»   » ಜಯರಾಂ ಕಾರ್ತಿಕ್ ಮನಗೆದ್ದ ಚೆಲುವೆ ಶ್ರುತಿ ಪ್ರಕಾಶ್ ಅಲ್ಲ.! ಮತ್ಯಾರು.?

ಜಯರಾಂ ಕಾರ್ತಿಕ್ ಮನಗೆದ್ದ ಚೆಲುವೆ ಶ್ರುತಿ ಪ್ರಕಾಶ್ ಅಲ್ಲ.! ಮತ್ಯಾರು.?

Posted By:
Subscribe to Filmibeat Kannada
ಜಯರಾಂ ಕಾರ್ತಿಕ್ ಮನಗೆದ್ದ ಚೆಲುವೆ ಶ್ರುತಿ ಪ್ರಕಾಶ್ ಅಲ್ಲ.! ಮತ್ಯಾರು | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಮೊದಲ ವಾರದಿಂದಲೂ ಜಯರಾಂ ಕಾರ್ತಿಕ್ ಹಾಗೂ ಶ್ರುತಿ ಪ್ರಕಾಶ್ ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ. ಇಬ್ಬರ ನಡುವೆ ವಿಶೇಷ ಅನುಬಂಧ ಇದೆ.

ಕಾರ್ತಿಕ್ ಹಾಗೂ ಶ್ರುತಿ ನಡುವೆ ಕುಚ್ ಕುಚ್ ನಡೆಯುತ್ತಿದೆ ಅಂತ 'ಬಿಗ್ ಬಾಸ್' ಮನೆಯವರು ಮಾತನಾಡಿಕೊಂಡರೂ, ತಮ್ಮ ನಡುವಿನ ಬಾಂಧವ್ಯಕ್ಕೆ 'ಫ್ರೆಂಡ್ ಶಿಪ್' ಎಂಬ ಟೈಟಲ್ ಕೊಟ್ಟುಕೊಂಡಿದ್ದಾರೆ ಇವರಿಬ್ಬರು.

ಕಾರ್ತಿಕ್ ಹಾಗೂ ಶ್ರುತಿ ಪ್ರಕಾಶ್ ನಡುವೆ ಆತ್ಮೀಯತೆ ಬೆಳೆಯುತ್ತಿರುವಾಗಲೇ, ಮನೆಯ ಎಲ್ಲ ಮಹಿಳಾ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅಚ್ಚರಿ ಅಂದ್ರೆ, ಆ ಚಟುವಟಿಕೆಯಲ್ಲಿ ಜಯರಾಂ ಕಾರ್ತಿಕ್ ಮನಗೆದ್ದವರು ನಿವೇದಿತಾ ಗೌಡ.! ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ ಏನು.?

ಆಶಿತಾ, ಅನುಪಮಾ ಗೌಡ, ಕೃಷಿ, ಶ್ರುತಿ ಪ್ರಕಾಶ್ ಹಾಗೂ ನಿವೇದಿತಾ ಗೌಡಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅದರ ಅನುಸಾರ, ಸಮಯ ಸಂದರ್ಭ ನೋಡಿಕೊಂಡು ಇವರೆಲ್ಲರೂ ಕಾರ್ತಿಕ್ ಮನ ಗೆಲ್ಲಲು ಪ್ರಯತ್ನಿಸಬೇಕಿತ್ತು. ಒಟ್ಟಾಗಿ ಒಂದೇ ಸಮಯದಲ್ಲಿ ಪ್ರಯತ್ನಿಸದೇ, ಬುದ್ಧಿವಂತಿಕೆ ಮೂಲಕ ಕಾರ್ತಿಕ್ ಮನಗೆಲ್ಲಬೇಕಿತ್ತು. ಈ ವಿಶೇಷ ಚಟುವಟಿಕೆಯಲ್ಲಿ ಗೆದ್ದವರು 'ಬಿಗ್ ಬಾಸ್' ಆಯೋಜಿಸುವ ಔತಣಕೂಟದಲ್ಲಿ ಕಾರ್ತಿಕ್ ಜೊತೆ ಪಾಲ್ಗೊಳ್ಳಬಹುದಿತ್ತು.

ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ.!

ಇಂಪ್ರೆಸ್ ಮಾಡಿದ ನಿವೇದಿತಾ ಗೌಡ

ಮೊದಲು ಕಾರ್ತಿಕ್ ಹಾಡಿದ ಹಾಡಿಗೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಬಳಿಕ ಕಾರ್ತಿಕ್ ಗಾಗಿ ಒಂದು ಹಾಡು ಹಾಡಿದರು. ನಂತರ ಕಾರ್ತಿಕ್ ಜೊತೆ ಡ್ಯಾನ್ಸ್ ಮಾಡಿ ಐಸ್ ಕ್ರೀಮ್ ಕೂಡ ತಿನ್ನಿಸಿದರು ನಿವೇದಿತಾ.

ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿದ ಆಶಿತಾ

ಇನ್ನೂ ಜೆಕೆಗಾಗಿ ತಾವೇ ಒಂದು ಫ್ರೆಂಡ್ ಶಿಪ್ ಬ್ಯಾಂಡ್ ರೆಡಿ ಮಾಡಿ, ಜೆಕೆ ಕೈಗೆ ಕಟ್ಟಿದರು ಆಶಿತಾ.

ಪತ್ರ ಬರೆದ ಕೃಷಿ

ಜೆಕೆಗಾಗಿ ಒಂದು ಪತ್ರ ಬರೆದು, ಕೆಲ ಕಾಲ ಹರಟಿದರು ಕೃಷಿ ತಾಪಂಡ.

ಅನುಪಮಾ ಹೃದಯದ ಓಲೆ

ಇನ್ನೂ ಜೆಕೆ ಮನಸ್ಸು ಗೆಲ್ಲಲು ಅನುಪಮಾ ಗೌಡ ಕೂಡ ಪತ್ರ ಬರೆದು ಹಾಡು ಹಾಡಿದರು.

ಜೆಕೆ ಜೊತೆ ಶ್ರುತಿ ಪ್ರಕಾಶ್ ಡ್ಯುಯೆಟ್

''ಜಸ್ಟ್ ಮಾತ್ ಮಾತಲ್ಲಿ..'' ಹಾಡಿಗೆ ಜೆಕೆ ಹಾಗೂ ಶ್ರುತಿ ಪ್ರಕಾಶ್ ಡ್ಯುಯೆಟ್ ಹಾಡಿದರು. ಜೊತೆಗೆ ಜೆಕೆಗಾಗಿ ಶ್ರುತಿ ಪ್ರಕಾಶ್ ಬರೆದಿದ್ದ ಪತ್ರವನ್ನ ಓದಿದರು. ಇದೇ ವೇಳೆ ಜೆಕೆಗೆ ಶ್ರುತಿ ಪ್ರಕಾಶ್ ಐ ಲವ್ ಯು ಎಂದರು.

ನಿವೇದಿತಾಗೆ ಹೆಚ್ಚು ಅಂಕ ನೀಡಿದ ಜೆಕೆ

ಎಲ್ಲರಿಗೂ ಎಂಟು ಅಂಕ ನೀಡಿದ ಜೆಕೆ, ನಿವೇದಿತಾಗೆ ಮಾತ್ರ ಅರ್ಧ ಅಂಕ ಹೆಚ್ಚುವರಿಯಾಗಿ ನೀಡಿದರು. ಹೀಗಾಗಿ, ಈ ವಿಶೇಷ ಚಟುವಟಿಕೆಯಲ್ಲಿ ನಿವೇದಿತಾ ಗೌಡ ವಿಜೇತರಾದರು.

ವಿಶೇಷ ಔತಣಕೂಟ

ಟಾಸ್ಕ್ ಮುಗಿದ ಬಳಿಕ ಜೆಕೆ ಹಾಗೂ ನಿವೇದಿತಾ ಗೌಡ ರವರಿಗೆ 'ಬಿಗ್ ಬಾಸ್' ವಿಶೇಷ ಔತಣಕೂಟ ಆಯೋಜಿಸಿದರು.

English summary
Bigg Boss Kannada 5: Week 7: Niveditha Gowda wins Karthik Jayaram's heart

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada