»   » ಇದು ಸಂಖ್ಯೆಗಳ ಸಮಸ್ಯೆ: ಒಂದಕ್ಕೂ ಎಂಟಕ್ಕೂ ಆಗ್ಬರಲ್ಲಪ್ಪೋ.!

ಇದು ಸಂಖ್ಯೆಗಳ ಸಮಸ್ಯೆ: ಒಂದಕ್ಕೂ ಎಂಟಕ್ಕೂ ಆಗ್ಬರಲ್ಲಪ್ಪೋ.!

Posted By:
Subscribe to Filmibeat Kannada

ಇಡೀ 'ಬಿಗ್ ಬಾಸ್' ಮನೆಗೆ ಒಂದು ಚಿಂತೆ ಆಗಿದ್ದರೆ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ಸದಾ ಕಾಲ ನಂಬರ್ ಗಳದ್ದೇ ಚಿಂತೆ. ಮನೆಯಲ್ಲಿ ಏನೇ ಆಗಲಿ, ಯಾರೇ ಬರಲಿ.. ಹೋಗಲಿ, ಎಲ್ಲದಕ್ಕೂ ನಂಬರ್ ಗಳನ್ನು ಲೆಕ್ಕ ಹಾಕಿ ತಾಳೆ ಹಾಕುವುದರಲ್ಲಿಯೇ ಜಯಶ್ರೀನಿವಾಸನ್ ಬಿಜಿ. ನಿನ್ನೆ ಆಗಿದ್ದೂ ಕೂಡ ಅದೇ.!

ಅತ್ತ ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡಿದ್ಮೇಲೆ, ಇಡೀ ಮನೆ ಆತಂಕದಲ್ಲಿತ್ತು. ಇತ್ತ ಜಯಶ್ರೀನಿವಾಸನ್ ಮಾತ್ರ ಒಂದನೇ ನಂಬರ್ ಗೂ ಎಂಟನೇ ನಂಬರ್ ಗೂ ಆಗ್ಬರಲ್ಲ ಅಂತ ಕೂಡಿ ಕಳೆಯುವ ಲೆಕ್ಕ ಮಾಡುತ್ತಿದ್ದರು.

Bigg Boss Kannada 5: Week 10: Jayasreenivasan's numerological calculation over Samyuktha and Sameer

''ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ'' ಎಂದ ನಟ ಜಗ್ಗೇಶ್

ಸಮೀರಾಚಾರ್ಯ ರವರ ಸಂಖ್ಯೆ ಒಂದು. ಸಂಯುಕ್ತ ರವರ ಸಂಖ್ಯೆ ಎಂಟು. ಇನ್ನೂ ಇಬ್ಬರ ನಡುವೆ ಗಲಾಟೆ ಆದ ದಿನದ ಸಂಖ್ಯೆ ಒಂದು ಅಂತ ಜಯಶ್ರೀನಿವಾಸನ್ ಹೇಳುತ್ತಿರುವಾಗಲೇ, 'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೊರಬಿದ್ದರು.

'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!

ಹಾಗ್ನೋಡಿದ್ರೆ, ಸಂಯುಕ್ತ ಗೆ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಲ್ಲ. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಜಯಶ್ರೀನಿವಾಸನ್ ಹಾಗೂ ಅವರ ಸಂಖ್ಯೆಗಳಿಗೆ ನಮಸ್ಕಾರ ಹಾಕಿದ್ದರು ನಟಿ ಸಂಯುಕ್ತ. ಆದ್ರೀಗ, ಅದೇ ಸಂಯುಕ್ತ-ಸಮೀರಾಚಾರ್ಯ ನಡುವೆ ಕಿತ್ತಾಟ ನಡೆದಿದೆ. ಇಬ್ಬರ ನಡುವೆ ಜಗಳ ಆಗಲು ಸಂಖ್ಯೆ ಕಾರಣವೇ.? ನಮಗಂತೂ ಗೊತ್ತಿಲ್ಲ. ಆದ್ರೆ, ಜಗಳ ಆಗಿ 'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೊರಬಿದ್ದಿರುವುದು ಮಾತ್ರ ಸತ್ಯ.

English summary
Bigg Boss Kannada 5: Week 10: Jayasreenivasan's numerological calculation over Samyuktha Hegde and Sameer Acharya's fight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X