»   » ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?

ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?

Posted By:
Subscribe to Filmibeat Kannada

ಮತ್ತೆತ್ತಿದ್ರೆ ನಂಬರ್ ಬಗ್ಗೆ ಮಾತನಾಡುವ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ಸಂಖ್ಯೆಗಳೇ ಪ್ರಪಂಚ. ಏನೇ ಆದರೂ, ಹೋದರೂ ಅದಕ್ಕೆ ನಂಬರ್ ತಳುಕು ಹಾಕುವ ಜಯಶ್ರೀನಿವಾಸನ್ ಕಂಡ್ರೆ ಚಂದನ್ ಶೆಟ್ಟಿ ಕೆಲ ದಿನಗಳಿಂದ ಉರಿದು ಬೀಳ್ತಿದ್ದಾರೆ.

ಹೀಗಾಗಿ ಈ ವಾರ ನಾಮಿನೇಟ್ ಆಗಿದ್ದ ಜಯಶ್ರೀನಿವಾಸನ್, 'ಬಿಗ್ ಬಾಸ್' ಮನೆಯಿಂದ ಔಟ್ ಆಗಬೇಕು ಎಂಬುದು ಚಂದನ್ ಶೆಟ್ಟಿ ಬಯಕೆ. ಇದನ್ನೇ, ತಮ್ಮ ಆತ್ಮೀಯ ದಿವಾಕರ್ ಬಳಿ ಹೇಳಿಕೊಂಡಿದ್ದಾರೆ ಚಂದನ್ ಶೆಟ್ಟಿ.

'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!

Bigg Boss Kannada 5: Week 10: Chandan Shetty speaks about Jayasreenivasan

''ಜಯಶ್ರೀನಿವಾಸನ್ ಹೊರಗೆ ಹೋಗಬೇಕು. ಅವರು ಇರಬಾರದು. ನನಗೆ ಅವರ ಮೇಲೆ ಸಖತ್ ಬೇಜಾರಾಗಿದೆ. ಒಂದನೇ ನಂಬರ್, ಆರನೇ ನಂಬರ್ ಪಕ್ಕ ಕುಳಿತುಕೊಳ್ಳಬೇಕು ಅಂತಾರೆ. ನಾವೇನು ಹೊಲಸಾ.? ಅವೆಲ್ಲ ನಡೆಯಲ್ಲ ಇಲ್ಲಿ...'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಚಂದನ್ ಶೆಟ್ಟಿ.

ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!

Bigg Boss Kannada 5: Week 10: Chandan Shetty speaks about Jayasreenivasan

ಜೊತೆಗೆ, ''ಏನದು.. ಲೆಕ್ಕಾಚಾರನಾ... ಮನುಷ್ಯನಿಗೆ ಕೊಡುವ ಮರ್ಯಾದೆನಾ.? ನನ್ನ ಪಕ್ಕ ಅವರು ಕೂರಬಾರದಂತೆ... ಇದು ಮನುಷ್ಯನಿಗೆ ಕೊಡುವ ಗೌರವನಾ.? ನೀನು ಎಂಟನೇ ನಂಬರ್, ಲೋ ಶನಿಮಹಾತ್ಮ ನಿನ್ನ ಪಕ್ಕ ಕೂರಲ್ಲ ಅಂತಾರೆ'' ಎಂದು ಜಯಶ್ರೀನಿವಾಸನ್ ಹೇಳಿದ್ದನ್ನ, ದಿವಾಕರ್ ಬಳಿ ನೆನಪಿಸಿಕೊಳ್ಳುತ್ತಾ ಚಂದನ್ ಶೆಟ್ಟಿ ತಮ್ಮ ಅಸಮಾಧಾನವನ್ನ ಹೊರಹಾಕಿದರು.

English summary
Bigg Boss Kannada 5: Week 10: ''Jayasreenivasan doesn't respect people'' says Chandan Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X