»   » ಕ್ಯಾಪ್ಟನ್ ಶಿಪ್ ಎಂಬ ಪದವಿಗೆ ಅವಮಾನ ಮಾಡಿದ ಸಮೀರಾಚಾರ್ಯ.!

ಕ್ಯಾಪ್ಟನ್ ಶಿಪ್ ಎಂಬ ಪದವಿಗೆ ಅವಮಾನ ಮಾಡಿದ ಸಮೀರಾಚಾರ್ಯ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡು ಬಾರಿ ಕ್ಯಾಪ್ಟನ್ ಪಟ್ಟಕ್ಕೆ ಏರಿದವರ ಪೈಕಿ ಸಮೀರಾಚಾರ್ಯ ಕೂಡ ಒಬ್ಬರು. ನೀಡಲಾದ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಮೀರಾಚಾರ್ಯ ಹನ್ನೆರಡನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆದರು.

ಕಾಲನ್ನ ನೆಲಕ್ಕೆ ತಾಗಿಸದೇ, ಕೀಲಿಯನ್ನು ಕದಲಿಸದೇ, ಇಡೀ ರಾತ್ರಿ ನಿದ್ದೆ ಮಾಡದೆ ಹಾಸಿಗೆ ಮೇಲೆ ಕುಳಿತಿದ್ದ ಸಮೀರಾಚಾರ್ಯ ಕ್ಯಾಪ್ಟನ್ ಪಟ್ಟ ಅಲಂಕರಿಸಿದರು. ಆದ್ರೆ, ಕ್ಯಾಪ್ಟನ್ ಆದ್ಮೇಲೆ ತೂಕಡಿಸಲು ಆರಂಭಿಸಿದರು ಸಮೀರಾಚಾರ್ಯ.

ಇಡೀ ವಾರದಲ್ಲಿ ಮೂರು ಬಾರಿ ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿ 'ಎದ್ದೇಳು ಮಂಜುನಾಥ..' ಹಾಡನ್ನ ಪ್ಲೇ ಮಾಡಿಸಿಕೊಂಡರು ಕ್ಯಾಪ್ಟನ್ ಸಮೀರಾಚಾರ್ಯ. ಚಟುವಟಿಕೆ ಇಲ್ಲದ ವೇಳೆ ಆಗಿದ್ದರೆ ಪರ್ವಾಗಿಲ್ಲ. ಆದ್ರೆ, ಟಾಸ್ಕ್ ಚಾಲ್ತಿಯಲ್ಲಿ ಇರುವಾಗ, ಕನ್ಫೆಶನ್ ರೂಮ್ ಒಳಗೆ ಗೊರಕೆ ಹೊಡೆದಿದ್ದರು ಸಮೀರಾಚಾರ್ಯ. ಸಾಲದಕ್ಕೆ ನಿದ್ದೆ ಮಾಡಿಲ್ಲ ಎಂದು ಸುಳ್ಳು ಹೇಳಿದ್ದರು.

Bigg Boss Kannada 5: Week 12: Is Sameer Acharya the worst captain.?

ಇಡೀ ರಾತ್ರಿ ನಿದ್ದೆಗೆಟ್ಟು ಎರಡನೇ ಬಾರಿ ಕ್ಯಾಪ್ಟನ್ ಆದ ಸಮೀರಾಚಾರ್ಯ

ಇದನ್ನೆಲ್ಲ ನೋಡಿದ್ಮೇಲೆ, ''ಕ್ಯಾಪ್ಟನ್ ಶಿಪ್ ಎಂಬ ಪದವಿಗೆ ಅವಮಾನ. ಕ್ಯಾಪ್ಟನ್ ಪಟ್ಟಕ್ಕೆ ಏರಿದ್ಮೇಲೆ ಹೀಗೆ ಮಾಡಿದ್ದು ಸರಿಯಲ್ಲ'' ಎಂದರು ಸುದೀಪ್.

ಮೂರು ಬಾರಿ ಸಮೀರಾಚಾರ್ಯ ನಿದ್ದೆ ಮಾಡಿದ ಪರಿಣಾಮ, ಲಕ್ಷುರಿ ಬಜೆಟ್ ನಲ್ಲೂ ಪಾಯಿಂಟ್ ಗಳು ಕಟ್ ಆದ್ವು.

English summary
Bigg Boss Kannada 5: Week 12: Is Sameer Acharya the worst captain.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X