»   » ಇಡೀ ರಾತ್ರಿ ನಿದ್ದೆಗೆಟ್ಟು ಎರಡನೇ ಬಾರಿ ಕ್ಯಾಪ್ಟನ್ ಆದ ಸಮೀರಾಚಾರ್ಯ

ಇಡೀ ರಾತ್ರಿ ನಿದ್ದೆಗೆಟ್ಟು ಎರಡನೇ ಬಾರಿ ಕ್ಯಾಪ್ಟನ್ ಆದ ಸಮೀರಾಚಾರ್ಯ

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಒಂದು ಬಾರಿ ಕ್ಯಾಪ್ಟನ್ ಆಗುವುದೇ ದೊಡ್ಡ ವಿಷಯ. ಅಂಥದ್ರಲ್ಲಿ ರಿಯಾಝ್ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಕಳೆದ ವಾರ ಆಯ್ಕೆ ಆಗಿದ್ದರು.

ಈಗ ರಿಯಾಝ್ ಆಪ್ತ ಗೆಳೆಯ ಸಮೀರಾಚಾರ್ಯ ಎರಡನೇ ಬಾರಿಗೆ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ನೀಡಲಾದ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಮೀರಾಚಾರ್ಯ, ರಾತ್ರಿ ಪೂರ್ತಿ ನಿದ್ದೆಗೆಟ್ಟು ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೆರಡನೇ ವಾರದ ಕ್ಯಾಪ್ಟನ್ ಆಗಿರುವುದರಿಂದ ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಿಂದ ಸಮೀರಾಚಾರ್ಯ ಸೇಫ್ ಆಗಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಗಾರ್ಡನ್ ಏರಿಯಾದಲ್ಲಿ ಕ್ಯಾಪ್ಟನ್ ಕೋಣೆಯ ಮಂಚದ ಪ್ರತಿಕೃತಿಯನ್ನ ಇರಿಸಲಾಗಿತ್ತು. ಅದರ ಮೇಲೆ ಕೊಡಲಾಗಿರುವ ಕೀಲಿಗಳನ್ನು ಅಲುಗಾಡಿಸದೇ ಅತಿ ಹೆಚ್ಚು ಕಾಲ ಯಾರು ಇರುತ್ತಾರೋ, ಅವರು ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದರು.

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ: ಪತ್ನಿ ಶ್ರಾವಣಿ ಆಕ್ರೋಶ

ಇಡೀ ರಾತ್ರಿ ನಿದ್ದೆಗೆಟ್ಟ ಸಮೀರಾಚಾರ್ಯ

ಸಂಜೆ 7.45 ರ ಸುಮಾರಿಗೆ ಟಾಸ್ಕ್ ಗೆ ಚಾಲನೆ ನೀಡಲಾಯಿತು. ಬೆಳಗ್ಗೆ 7 ಗಂಟೆ ವರೆಗೂ ತೂಕಡಿಸದೇ, ಕಾಲನ್ನು ನೆಲಕ್ಕೆ ತಾಗಿಸದೇ, ಕೀಲಿಯನ್ನು ಕದಲಿಸದೇ ಹಾಸಿಗೆ ಮೇಲೆ ಅತಿ ಹೆಚ್ಚು ಕಾಲ ಇದ್ದ ಸ್ಪರ್ಧಿ ಸಮೀರಾಚಾರ್ಯ. ಹೀಗಾಗಿ, ಸಮೀರಾಚಾರ್ಯ ಕ್ಯಾಪ್ಟನ್ ಪಟ್ಟ ಅಲಂಕರಿಸಿದರು.

ಸತ್ಯವನ್ನ ಸಮೀರಾಚಾರ್ಯ ಬಾಯ್ಬಿಟ್ರೆ ಶಿಕ್ಷೆ ಗ್ಯಾರೆಂಟಿ.!

ಕೊನೆ ಕ್ಷಣದಲ್ಲಿ ಕೈಬಿಟ್ಟ ಅನುಪಮಾ

ಬೆಳಗ್ಗೆ 7 ಗಂಟೆವರೆಗೂ ತೂಕಡಿಸದೇ, ಕೀಲಿಯನ್ನು ಅಲುಗಾಡಿಸದೇ ಇದ್ದ ಅನುಪಮಾ ಕೊನೆ ಕ್ಷಣದಲ್ಲಿ ಕ್ಯಾಪ್ಟನ್ ರೇಸ್ ನಿಂದ ಹೊರ ಬಿದ್ದರು.

ಅನುಪಮಾ ರನ್ನೇ ನಾಮಿನೇಟ್ ಮಾಡಿದ ಸಮೀರಾಚಾರ್ಯ

ಸಮೀರಾಚಾರ್ಯ ಕ್ಯಾಪ್ಟನ್ ಆದ ಕಾರಣ ಈ ವಾರ ಸೇಫ್ ಆದರು. ಜೊತೆಗೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಬ್ಬರನ್ನ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಕೂಡ ಅವರಿಗೆ ಇತ್ತು. ''ಅನುಪಮಾ ತಮಗೆ ಪ್ರಬಲ ಸ್ಪರ್ಧೆ ನೀಡುತ್ತಾರೆ' ಎಂಬ ಕಾರಣವನ್ನ ನೀಡಿ ಅನುಪಮಾ ರವರನ್ನೇ ಸಮೀರಾಚಾರ್ಯ ನೇರವಾಗಿ ನಾಮಿನೇಟ್ ಮಾಡಿದರು.

English summary
Bigg Boss Kannada 5: Week 12: Sameer Acharya becomes captain for the second time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X