»   » 'ಬಿಗ್ ಬಾಸ್' ಮನೆಯೊಳಗೆ ಎರಡನೇ ಬಾರಿ ಕ್ಯಾಪ್ಟನ್ ಆದ ರಿಯಾಝ್.!

'ಬಿಗ್ ಬಾಸ್' ಮನೆಯೊಳಗೆ ಎರಡನೇ ಬಾರಿ ಕ್ಯಾಪ್ಟನ್ ಆದ ರಿಯಾಝ್.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ಒಂದು ಬಾರಿ ಕ್ಯಾಪ್ಟನ್ ಆಗುವುದಕ್ಕೆ ಹರಸಾಹಸ ಪಡಬೇಕು. ಅಂಥದ್ರಲ್ಲಿ, 'ಕಾಮನ್ ಮ್ಯಾನ್' ರಿಯಾಝ್ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಕಳೆದ ವಾರ 'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆಯಲ್ಲಿ 'ಕೊಲೆಗಾರ'ರಾಗಿ ಅನುಪಮಾ ಗೌಡ ಹಾಗೂ ರಿಯಾಝ್ ಉತ್ತಮ ಪ್ರದರ್ಶನ ನೀಡಿದ್ದರು. ಇದನ್ನ ಆಧರಿಸಿ, ಇಬ್ಬರಿಗೂ ಕ್ಯಾಪ್ಟನ್ ಆಗುವ ಅವಕಾಶ ಕಲ್ಪಿಸಿದರು 'ಬಿಗ್ ಬಾಸ್'.

ಚಟುವಟಿಕೆಯಲ್ಲಿ ರಿಯಾಝ್ ತಂಡದ ನಿವೇದಿತಾ ಉತ್ತಮ ಪ್ರದರ್ಶನ ನೀಡಿದ ಕಾರಣ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರದ ಕ್ಯಾಪ್ಟನ್ ಆದರು ರಿಯಾಝ್. ಮುಂದೆ ಓದಿರಿ...

ಇಬ್ಬರಿಗೆ ಅರ್ಹತೆ ಇತ್ತ

'ಕೊಲೆಗಾರ'ರನ್ನ ಪತ್ತೆ ಹಚ್ಚುವ ವಿಶೇಷ ಚಟುವಟಿಕೆಯಲ್ಲಿ ರಿಯಾಝ್ ಹಾಗೂ ಅನುಪಮಾ ಗೌಡ 'ಬಿಗ್ ಬಾಸ್' ನೀಡಿದ ಎಲ್ಲ ಸೂಚನೆಗಳನ್ನೂ ಪಾಲಿಸಿ, ತಮ್ಮ ಕರ್ತವ್ಯವನ್ನ ಉತ್ತಮವಾಗಿ ನಿಭಾಯಿಸಿದರು. ಆದ ಕಾರಣ, ಇಬ್ಬರಿಗೂ ಈ ವಾರ ಕ್ಯಾಪ್ಟನ್ ಆಗುವ ಅರ್ಹತೆ ಇತ್ತು. ಅನುಪಮಾ ಹಾಗೂ ರಿಯಾಝ್ ಪೈಕಿ ಒಬ್ಬರಿಗೆ ಉಳಿದ ಸದಸ್ಯರು ಬೆಂಬಲ ನೀಡಬೇಕಿತ್ತು.

ಈ ಐವರಲ್ಲಿ ಒಬ್ಬರಿಗೆ ಈ ವಾರ 'ಬಿಗ್ ಬಾಸ್' ಆಟ ಅಂತ್ಯ.!

ಅನುಪಮಾಗೆ ಬೆಂಬಲ ನೀಡಿದವರು ಯಾರು.?

ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ಕೃಷಿ ತಾಪಂಡ ಹಾಗೂ ದಿವಾಕರ್... ಅನುಪಮಾ ಗೌಡ ಅವರಿಗೆ ಬೆಂಬಲ ನೀಡಿದರು.

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ರಿಯಾಝ್ ಗೆ ಬೆಂಬಲ ಕೊಟ್ಟವರು ಯಾರು.?

ಜಯಶ್ರೀನಿವಾಸನ್, ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಗೂ ಸಮೀರಾಚಾರ್ಯ... ರಿಯಾಝ್ ಅವರಿಗೆ ಬೆಂಬಲ ನೀಡಿದರು.

'ಬಿಗ್ ಬಾಸ್' ಸ್ಪರ್ಧಿಗಳ 'ವಿಚಿತ್ರ' ನಡವಳಿಕೆ ಕಂಡು ಬೇಸತ್ತ ಕಿಚ್ಚ ಸುದೀಪ್.!

'ಬಿಗ್ ಬಾಸ್' ಕೊಟ್ಟ ಚಟುವಟಿಕೆ ಏನು.?

ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗಾಗಿ, ಅನುಪಮಾ ಹಾಗೂ ರಿಯಾಝ್ ಪರವಾಗಿ ಅವರವರ ತಂಡದ ಒಬ್ಬೊಬ್ಬರನ್ನ ಗಮ್ ಟೇಪ್ ನಿಂದ ಗೋಡೆಗೆ ಭದ್ರವಾಗಿ ಅಂಟಿಸಿ ನಿಲ್ಲಿಸಬೇಕಿತ್ತು. ಅತಿ ಹೆಚ್ಚು ಸಮಯ ಗೋಡೆಗೆ ಗಮ್ ಟೇಪ್ ನಿಂದ ಅಂಟಿಕೊಂಡು ನಿಲ್ಲುವ ಸದಸ್ಯ ಚಟುವಟಿಕೆಯನ್ನ ಗೆಲ್ಲುತ್ತಾರೆ, ಹಾಗೇ ಅವರ ತಂಡದ ನಾಯಕ ಕ್ಯಾಪ್ಟನ್ ಆಗಿ ಆಯ್ಕೆ ಆಗಲಿದ್ದಾರೆ.

ಹೇಗೆ ನಿಂತಿದ್ದಾರೆ ನೋಡಿ...

ಅನುಪಮಾ ತಂಡದಿಂದ ಶ್ರುತಿ ಅವರನ್ನ ಗಮ್ ಟೇಪ್ ನಿಂದ ಅಂಟಿಸಿದರೆ, ರಿಯಾಝ್ ತಂಡದಿಂದ ನಿವೇದಿತಾ ಅವರನ್ನ ಗಮ್ ಟೇಪ್ ನಿಂದ ಅಂಟಿಸಲಾಗಿತ್ತು.

ನಿವೇದಿತಾ ಕೃಪೆಯಿಂದ ಕ್ಯಾಪ್ಟನ್ ಆದ ರಿಯಾಝ್

ಅತಿ ಹೆಚ್ಚು ಕಾಲ ಗೋಡೆ ಮೇಲೆ ಅಂಟಿಕೊಂಡೇ ನಿವೇದಿತಾ ಗೌಡ ನಿಂತಿದ್ದರು. ಹೀಗಾಗಿ, ನಿವೇದಿತಾ ಬೆಂಬಲಿಸಿದ್ದ ರಿಯಾಝ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆದರು.

English summary
Bigg Boss Kannada 5: Week 10: Riyaz becomes captain for the second time, Thanks to Niveditha Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X