»   » ಬರೆದು ಇಟ್ಕೊಂಡ್ರೂ, ಜಯಶ್ರೀನಿವಾಸನ್ ಹೇಳಿದ್ದು ಸುಳ್ಳಾಯ್ತು.!

ಬರೆದು ಇಟ್ಕೊಂಡ್ರೂ, ಜಯಶ್ರೀನಿವಾಸನ್ ಹೇಳಿದ್ದು ಸುಳ್ಳಾಯ್ತು.!

Posted By:
Subscribe to Filmibeat Kannada
ಜೈ ಶ್ರೀನಿವಾಸನ್ ಎಲಿಮಿನೇಟ್ ಆದ ನಂತರದ ಈ ವಿಡಿಯೋ ಈಗ ವೈರಲ್ | Filmibeat Kannada

''ಬರೆದು ಇಟ್ಕೋ, ಇವತ್ತು ಲಕ್ಕಿ ಡೇಟ್... ನಾನು ಮತ್ತು ನಿವೇದಿತಾ ಈ ಮನೆಯಲ್ಲಿ ಹಂಡ್ರೆಡ್ ಡೇಸ್ ಇರುವುದು ಗ್ಯಾರೆಂಟಿ'' ಎಂದು ದಿವಾಕರ್ ಮುಂದೆ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದರು.

ಆದ್ರೆ, ಅಂದು ಜಯಶ್ರೀನಿವಾಸನ್ ನುಡಿದ ಭವಿಷ್ಯ ಸುಳ್ಳಾಗಿದೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹನ್ನೊಂದನೇ ವಾರಕ್ಕೆ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಔಟ್ ಆಗಿದ್ದಾರೆ.

ಹಾಗ್ನೋಡಿದ್ರೆ, ಜಯಶ್ರೀನಿವಾಸನ್ ಆಡಿರುವ ಮಾತಿನಲ್ಲಿ ಸದ್ಯ ಅರ್ಧ ಮಾತ್ರ ಸುಳ್ಳಾಗಿದೆ. ನಿವೇದಿತಾ ಇನ್ನೂ 'ಬಿಗ್ ಬಾಸ್' ಮನೆಯೊಳಗೇ ಇದ್ದಾರೆ. ಟಾಪ್ 5 ಹಂತಕ್ಕೆ ನಿವೇದಿತಾ ಗೌಡ ತಲುಪಿದರೂ ಅಚ್ಚರಿ ಪಡಬೇಕಿಲ್ಲ. ಮುಂದೆ ಓದಿರಿ...

ದಿವಾಕರ್ ಕೂಡ ಭವಿಷ್ಯ ನುಡಿದಿದ್ದರು.!

ನಿಜ ಹೇಳ್ಬೇಕಂದ್ರೆ, ''ನಾನು ಮತ್ತು ನಿವೇದಿತಾ ಈ ಮನೆಯಲ್ಲಿ ಹಂಡ್ರೆಡ್ ಡೇಸ್ ಇರುವುದು ಗ್ಯಾರೆಂಟಿ'' ಅಂತ ಜಯಶ್ರೀನಿವಾಸನ್ ಯಾವತ್ತು ಹೇಳಿದ್ದರೋ, ಅವತ್ತೇ ''ನೀವು ನೂರು ದಿನ ಇರಲ್ಲ'' ಎಂದು ದಿವಾಕರ್ ನುಡಿದಿದ್ದರು.

ಬರೆದು ಇಟ್ಕೊಳ್ಳಿ.. 'ಬಿಗ್ ಬಾಸ್'ನಲ್ಲಿ ಜಯಶ್ರೀನಿವಾಸನ್, ನಿವೇದಿತಾ 100 ದಿನ ಇರೋದು ಪಕ್ಕಾ.!

ಅಂದು ದಿವಾಕರ್ ಹೇಳಿದ್ದೇನು.?

''ದೇವ್ರಾಣೆ ನೀವು ಹಂಡ್ರೆಡ್ ಡೇಸ್ ಇರಲ್ಲ. ನೀವೇ ಗೆಲ್ಲುವ ಹಾಗಿದ್ದರೆ, ಕಷ್ಟ ಪಟ್ಟಿರುವವರು ಎಷ್ಟು ಜನ ಇದ್ದಾರೆ ಈ ಮನೆಯಲ್ಲಿ... ಅವರ ಕಥೆ ಏನಾಗಬೇಕು.? ಸುಖವಾಗಿ ಬಂದವರೆಲ್ಲ ಗೆಲ್ಲಲು ಆಗಲ್ಲ. ಇದು ನನ್ನ ಅನಿಸಿಕೆ'' ಎಂದು ದಿವಾಕರ್ ಅಂದು ಹೇಳಿದ್ದರು.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ಜಯಶ್ರೀನಿವಾಸನ್ ವಿಫಲ

ಅಂದು ದಿವಾಕರ್ ಹೇಳಿದಂತೆ, 'ಬಿಗ್ ಬಾಸ್' ಮನೆಯೊಳಗೆ ನೂರು ದಿನ ಇರಲು ಜಯಶ್ರೀನಿವಾಸನ್ ವಿಫಲರಾಗಿದ್ದಾರೆ. ವೀಕ್ಷಕರ ಬೆಂಬಲ ಇಲ್ಲ ಅಂದ್ರೆ 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ನೂರು ದಿನ ಇರುವುದಾದರೂ ಹೇಗೆ.?

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ಕೋಪ ಕಮ್ಮಿ ಮಾಡಿದಿದ್ರೆ.?

''ಇನ್ಮೇಲೆ ನಾನು ಕಿತ್ತಾಡದೆ, ಸ್ವಲ್ಪ ಸ್ಮಾರ್ಟ್ ಆಗಿರುತ್ತೇನೆ'' ಎಂದು ಜಯಶ್ರೀನಿವಾಸನ್ ಒಮ್ಮೆ ನಿರ್ಧಾರ ಮಾಡಿದ್ದರು. ಆದ್ರೆ, ದಿವಾಕರ್, ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ ಜೊತೆ ಜಯಶ್ರೀನಿವಾಸನ್ ವಾಕ್ಸಮರಕ್ಕಿಳಿದರು. ಇದೇ ಅವರ ನೂರು ದಿನಗಳ ಜರ್ನಿಗೆ ಮುಳ್ಳಾಯ್ತಾ.? 'ಬಿಗ್ ಬಾಸ್' ಬಲ್ಲ.!

English summary
Bigg Boss Kannada 5: Week 12: Jayasreenivasan's prediction turns out to be false.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X