»   » 'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?

'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?

Posted By:
Subscribe to Filmibeat Kannada
'ಬಿಗ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಇವರೇ | Filmibeat Kannada

''ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?'' - ಈ ಪ್ರಶ್ನೆ ಕೇಳಿದ ಕೂಡಲೆ ನಿಮ್ಮ ತಲೆಯಲ್ಲಿ ಹಲವು ಸ್ಪರ್ಧಿಗಳ ಹೆಸರು ಬರಬಹುದು. ಆದ್ರೆ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರಿಗೆ ಮಾತ್ರ 'ಸಮೀರಾಚಾರ್ಯ ಅವರಿಗೆ ಯೋಗ್ಯತೆ ಇಲ್ಲ' ಎಂದೆನಿಸಿದೆ. ಹಾಗಂತ ಸ್ವತಃ ಜಯಶ್ರೀನಿವಾಸನ್ ಬಹಿರಂಗವಾಗಿ ಹೇಳಿದ್ದಾರೆ.

ಅಷ್ಟಕ್ಕೂ, ಜಯಶ್ರೀನಿವಾಸನ್ ಇದನ್ನೆಲ್ಲ ಹೇಳಿದ್ದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಇದೇನಪ್ಪಾ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಮುಗಿದು ಹೋಯ್ತಲ್ಲ ಅಂತ ಕನ್ ಫ್ಯೂಸ್ ಆಗಬೇಡಿ.

ಸಮೀರಾಚಾರ್ಯ ಮೇಲೆ ಅನುಪಮಾ ಗಂಭೀರ ಆರೋಪ ಮಾಡಿದ್ದು ಸರಿಯೇ.?

'ಬಿಗ್ ಬಾಸ್' ಮನೆಯಲ್ಲಿಯೇ 'ಬಿಗ್ ಬಾಸ್' ಮನೆಯ ಸದಸ್ಯರಿಗಾಗಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ನಿನ್ನೆ ನಡೆಯಿತು. 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಅಕುಲ್ ಬಾಲಾಜಿ ಆಗಮಿಸಿ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯೊಳಗೆ 'ಸೂಪರ್ ಟಾಕ್ ಟೈಮ್'

'ಬಿಗ್ ಬಾಸ್' ಮನೆಗೆ ಅಕುಲ್ ಬಾಲಾಜಿ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದರು. 'ಅಕುಲ್ ಕಮಾಲ್' ಎಂಬ ವಿಶೇಷ ಚಟುವಟಿಕೆ ಮುಗಿದ ಬಳಿಕ 'ಬಿಗ್ ಬಾಸ್' ಮನೆಯಲ್ಲಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ರೀತಿ 'ದಿಢೀರ್ ಬೆಂಕಿ' ಸುತ್ತು ನಡೆಯಿತು. ಮನೆಯ ಎಲ್ಲ ಸದಸ್ಯರು ಇದರಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಒಳ್ಳೆಯವರಿಗೆ ಕೋಪ ಬರಿಸುವುದು ದೊಡ್ಡ ಮುಠ್ಠಾಳತನ.!

ಜಯಶ್ರೀನಿವಾಸನ್ ಹೇಳಿದ್ದೇನು.?

''ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಒಬ್ಬ ಸದಸ್ಯರು ಯಾರು.?'' ಎಂದು ಜಯಶ್ರೀನಿವಾಸನ್ ಗೆ ಅಕುಲ್ ಬಾಲಾಜಿ ಕೇಳಿದರು.

ಆಟದಲ್ಲಿ ಸಮೀರಾಚಾರ್ಯ ಅಷ್ಟೊಂದು ರೊಚ್ಚಿಗೆದ್ದಿದ್ದು ಯಾಕೆ.?

ಜಯಶ್ರೀನಿವಾಸನ್ ಕೊಟ್ಟ ಉತ್ತರ ಏನು.?

''ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಒಬ್ಬ ಸದಸ್ಯರು ಯಾರು.?'' ಎಂದು ಅಕುಲ್ ಬಾಲಾಜಿ ಕೇಳಿದಾಗ ''ಸಮೀರಾಚಾರ್ಯ'' ಕಡೆ ಜಯಶ್ರೀನಿವಾಸನ್ ಬೆಟ್ಟು ಮಾಡಿ ತೋರಿಸಿದರು.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಚಂದನ್ ಶೆಟ್ಟಿಯನ್ನ ನಂಬಲ್ಲ.!

ಇನ್ನೂ, ''ನೀವು ನಂಬದೇ ಇರುವ ಮನೆಯ ಸದಸ್ಯ ಯಾರು.?'' ಎಂದು ಅಕುಲ್ ಕೇಳಿದಾಗ, ಜಯಶ್ರೀನಿವಾಸನ್ ''ಚಂದನ್ ಶೆಟ್ಟಿ'' ಎಂದರು.

ದೊಡ್ಡ ರಾದ್ಧಾಂತ ಆಗಲು, ಸಮೀರಾಚಾರ್ಯ ಸಿಟ್ಟಾಗಲು ನೇರ ಕಾರಣ ಅನುಪಮಾ.!

ತಿರುಗೇಟು ಕೊಟ್ಟ ಸಮೀರಾಚಾರ್ಯ

ಜಯಶ್ರೀನಿವಾಸನ್ ಬಳಿಕ ಸಮೀರಾಚಾರ್ಯ ಸರದಿ ಬಂದಾಗ, ''ಬಿಗ್ ಬಾಸ್' ಮನೆಯಲ್ಲಿ ಐವತ್ತು ದಿನ ಇರಲು ಅರ್ಹತೆ ಇಲ್ಲದವರು ಯಾರು.?'' ಎಂದು ಅಕುಲ್ ಪ್ರಶ್ನಿಸಿದರು. ಆಗ ''ಜಯಶ್ರೀನಿವಾಸನ್'' ಎಂದು ಹೇಳಲು ಮೂಲಕ ಸಮೀರಾಚಾರ್ಯ ತಿರುಗೇಟು ಕೊಟ್ಟರು.

ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ.!

'ದಿಢೀರ್ ಬೆಂಕಿ' ರೌಂಡ್ ನಿಂದಾಗಿ ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ನಡುವೆ ಬೆಂಕಿ ಹೊತ್ತಿಕೊಂಡಿರುವ ಹಾಗಿದೆ. ಮುಂದೇನಾಗುತ್ತೆ ಅಂತ ನೋಡ್ಬೇಕು.

English summary
Bigg Boss Kannada 5: Week 8: Jayasreenivasan speaks about Sameeracharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada