»   » 'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.!

'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.!

Posted By:
Subscribe to Filmibeat Kannada
Bigg Boss Kannada Season 5 : ಆಟವನ್ನ ಅರ್ಧಕ್ಕೆ ಬಿಟ್ಟು ಹೊರ ನಡೆದ ತೇಜಸ್ವಿನಿ

ನಾಲ್ಕು ವಾರಗಳಲ್ಲಿ ಇದೇ ಮೊದಲ ಬಾರಿಗೆ ನಾಮಿನೇಟ್ ಆಗಿದ್ದ ನಟಿ ತೇಜಸ್ವಿನಿ, ಎಲಿಮಿನೇಷನ್ ಪ್ರಕ್ರಿಯೆ ನಡೆಯುವ ಮೊದಲೇ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಟ್ಟಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಆಟವನ್ನ ಅರ್ಧಕ್ಕೆ ನಟಿ ತೇಜಸ್ವಿನಿ ಮೊಟಕುಗೊಳಿಸಿದ್ದಾರೆ. ತಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ತೇಜಸ್ವಿನಿ 'ಬಿಗ್ ಬಾಸ್' ಗೆ ಗುಡ್ ಬೈ ಹೇಳಿದ್ದಾರೆ. ಮುಂದೆ ಓದಿರಿ....

ಹೊರ ಹೋಗಲು ನಿರ್ಧರಿಸಿದ ನಟಿ ತೇಜಸ್ವಿನಿ

ಅನಾರೋಗ್ಯದ ಕಾರಣ ತಂದೆ ಆಸ್ಪತ್ರೆಗೆ ದಾಖಲಾಗಿರುವ ಸಂಗತಿಯನ್ನ 'ಬಿಗ್ ಬಾಸ್' ತೇಜಸ್ವಿನಿಗೆ ತಿಳಿಸಿದರು. ತೇಜಸ್ವಿನಿ ತಂದೆಗೆ ಕಿಡ್ನಿ ಫೇಲ್ಯೂರ್ ಆಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಸಮಯದಲ್ಲಿ ತೇಜಸ್ವಿನಿ ಇರುವಿಕೆಯನ್ನ ಆಕೆಯ ಕುಟುಂಬ ಬಯಸಿದ ಕಾರಣ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ತೇಜಸ್ವಿನಿ ನಿರ್ಧರಿಸಿದರು.

ದಿಢೀರ್ ಬೆಳವಣಿಗೆ: 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರಗೆ.?

ತಾಯಿ ಜೊತೆ ಮಾತನಾಡಿದ ಮೇಲೆ ನಿರ್ಧಾರ

'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕುಗೊಳಿಸುವ ಬಗ್ಗೆ ತಮ್ಮ ತಾಯಿ ಜೊತೆ ಮಾತನಾಡಿದ ಬಳಿಕ ತೇಜಸ್ವಿನಿ ನಿರ್ಧರಿಸಿದರು.

ಎಲ್ಲರನ್ನೂ ಕ್ಷಮೆ ಕೇಳಿದ ತೇಜಸ್ವಿನಿ

''ನಾನು ಯಾರ ಮನಸ್ಸನ್ನಾದರೂ, ನೋಯಿಸಿದ್ದರೆ ಕ್ಷಮಿಸಿ. ನಿಮ್ಮನ್ನೆಲ್ಲ ಬಿಟ್ಟು ಹೋಗಲು ನಿಜವಾಗಲೂ ನನಗೆ ಇಷ್ಟ ಇಲ್ಲ. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ತಂದೆಗೆ ಹುಷಾರಿಲ್ಲ. ನಾನು ಹೋಗಲೇಬೇಕು. ತುಂಬಾ ಸೀರಿಯಸ್ ಆಗಿದ್ದಾರಂತೆ. ನನ್ನ ತಂದೆ ಹುಷಾರಾಗಲಿ ಅಂತ ಎಲ್ಲರೂ ಪ್ರಾರ್ಥನೆ ಮಾಡಿ'' ಅಂತ 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ, ಸ್ಪರ್ಧಿಗಳ ಬಳಿ ತೇಜಸ್ವಿನಿ ಕೇಳಿಕೊಂಡರು.

ವಾಪಸ್ ಬರಲು ಇಷ್ಟ ಇದೆ.!

''ನನಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇಲ್ಲ. ಇಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದೆ. ನಿಜವಾಗಲೂ ಇಲ್ಲಿಗೆ ವಾಪಸ್ ಬರಬೇಕು ಅಂತ ನನಗೆ ಇಷ್ಟ ಇದೆ. 'ಬಿಗ್ ಬಾಸ್' ಮನಸ್ಸು ಮಾಡಿದರೆ ವಾಪಸ್ ಬರುತ್ತೇನೆ'' ಅಂತ ಇದೇ ಸಮಯದಲ್ಲಿ ತೇಜಸ್ವಿನಿ ಕೇಳಿಕೊಂಡರು.

English summary
Bigg Boss Kannada 5: Week 4: Tejaswini walks out of the show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada