»   » ಮೊನ್ನೆ ಹಾಗೆ, ಇಂದು ಹೀಗೆ: ಅದ್ಭುತ ಅಂದ್ರೆ ಇದು ನೋಡಿ.!

ಮೊನ್ನೆ ಹಾಗೆ, ಇಂದು ಹೀಗೆ: ಅದ್ಭುತ ಅಂದ್ರೆ ಇದು ನೋಡಿ.!

Posted By:
Subscribe to Filmibeat Kannada

ದಿವಾಕರ್, ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ... ಈ ಮೂರು ಜನರ ಮುಖವನ್ನು ನೋಡಲು ಆಗುತ್ತಿಲ್ಲ ಅಂತ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಎದುರಿಗೆ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹೇಳಿದ್ದರು.

ಆದ್ರೆ, ಇಂದು ಅದೇ ಜಯಶ್ರೀನಿವಾಸನ್... ಅದೇ ದಿವಾಕರ್, ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ ಜೊತೆಗೆ ಮುಖ ಕೊಟ್ಟು ಮಾತನಾಡಿದ್ದಾರೆ. ತಾವು ಕೊಟ್ಟ ಹೇಳಿಕೆ ತಪ್ಪು ಎಂದು ಅರಿವಾದ ಮೇಲೆ ಮೂವರ ಜೊತೆಗೂ ಜಯಶ್ರೀನಿವಾಸನ್ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ, ಇವರೆಲ್ಲರೂ ಒಂದಾಗಿದ್ದರು. ಆದ್ರೆ, ದಿನಗಳ ಕಳೆದಂತೆ ಇವರುಗಳ ಮಧ್ಯೆ ಭಿನ್ನಾಭಿಪ್ರಾಯ ಭುಗೆಲೆದ್ದಿತು. ಸದ್ಯ ಮನಸ್ತಾಪವನ್ನ ಮರೆತಂತೆ ಕಾಣುವ ಜಯಶ್ರೀನಿವಾಸನ್, ಇಷ್ಟು ದಿನ ನಡೆಯುತ್ತಿದ್ದ ಶೀತಲ ಸಮರಕ್ಕೆ ಪೂರ್ಣವಿರಾಮ ಇಟ್ಟಂತೆ ಕಾಣುತ್ತಿದೆ. ಮುಂದೆ ಓದಿರಿ...

ಅಂದು ಸುದೀಪ್ ಮುಂದೆ ಹೇಳಿದ್ದೇನು.?

''ದಿವಾಕರ್ ನನ್ನ ಬಗ್ಗೆ ''420'' ಅಂತೆಲ್ಲ ಹೇಳಿದ್ದರು. ಅದನ್ನ ದೇವ್ರಾಣೆ ನನ್ನ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮನಸ್ಸಿನಲ್ಲಿಯೇ ಕೊರಗುತ್ತಿದ್ದೇನೆ. ''ನನಗೆ ಹೊಟ್ಟೆಕಿಚ್ಚು ಇದೆ, ತುಳಿದು ಮೇಲೆ ಬಂದಿದ್ದೇನೆ'' ಅಂತ ಸಮೀರಾಚಾರ್ಯ ಹೇಳಿದ್ದಾರೆ. ಈ ಮುಖಗಳನ್ನ ನಾನು ನೋಡಬಾರದು. ''ನಾನು ಹಾಡುತ್ತಿದ್ದರೆ, 'ಓಡಿಸ್ರೋ ಅವರನ್ನ' ಅಂತ ಚಂದನ್ ಶೆಟ್ಟಿ ಹೇಳ್ತಾರೆ. ಈ ಜನರನ್ನ ಫೇಸ್ ಮಾಡಲು ನನಗೆ ಆಗುತ್ತಿಲ್ಲ'' ಎಂದು ಸುದೀಪ್ ಮುಂದೆ ಜಯಶ್ರೀನಿವಾಸನ್ ಹೇಳಿಕೊಂಡಿದ್ದರು

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ಇಂದು ಜಯಶ್ರೀನಿವಾಸನ್ ಹೇಳಿದ್ದೇನು.?

ತಾವು ಆಡಿದ ಮಾತುಗಳನ್ನು ಪರಾಮರ್ಶಿಸಿಕೊಂಡ ನಂತರ ದಿವಾಕರ್, ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ ಜೊತೆ ಕೂತ ಜಯಶ್ರೀನಿವಾಸನ್, ತಮ್ಮ ಮಾತನ್ನ ಆರಂಭಿಸಿದ್ದು ಹೀಗೆ - ''ಗುರು ಅನ್ನೋದು ಹೇಗೆ ಅಂದ್ರೆ, ತಂದೆ ಮಕ್ಕಳ ಬೆರಳಣ್ಣು ಇಟ್ಟುಕೊಂಡು ಜಾತ್ರೆಗೆ ಕರ್ಕೊಂಡು ಹೋಗ್ತಾನಲ್ಲ... ಹಾಗೆ. ಮಕ್ಕಳು ಯಾಮಾರಿ ಸ್ವಲ್ಪ ಕೈಬಿಟ್ಟರೆ, ಕಳೆದು ಹೋಗ್ಬಿಡ್ತಾರೆ. ಆ ತರಹ ನಾವು ಗುರು ಕೈ ಹಿಡಿದುಕೊಂಡು ಬಿಟ್ಟರೆ, ನಮ್ಮನ್ನ ಎಲ್ಲಿ ಬಿಡಬೇಕೋ ಅಲ್ಲಿ ಬಿಡುತ್ತಾನೆ. ಇಲ್ಲ ಅಂದ್ರೆ ನಾವೇ ಕಳೆದು ಹೋಗಿರುವ ಮಕ್ಕಳಾಗುತ್ತೇವೆ''

'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?

ಎಲ್ಲರಿಗೂ ಇರಬೇಕಾದ ಗೌರವ ಇದೆ

ಜಯಶ್ರೀನಿವಾಸನ್ ಆಡಿದ ಮಾತುಗಳನ್ನ ಒಪ್ಪಿಕೊಳ್ಳುತ್ತಾ, ''ಈ ಮನೆಯಲ್ಲಿ ಅವರವರಿಗೆ ಇರುವ ಗೌರವ ಇದ್ದೇ ಇದೆ. ಅದನ್ನ ಯಾವತ್ತೂ ಅಳಿಸಲು ಸಾಧ್ಯ ಇಲ್ಲ'' ಎಂದು ದಿವಾಕರ್ ಹೇಳಿದರು.

ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?

ತಪ್ಪಿನ ಅರಿವಾಗಿದೆ

''ಮೊನ್ನೆ ಸುದೀಪ್ ಮುಂದೆ ನಿಮ್ಮ ಮೂರು ಜನರ ಮುಖವನ್ನ ನೋಡಲು ಆಗಲ್ಲ ಅಂತ ನಾನು ಹೇಳಿರಬಹುದು. ಆದ್ರೆ ಆಮೇಲೆ ಆಲೋಚನೆ ಮಾಡುತ್ತಿದ್ದೆ. ನಾನು ಆ ತರಹ ಹೇಳಿಕೆ ಕೊಟ್ಟಿದ್ದೇನೆ ಅಂದ್ರೆ 'ಬಿಗ್ ಬಾಸ್' ಮನೆಯಲ್ಲಿ 70 ದಿನ ಇದ್ದಿದ್ದಕ್ಕೆ ಪ್ರಯೋಜನ ಏನು.?'' ಎಂದು ತಮ್ಮನ್ನ ತಾವೇ ಪ್ರಶ್ನಿಸಿಕೊಂಡರು ಜಯಶ್ರೀನಿವಾಸನ್.

'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!

ಮತ್ತೆ ಸ್ನೇಹಿತರಾದ ದಿವಾಕರ್-ರಿಯಾಝ್

''ನಾನು ನಿನ್ನನ್ನ ಗೌರವಿಸುತ್ತೇನೆ. ನೀನು ಮನೆಗೆ ಹೋದ್ಮೇಲೆ ನಿನಗೆ ಗೊತ್ತಾಗುತ್ತದೆ'' ಎಂದು ಇದೇ ಸಮಯದಲ್ಲಿ ರಿಯಾಝ್ ಕೂಡ ಮುಂದೆ ಬಂದು ದಿವಾಕರ್ ರನ್ನ ಅಪ್ಪಿಕೊಂಡರು.

ಇನ್ಮೇಲೆ ಹೇಗೆ ಇರಬೇಕು.?

''ಇನ್ನೂ ನಾಲ್ಕು ವಾರದ ಇದೆ. ಇಷ್ಟು ದಿನದಲ್ಲಿ ಕೋಪ ಜಗಳ ಮಾಡಿಕೊಳ್ಳುವುದನ್ನು ಬಿಟ್ಟು ಆರಾಮಾಗಿ ನಗುನಗುತ್ತಾ ಇರಬೇಕು'' ಎಂದರು ದಿವಾಕರ್.

ಮುಂದೆ ಹೇಗೋ.?

ಇನ್ಮುಂದೆ ಜಗಳ ಆಡಬಾರದು ಎಂದು ದಿವಾಕರ್, ಜಯಶ್ರೀನಿವಾಸನ್, ರಿಯಾಝ್ ಹಾಗೂ ಸಮೀರಾಚಾರ್ಯ ತಲೆಯಲ್ಲಿ ಮೂಡಿದೆ. ಸದ್ಯ ಜಯಶ್ರೀನಿವಾಸನ್ ಸೀಕ್ರೆಟ್ ರೂಮ್ ಒಳಗೆ ಹೋಗಿದ್ದಾರೆ. ಮುಂದಿನ ಆಟ ಹೇಗಿರುತ್ತೋ... 'ಬಿಗ್ ಬಾಸ್' ಬಲ್ಲ.

English summary
Bigg Boss Kannada 5: Week 11: Jayasreenivasan ends rivalry with Diwakar, Chandan Shetty and Sameer Acharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X