»   » 'ಬಿಗ್' ಮನೆಗೆ ಮಧ್ಯರಾತ್ರಿ ರೀಎಂಟ್ರಿಕೊಟ್ಟ ದಿವಾಕರ್

'ಬಿಗ್' ಮನೆಗೆ ಮಧ್ಯರಾತ್ರಿ ರೀಎಂಟ್ರಿಕೊಟ್ಟ ದಿವಾಕರ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ವಾರ.. ಅಂದ್ರೆ, ಹನ್ನೊಂದನೇ ವಾರ ಹೊರಬಂದಿದ್ದ ದಿವಾಕರ್ ನೇರವಾಗಿ ಸೀಕ್ರೆಟ್ ರೂಮ್ ಒಳಗೆ ತೆರಳಿದ್ದರು. ನಾಲ್ಕು-ಐದು ದಿನಗಳ ಕಾಲ ಸೀಕ್ರೆಟ್ ರೂಮ್ ನಲ್ಲಿ ಇದ್ದು ಸ್ಪರ್ಧಿಗಳ ಲಕ್ಷುರಿ ಬಜೆಟ್ ಟಾಸ್ಕ್ ವೀಕ್ಷಿಸಿದ್ದ ದಿವಾಕರ್ ಇದೀಗ 'ಬಿಗ್ ಬಾಸ್' ಮನೆಯೊಳಗೆ ರೀ-ಎಂಟ್ರಿ ಕೊಟ್ಟಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಸುಮಾರು 1.20ಕ್ಕೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಿವಾಕರ್, ಯಾರಿಗೂ ಗೊತ್ತಾಗದ ಹಾಗೆ ಬೆಡ್ ರೂಮ್ ಒಳಗೆ ತೆರಳಿ ನಿದ್ದೆಗೆ ಜಾರಿದರು.

ಸೂರ್ಯೋದಯ ಆಗುತ್ತಿದ್ದಂತೆಯೇ, ದಿವಾಕರ್ ಮರಳಿ ಬಂದಿರುವ ವಿಷಯ ಚಂದನ್ ಶೆಟ್ಟಿಗೆ ಗೊತ್ತಾಯ್ತು. ದಿವಾಕರ್ ವಾಪಸ್ ಬಂದಿರುವುದು ಬಹುತೇಕ ಎಲ್ಲ ಸ್ಪರ್ಧಿಗಳಿಗೂ ಖುಷಿ ನೀಡಿದೆ. ಅದರಲ್ಲೂ, ದಿವಾಕರ್ ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ.

Bigg Boss Kannada 5: Week 12: Diwakar re-enters Bigg Boss house

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ತಾವು ಸೀಕ್ರೆಟ್ ರೂಮ್ ನಲ್ಲಿ ಇದ್ದ ಗುಟ್ಟನ್ನ ದಿವಾಕರ್ ಯಾರಿಗೂ ಬಿಟ್ಟು ಕೊಟ್ಟಿಲ್ಲ. ತಮ್ಮ ಮನೆಯಿಂದ ನೇರವಾಗಿ ಇಲ್ಲಿಗೆ ಬಂದೆ ಎಂದು ಎಲ್ಲ ಸ್ಪರ್ಧಿಗಳಿಗೂ ದಿವಾಕರ್ ಕಾಗೆ ಹಾರಿಸಿದ್ದಾರೆ.

ಅಸಲಿಗೆ, 'ಬಿಗ್ ಬಾಸ್' ಮನೆಯಿಂದ ದಿವಾಕರ್ ಎಲಿಮಿನೇಟ್ ಆಗಿರಲಿಲ್ಲ. ಅದಾಗಲೇ ಸೀಕ್ರೆಟ್ ರೂಮ್ ನಲ್ಲಿ ಇದ್ದ ಜಯಶ್ರೀನಿವಾಸನ್ ಮಾತ್ರ ಔಟ್ ಆಗಿದ್ದರು. ಟ್ವಿಸ್ಟ್ ಇರಲಿ ಎಂಬ ಕಾರಣಕ್ಕೆ, 'ಬಿಗ್ ಬಾಸ್' ಮನೆಯಿಂದ ದಿವಾಕರ್ ರನ್ನ ಹೊರಗೆ ಕರೆಯಿಸಿ, ಒಂದು ವಾರ ಸೀಕ್ರೆಟ್ ರೂಮ್ ಒಳಗೆ ಇರಿಸಲಾಗಿತ್ತು.

English summary
Bigg Boss Kannada 5: Week 12: Diwakar re-enters Bigg Boss House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X