ಜಗನ್ನಾಥ್ ಹೀಗೊಂದು ಶಪಥ ಮಾಡಿದ್ದಾರೆ.! ಏನದು.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಜಗನ್ ಒಂದು ಶಪಥ ಮಾಡಿದ್ದಾರಂತೆ | FIlmibeat Kannada

ತಮಗೆ ಹೆಣ್ಣು ಮಗು ಹುಟ್ಟಿದ ಮರು ಕ್ಷಣವೇ ಧೂಮಪಾನ ಮಾಡುವುದನ್ನು ನಿಲ್ಲಿಸುತ್ತಾರಂತೆ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್. ಹಾಗಂತ ಸ್ವತಃ ಜಗನ್ನಾಥ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ.

''ಮನಸ್ಸಿಗೆ ಬರುವ ತನಕ ಯಾರೂ ಕೂಡ ಸಿಗರೇಟ್ ಬಿಡಲು ಸಾಧ್ಯವಿಲ್ಲ'' ಎಂದು ಸಿಹಿ ಕಹಿ ಚಂದ್ರು ಕಾಮೆಂಟ್ ಮಾಡಿದರು. ಅದಕ್ಕೆ ''ನನಗೆ ಮಗಳು ಹುಟ್ಟಿದ ತಕ್ಷಣ ಬಿಟ್ಟು ಬಿಡುತ್ತೇನೆ'' ಎಂದರು ಜಗನ್ನಾಥ್.

ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

Bigg Boss Kannada 5: Jagannath to quit smoking after becoming father

''ಮಗಳು ಅಂತ ಯಾಕೆ.? ಹೆಣ್ಣು ಮಗು ಆಗದೆ, ಗಂಡು ಮಗು ಹುಟ್ಟಿದರೆ.?'' ಎಂಬ ಪ್ರಶ್ನೆಗಳು ಉದ್ಭವ ಆದಾಗ, ''ತಂದೆ ಆದ ಕೂಡಲೆ ಧೂಮಪಾನ ಬಿಡುತ್ತೇನೆ'' ಎಂದರು ಜಗನ್ನಾಥ್.

''ಸಿಗರೇಟ್ ಸೇದಿದ ಬಳಿಕ ಮಗುವನ್ನು ಎತ್ತಿಕೊಂಡಾಗ, ಮಗು ಒಂಥರಾ ಮುಖ ಮಾಡುತ್ತೆ. ಅದನ್ನ ಮಾತ್ರ ನೋಡಲು ಸಾಧ್ಯ ಇಲ್ಲ'' ಎಂದು ತಮ್ಮ ಅನುಭವವನ್ನು ಸಿಹಿ ಕಹಿ ಚಂದ್ರು ಇದೇ ಗ್ಯಾಪ್ ನಲ್ಲಿ ಹೇಳಿಕೊಂಡರು.

ಅಂದ್ಹಾಗೆ, ಜಗನ್ನಾಥ್ ಅವರಿಗೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟ. ಹೀಗಾಗಿ, ತಮಗೆ ಮಗಳೇ ಆಗಬೇಕು ಎಂಬುದು ಅವರ ಬಯಕೆ.

ವಿಶೇಷ ಸೂಚನೆ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ

English summary
Bigg Boss Kannada 5: Week 2: ''I will quit smoking once I become a father of a child'' says Jagannath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada