»   » 'ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ 'ಆಶಿತಾ'.!

'ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ 'ಆಶಿತಾ'.!

Posted By:
Subscribe to Filmibeat Kannada
'ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ 'ಆಶಿತಾ' | Oneindia Kannada

''ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ ಅಂದ್ರೆ ಅದು ಆಶಿತಾ.!'' ಹಾಗಂತ ನಾವು ಹೇಳುತ್ತಿಲ್ಲ. ಬದಲಾಗಿ 'ಬಿಗ್ ಬಾಸ್' ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ. ಅದನ್ನ ಆಶಿತಾ ಕೂಡ ಒಪ್ಪಿಕೊಂಡಿದ್ದಾರೆ.

'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ, ಅಡುಗೆ ಮನೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಆಶಿತಾ, ಟಾಸ್ಕ್ ಗಳಲ್ಲಿ ಅಷ್ಟೇನು ಉತ್ಸಾಹದಿಂದ ಪಾಲ್ಗೊಳ್ಳುತ್ತಿಲ್ಲ.

ಇದನ್ನೆಲ್ಲ ಗಮನಿಸಿರುವ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಆಶಿತಾಗೆ ಕ್ಲಾಸ್ ತೆಗೆದುಕೊಂಡರು. ಮುಂದೆ ಓದಿರಿ...

ಉತ್ಸಾಹ ಇಲ್ಲದ ಸ್ಪರ್ಧಿ.!

''ಉತ್ಸಾಹ ಇಲ್ಲದೇ ಇರುವುದು ಅಂದ್ರೆ ಏನು.?'' ಎಂದು ಆಶಿತಾಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ನಾನು'' ಎಂದು ಆಶಿತಾ ಕೂಡ ಒಪ್ಪಿಕೊಂಡರು.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಇಷ್ಟೊಂದು ಬೇಜಾರು ಯಾಕೆ.?

''ಇಷ್ಟು ಬೇಜಾರಿನಿಂದ ಉಳಿಯುವುದಕ್ಕೆ 'ಬಿಗ್ ಬಾಸ್' ಮನೆಗೆ ಯಾಕೆ ಹೋದ್ರಿ.?'' ಎಂದು ಸುದೀಪ್ ಕೇಳಿದ್ದಕ್ಕೆ, ''ನಾನು ಬೇಜಾರಿನಿಂದ ಇಲ್ಲ. ಈ ವಾರ ನನಗೆ ಹುಷಾರಿರಲಿಲ್ಲ'' ಎಂದು ಆಶಿತಾ ಕಾರಣ ಕೊಟ್ಟರು.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ಉತ್ಸಾಹಿ ಜಾಗವನ್ನು ಕಿತ್ಕೊಂಡು ವೇಸ್ ಮಾಡುತ್ತಿದ್ದಾರೆ.!

''ಒಂದು ವಾರ ನೋಡಿ ಈ ಅಭಿಪ್ರಾಯಕ್ಕೆ ಬಂದಿಲ್ಲ. 43 ದಿನಗಳನ್ನು ಲೆಕ್ಕ ಹಾಕಿ ಈ ಅಭಿಪ್ರಾಯವನ್ನ ನಿಮ್ಮ ತನಕ ತಲುಪಿಸಿದ್ದೇವೆ. 'ಬಿಗ್ ಬಾಸ್' ಮನೆಯಲ್ಲಿ ವ್ಯಕ್ತಿತ್ವ, ಪ್ರತಿಭೆ, ಕಲೆ ಪ್ರದರ್ಶನ ಮಾಡಬೇಕು ಎಂದು ಕೋಟ್ಯಾಂತರ ಜನ ಆಸೆ ಪಡುತ್ತಾರೆ. ಆದರೆ ಈ ಮನೆಯಲ್ಲಿ ಎಲ್ಲರನ್ನೂ ಹಾಕಲು ಆಗಲ್ಲ. ಆದ್ರೆ, ಉತ್ಸಾಹಿ ಸ್ಪರ್ಧೆಯ ಜಾಗವನ್ನ ತಾವು ಕಿತ್ಕೊಂಡು ಅದನ್ನ ವೇಸ್ಟ್ ಮಾಡುವ ಮೂಲಕ ಯಾವ ಸಾಧನೆ ಕೂಡ ಆಗಲ್ಲ. ಇದು ಒಳ್ಳೆಯದಲ್ಲ'' ಎಂದು ಸುದೀಪ್ ಹೇಳಿದರು.

ನಿಮ್ಮ ಅಭಿಪ್ರಾಯ ಏನು.?

'ಬಿಗ್ ಬಾಸ್' ಮನೆಯಲ್ಲಿ ಆಶಿತಾ ಆಟದ ವೈಖರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನ ನಮಗೆ ತಿಳಿಸಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ....

English summary
Bigg Boss Kannada 5: Week 6: Sudeep advices Ashita

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada