»   » ಸಮೀರಾಚಾರ್ಯ ಮೇಲೆ ಅನುಪಮಾ ಗಂಭೀರ ಆರೋಪ ಮಾಡಿದ್ದು ಸರಿಯೇ.?

ಸಮೀರಾಚಾರ್ಯ ಮೇಲೆ ಅನುಪಮಾ ಗಂಭೀರ ಆರೋಪ ಮಾಡಿದ್ದು ಸರಿಯೇ.?

Posted By:
Subscribe to Filmibeat Kannada
ಸಮೀರಾಚಾರ್ಯ ಮೇಲೆ ಅನುಪಮಾ ಗಂಭೀರ ಆರೋಪ ಮಾಡಿದ್ದು ಸರಿಯೇ ? | Filmibeat Kannada

''ಬಿಗ್ ಬಾಸ್' ನೀಡಿದ್ದ ಬಲೂನ್ ಟಾಸ್ಕ್ ನಲ್ಲಿ ಹುಡುಗಿಯರ ಜೊತೆ ಸಮೀರಾಚಾರ್ಯ ನಡೆದುಕೊಂಡ ರೀತಿ ಸರಿ ಇರಲಿಲ್ಲ'' ಎಂದು ಸಮೀರಾಚಾರ್ಯ ವಿರುದ್ಧ ಅನುಪಮಾ ಗೌಡ ಗಂಭೀರ ಆರೋಪ ಮಾಡಿದ್ದರು.

ಜೊತೆಗೆ ''ಹೆಣ್ಮಕ್ಳು ಮೈ ಮುಟ್ಟುವುದು ಅಂದ್ರೆ ನನಗೆ ಆಗಲ್ಲ'' ಎಂದು ಜಗನ್ ಕೂಡ ಸಮೀರಾಚಾರ್ಯ ಮೇಲೆ ಜೋರು ಮಾಡಿದ್ದರು.

ಇಂತಹ ಗಂಭೀರ ಆರೋಪಗಳನ್ನು ಕೇಳಿಸಿಕೊಂಡ ಬಳಿಕ ಸಮೀರಾಚಾರ್ಯ ಸಿಕ್ಕಾಪಟ್ಟೆ ಬೇಸರಗೊಂಡಿದ್ದರು. ಅಷ್ಟಕ್ಕೂ, ಸಮೀರಾಚಾರ್ಯ ವಿರುದ್ಧ ನಟಿ ಅನುಪಮಾ ಗೌಡ ಮಾಡಿದ ಆರೋಪ ಸರಿಯೇ.? ಈ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದು ಏನು.? ಮುಂದೆ ಓದಿರಿ....

ಅನುಪಮಾ ಕನ್ ಫ್ಯೂಸ್ ಮಾಡಿಕೊಂಡ್ರಾ.?

''ಅನುಪಮಾ ಅವರೇ, ಬಲೂನ್ ಟಾಸ್ಕ್ ನಲ್ಲಿ ನಿಮಗೆ ಏನಾದರೂ ಕನ್ ಫ್ಯೂಶನ್ ಆಯ್ತಾ.? ಸಮೀರಾಚಾರ್ಯ ಹುಡುಗಿಯರ ಜೊತೆ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ, ಕಣ್ಣಾರೆ ನೋಡಿದ್ದೇನೆ ಅಂತ ಹೇಳಿದ್ರಿ'' ಎಂದು ಅನುಪಮಾ ಗೌಡರನ್ನ ಸುದೀಪ್ ಪ್ರಶ್ನಿಸಿದರು.

'ಬಿಗ್ ಬಾಸ್' ಮನೆಯಿಂದ ಹೊರ ಹೋಗ್ತಾರಂತೆ ನಟಿ ಅನುಪಮಾ ಗೌಡ.!

ಅನುಪಮಾ ಕೊಟ್ಟ ಉತ್ತರ ಏನು.?

''ಸಮೀರಾಚಾರ್ಯ ಒಬ್ಬರೇ ಅಂತ ಅಲ್ಲ. ಹುಡುಗರು ಬಲೂನ್ ನ ಬಿಟ್ಟು ಮನುಷ್ಯರನ್ನ ಹಿಡಿದುಕೊಳ್ಳಲು ಶುರು ಮಾಡಿದರು. ನನಗೂ ಆ ಅನುಭವ ಆಯ್ತು. ಹೀಗಾಗಿ ನಾನು ಜಗನ್ ಬಳಿ ಹೋಗಿ ಹೇಳಿದೆ'' ಎಂದು ಅನುಪಮಾ ಗೌಡ ಸಮರ್ಥಿಸಿಕೊಂಡರು.

ದೊಡ್ಡ ರಾದ್ಧಾಂತ ಆಗಲು, ಸಮೀರಾಚಾರ್ಯ ಸಿಟ್ಟಾಗಲು ನೇರ ಕಾರಣ ಅನುಪಮಾ.!

ಸಮೀರಾಚಾರ್ಯ ಮಾತ್ರ ಹಾಗೆ ಮಾಡಿದ್ರಾ.?

''ನಿಮ್ಮ ಅನಿಸಿಕೆ ಬಗ್ಗೆ ಗೌರವ ಇದೆ. ಆದ್ರೆ, ನೀವು-ಜಗನ್ ಮಾತನಾಡಿದ ರೀತಿಯಿಂದ ಸಮೀರಾಚಾರ್ಯ ಮಾತ್ರ ಹಾಗೆ ಮಾಡಿದರು ಎನ್ನುವ ರೀತಿ ಆಯ್ತು'' ಎಂದು ಸುದೀಪ್ ಹೇಳಿದ್ದಕ್ಕೆ, ''ಹೌದು ನಿಜ'' ಎಂದು ಅನುಪಮಾ ಗೌಡ ಒಪ್ಪಿಕೊಂಡರು.

ನಟಿ ಅನುಪಮಾ ಗೌಡ 'ಬಿಗ್ ಬಾಸ್' ಮನೆಯ ಡ್ರಾಮಾ ಕ್ವೀನ್ ಅಂತೆ.!

ಬೇಕು ಅಂತ ಯಾರೂ ಮಾಡಿಲ್ಲ...

''ಒಂದು ಮನೆಯಲ್ಲಿ ಐವತ್ತು ದಿನಗಳಿಂದ ಇದ್ದೀರಾ. ಗೊತ್ತೋ, ಗೊತ್ತಿಲ್ಲದೆಯೋ ನೀವೆಲ್ಲರೂ ಒಂದು ಕುಟುಂಬದಂತೆ ಆಗಿದ್ದೀರಾ. ಅಲ್ಲಿ ಯಾರಿಗೂ ಆ ತರಹ ಬರಲ್ಲ. ಟಾಸ್ಕ್ ನಲ್ಲಿ ತೊಡಗಿದಾಗ, ಯಾರೂ ಬೇಕು ಅಂತ ಮಾಡಲ್ಲ'' ಅಂತ ಸುದೀಪ್ ಹೇಳಿದಾಗ, ''ಬೇಕು ಅಂತ ಮಾಡ್ತಿದ್ದಾರೆ ಅಂತ ಹೇಳಿಲ್ಲ. ಮೈಮೇಲೆ ಬೀಳುವಾಗ ಗಮನ ಹರಿಸಬೇಕು ಅಂತ ಹೇಳಿದೆ ಅಷ್ಟೆ'' ಎಂದರು ಅನುಪಮಾ ಗೌಡ.

ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!

ಆಶಿತಾ ಮಾಡಿದ್ದು ಸರಿಯೇ.?

''ನೀವು ಸಮೀರಾಚಾರ್ಯ ಅವರನ್ನೇ ಕರೆದು ಹೇಳಿದಿದ್ರೆ ಪರ್ವಾಗಿಲ್ಲ. ಆದ್ರೆ, ನೀವು ಈ ರೀತಿ ಮಾಡಿದ್ರಿಂದ ಸಮೀರಾಚಾರ್ಯ ಮೇಲೆ ಕೆಟ್ಟ ಅಭಿಪ್ರಾಯ ಬಂದಂತೆ ಆಗಲ್ವಾ.? ಕೋಟ್ಯಾಂತರ ಜನ ನೋಡುತ್ತಿರುತ್ತಾರೆ. ಹಾಗೆ, ಹುಡುಗಿಯರು ಹೇಳಿದ ಮಾತನ್ನ ಎಲ್ಲರೂ ನಂಬುತ್ತಾರೆ. ಸರಿಯಾಗಿ ನೋಡಲು ಹೋದರೆ, ಟಾಸ್ಕ್ ನಲ್ಲಿ ಆಶಿತಾ ಅವರು ಸಮೀರಾಚಾರ್ಯ ಬೆನ್ನ ಮೇಲೆ ಕೂತುಕೊಂಡು ಕಿತ್ತಾಡಿದರು. ಯೋಚನೆ ಮಾಡಿ.... ಹೇಳಬೇಕು ಅನಿಸ್ತು, ಹೇಳ್ದೆ'' ಎಂದರು ಸುದೀಪ್.

ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

ಸಮೀರಾಚಾರ್ಯಗೆ ಸುದೀಪ್ ಬುದ್ಧಿವಾದ

''ಸಮೀರಾಚಾರ್ಯ ಅವರೇ, ಆಟವನ್ನ ಚೆನ್ನಾಗಿ ಆಡುತ್ತಿದ್ದೀರಾ. ಆದ್ರೆ, ಆಕ್ರಮಣಕಾರಿ ಆಗಬೇಡಿ. ಇದು ನನ್ನ ಮನವಿ'' ಎಂದರು ಸುದೀಪ್.

ಅಂದು ಅನುಪಮಾ ಹೇಳಿದ್ದೇನು.?

''ಆರಾಮಾಗಿ ಬಲೂನ್ ಹಾಕುವುದು ಟೆಕ್ನಿಕ್. ನೂಕುವುದು ಗುಮ್ಮುವುದು ಟೆಕ್ನಿಕ್ ಅಲ್ಲ. ಎಲ್ಲರಿಗೂ ಗುಮ್ಮುವುದಕ್ಕೆ ಬರುತ್ತೆ. ಹುಡುಗಿಯರಿಗೂ ಗುಮ್ಮುವುದಕ್ಕೆ ಬರುತ್ತೆ. ಯಾಕೆ ಹೀಗೆಲ್ಲ ಆಡುತ್ತಿದ್ದಾರೆ ಅಂತ ನಾನು ಕಣ್ಣಲ್ಲಿ ನೋಡುತ್ತಿದ್ದೇನೆ'' ಎಂದು ಬಲೂನ್ ಟಾಸ್ಕ್ ಮುಗಿದ ಮೇಲೆ ಜಗನ್ ಬಳಿ ಅನುಪಮಾ ಗೌಡ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

ಜೋರು ಮಾಡಿದ ಜಗನ್

''ಹೆಣ್ಮಕ್ಳು ಮೈ ಮುಟ್ಟುವುದು ಅಂದ್ರೆ ನನಗೆ ಆಗಲ್ಲ'' ಎಂದು ಜಗನ್ ಕೂಡ ಇದೇ ಸಮಯದಲ್ಲಿ ಸಮೀರಾಚಾರ್ಯ ಮೇಲೆ ಜೋರು ಮಾಡಿದರು

ಕಣ್ಣೀರಿಟ್ಟಿದ್ದ ಸಮೀರಾಚಾರ್ಯ

ಅನುಪಮಾ ಮತ್ತು ಜಗನ್ ಮಾತನಾಡಿದ ರೀತಿ ನೋಡಿ ರಿಯಾಝ್ ಜೊತೆ ಕೂತು ಕಣ್ಣೀರಿಡುತ್ತಾ ಸಮೀರಾಚಾರ್ಯ ಬೇಸರ ವ್ಯಕ್ತಪಡಿಸಿದರು.

English summary
Bigg Boss Kannada 5: Week 7: Sudeep questions Anupama Gowda

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada