»   » ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸಮೀರ್ ಆಚಾರ್ಯಗೆ ಸೀರಿಯಸ್ ನೆಸ್ ಇಲ್ಲ ಎಂದ ಜಗನ್ | Filmibeat Kannada

'ದೊಡ್ಮನೆ'ಯೊಳಗೆ ತಮ್ಮ ಆಚಾರ-ವಿಚಾರಗಳ ಜೊತೆಗೆ 'ಬಿಗ್ ಬಾಸ್' ನೀಡುತ್ತಿರುವ ಟಾಸ್ಕ್ ಗಳನ್ನ ತಮ್ಮ ಕೈಲಾದಷ್ಟು ಮಾಡುತ್ತಿರುವ ಸಮೀರಾಚಾರ್ಯ ರವರಿಗೆ ಸೀರಿಯಸ್‌ನೆಸ್ ಇಲ್ಲವಂತೆ.!

ಹಾಗಂತ ಹೇಳಿದವರು 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್.!

ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

Bigg Boss Kannada 5: Sameeracharya doesn't have seriousness says Jagannath

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರ 'ಮೊಟ್ಟೆ'ಯನ್ನು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಇದೇ ಟಾಸ್ಕ್ ವಿಚಾರವಾಗಿ ಮನೆಯೊಳಗೆ ಗದ್ದಲ-ಗಲಾಟೆ ಕೂಡ ನಡೆದಿದೆ.

ಈ ಎಲ್ಲದರ ನಡುವೆ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರಿಗೆ ಸೀರಿಯಸ್‌ನೆಸ್ ಇಲ್ಲ ಅಂತ ಜಗನ್ನಾಥ್ ಹೇಳಿದ್ದಾರೆ. ಸಮೀರಾಚಾರ್ಯ ಜೊತೆಗೆ ಮಾತನಾಡುತ್ತಿರುವಾಗಲೇ, ''ಟಾಸ್ಕ್ ನ ಎಲ್ಲರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ನಿಮಗೆ ಸೀರಿಯಸ್ ನೆಸ್ ಇಲ್ಲ. ಟಾಸ್ಕ್ ನಡೆಯುವಾಗ ನಮಗೂ ಹೊಟ್ಟೆ ಹಸಿವು ಇತ್ತು. ಆದ್ರೂ, ನಾವು ಹೋಗಿ ಊಟ ಮಾಡಿಲ್ಲ'' ಎಂದು ಜಗನ್ನಾಥ್ ಹೇಳಿದರು.

'ಬಿಗ್ ಬಾಸ್' ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ನಿಮಗೆಷ್ಟು ತಿಳಿದಿದೆ?

''ಇಡೀ 'ಬಿಗ್ ಬಾಸ್' ಗೇಮ್ ನ ನೀವು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ನನಗೂ ನನ್ನ ಆಚಾರ ಇದೆ. ಸ್ನಾನ ಮಾಡುವವರೆಗೂ ನಾನು ತಿಂಡಿ ತಿನ್ನಲ್ಲ. ಆದ್ರೆ, ಇಲ್ಲಿ ಅದೆಲ್ಲ ಮಾಡಲು ಆಗಲ್ಲ, ಬಿಡಲೇಬೇಕು. ಹಾಗಂತ ದೇವರು ನಮ್ಮ ಮೇಲೆ ಮುನಿಸಿಕೊಳ್ಳುವುದಿಲ್ಲ'' ಎಂದು ಸಮೀರಾಚಾರ್ಯ ರವರಿಗೆ ಜಗನ್ನಾಥ್ ಕಿವಿಮಾತು ಹೇಳಿದ್ದಾರೆ.

English summary
Bigg Boss Kannada 5: Week 2: Sameeracharya doesn't have seriousness says Jagannath

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X