»   » ಶ್ರುತಿ ತಲೆಕೆಡಿಸಿ, ದಿವಾಕರ್ ಕ್ಯಾಪ್ಟನ್ ಆಗುವುದನ್ನು ತಪ್ಪಿಸಿದ ಅನುಪಮಾ.!

ಶ್ರುತಿ ತಲೆಕೆಡಿಸಿ, ದಿವಾಕರ್ ಕ್ಯಾಪ್ಟನ್ ಆಗುವುದನ್ನು ತಪ್ಪಿಸಿದ ಅನುಪಮಾ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ನ ಕಂಡ್ರೆ ಅನುಪಮಾಗೆ ಆಗಲ್ವಾ? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲನೇ ವಾರದ ಕ್ಯಾಪ್ಟನ್ ಆಗಿದ್ದೇ ನಟಿ ಅನುಪಮಾ ಗೌಡ. ಹದಿಮೂರು ವಾರಗಳಲ್ಲಿ ರಿಯಾಝ್ ಮತ್ತು ಸಮೀರಾಚಾರ್ಯ ಮಾತ್ರ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಇರುವ ಎಂಟು ಸದಸ್ಯರ ಪೈಕಿ ದಿವಾಕರ್ ಮಾತ್ರ ಇನ್ನೂ ಒಮ್ಮೆ ಕೂಡ ಕ್ಯಾಪ್ಟನ್ ಆಗಿಲ್ಲ.

ಈ ವಾರ ದಿವಾಕರ್ ಕ್ಯಾಪ್ಟನ್ ಆಗುವ ಸಾಧ್ಯತೆ ಇತ್ತು. ಆದ್ರೆ, ಅದಕ್ಕೆ ನಟಿ ಅನುಪಮಾ ಗೌಡ ಕಲ್ಲು ಹಾಕಿದರು.

ದಿವಾಕರ್ ಅವರನ್ನ ಕ್ಯಾಪ್ಟನ್ ಮಾಡಲು ಚಂದನ್ ಶೆಟ್ಟಿ ಹಾಗೂ ಶ್ರುತಿ ಪ್ರಕಾಶ್ ಮನಸ್ಸು ಮಾಡಿದ್ದರು. ಆದ್ರೆ, ಶ್ರುತಿ ಪ್ರಕಾಶ್ ತಲೆ ಕೆಡಿಸಿ ಅನುಪಮಾ ಗೌಡ ಕ್ಯಾಪ್ಟನ್ ಪಟ್ಟಕ್ಕೆ ಏರಿದರು. ಅಷ್ಟಕ್ಕೂ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದ್ದು ಏನು.? ಸಂಪೂರ್ಣ ವರದಿ ಇಲ್ಲಿದೆ ಓದಿರಿ...

'ಬಿಗ್ ಬಾಸ್' ಕೊಟ್ಟಿದ್ದ ಟಾಸ್ಕ್ ಏನು.?

ಬಲೂನ್ ಗಳನ್ನು ಒಡೆದು ಆರು ವ್ಯಾಸಲೀನ್ ಚೀಟಿಗಳನ್ನು ಹುಡುಕುವ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಯಾರ ಬಳಿ ಅತಿ ಹೆಚ್ಚು ಚೀಟಿಗಳು ಇರುತ್ತವೆಯೋ, ಅವರು ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದರು.

ಕಾರಣ ಇಲ್ಲದೆ ಕೂಗಾಡುವ ನಟಿ ಅನುಪಮಾ ಗೌಡಗೆ ಬೆಂಡೆತ್ತಿದ ಸುದೀಪ್.!

ಚಂದನ್ ಗೆ ಸಿಕ್ಕಿತ್ತು ಎರಡು ಚೀಟಿ

ಆರು ವ್ಯಾಸಲೀನ್ ಚೀಟಿಗಳ ಪೈಕಿ ಚಂದನ್ ಶೆಟ್ಟಿಗೆ ಎರಡು ಚೀಟಿಗಳು ಸಿಕ್ಕಿದ್ದವು.

ಅನುಪಮಾ ಗೌಡಗೆ ಎರಡೆರಡು ಬಾರಿ ಸಿಕ್ತು ಸೂಪರ್ ಅಧಿಕಾರ.!

ಅನುಪಮಾಗೂ ಸೇಮ್ ಟು ಸೇಮ್

ಇತ್ತ ಅನುಪಮಾ ಗೌಡ ಅವರಿಗೂ ಎರಡು ವ್ಯಾಸಲೀನ್ ಚೀಟಿಗಳು ಲಭಿಸಿದ್ದವು.

ಶ್ರುತಿಗೆ ಒಂದು ಲಭಿಸಿತ್ತು

ಶ್ರುತಿ ಪ್ರಕಾಶ್ ಅವರಿಗೆ ಒಂದು ವ್ಯಾಸಲೀನ್ ಚೀಟಿ ಸಿಕ್ಕಿತ್ತು. ಇನ್ನೊಂದು ಚೀಟಿ ಯಾರಿಗೂ ಸಿಗಲಿಲ್ಲ.

ದಿವಾಕರ್ ಒಮ್ಮೆಯೂ ಕ್ಯಾಪ್ಟನ್ ಆಗಿಲ್ಲ.!

''ಇಲ್ಲಿಯವರೆಗೂ ಒಮ್ಮೆ ಕೂಡ ದಿವಾಕರ್ ಕ್ಯಾಪ್ಟನ್ ಆಗಿಲ್ಲ. ನನಗೆ ಸಿಕ್ಕ ಎರಡು ಚೀಟಿಗಳನ್ನು ದಿವಾಕರ್ ಗೆ ಕೊಡುತ್ತೇನೆ. ನಿನಗೆ ಸಿಕ್ಕ ಒಂದು ಚೀಟಿಯನ್ನು ದಿವಾಕರ್ ಗೆ ಕೊಡು'' ಎಂದು ಶ್ರುತಿ ಪ್ರಕಾಶ್ ಗೆ ಚಂದನ್ ಶೆಟ್ಟಿ ಕೇಳಿಕೊಂಡರು.

ಮೂಗು ತೂರಿಸಿದ ಅನುಪಮಾ

ತಮಗೆ ಸಿಕ್ಕ ಎರಡೂ ಚೀಟಿಗಳನ್ನೂ ದಿವಾಕರ್ ಗೆ ಚಂದನ್ ಶೆಟ್ಟಿ ಕೊಟ್ಟರೆ, ತಾನೂ ಕೊಡುತ್ತೇನೆ ಎಂದು ಶ್ರುತಿ ಪ್ರಕಾಶ್ ಹೇಳಿದರು. ಹೀಗಿರುವಾಗಲೇ, ಮಧ್ಯದಲ್ಲಿ ಮೂಗು ತೂರಿಸಿದರು ಅನುಪಮಾ ಗೌಡ.

ಬೇಡ ಎನ್ನುತ್ತಿದ್ದ ಅನುಪಮಾ

''ನೀನು ದಿವಾಕರ್ ಗೆ ಚೀಟಿ ಕೊಟ್ಟರೆ, ಅವರು ಚಂದನ್ ಶೆಟ್ಟಿಗೆ ಕೊಡ್ತಾರೆ. ಬೇಡ.. ಕೊಡಬೇಡ'' ಎಂದು ಶ್ರುತಿ ಪ್ರಕಾಶ್ ಗೆ ಹೇಳುತ್ತಿದ್ದರು ಅನುಪಮಾ ಗೌಡ. ''ದಿವಾಕರ್ ಒಮ್ಮೆ ಕೂಡ ಕ್ಯಾಪ್ಟನ್ ಆಗಿಲ್ಲ. ಅವರು ಈ ಬಾರಿ ಆಗಲಿ'' ಎಂದು ಶ್ರುತಿ ಹೇಳಿದರೂ, ''ಬೇಡ ಬೇಡ'' ಎನ್ನುತ್ತಿದ್ದರು ಅನುಪಮಾ.

ಅನುಗೆ ಜೈ ಎಂದ ಶ್ರುತಿ

ಅನುಪಮಾ ಮಾತಿನ ಮೇಲೆ ನಂಬಿಕೆ ಇಟ್ಟ ಶ್ರುತಿ ಪ್ರಕಾಶ್, ಕಡೆಗೆ ಅನುಪಮಾಗೆ ತಮ್ಮ ಚೀಟಿಯನ್ನ ಕೊಟ್ಟರು. ಅಲ್ಲಿಗೆ, ಅನುಪಮಾಗೆ ಮೂರು ಚೀಟಿ ಸಿಕ್ಕಂತಾಯಿತು.

ಸೋಲು ಒಪ್ಪಿಕೊಂಡ ದಿವಾಕರ್

''ಖುಷಿಯಿಂದ ಒಂದು ಬಾರಿ ಕ್ಯಾಪ್ಟನ್ ಆಗುತ್ತೇನೆ'' ಎಂದು ದಿವಾಕರ್ ಕೇಳಿಕೊಂಡರೂ, ಅದಕ್ಕೆ ಅನುಪಮಾ ಒಪ್ಪಲಿಲ್ಲ. ಕಡೆಗೆ ತಮ್ಮ ಬಳಿ ಇದ್ದ ಎರಡು ಚೀಟಿಗಳನ್ನು ದಿವಾಕರ್, ಅನುಪಮಾಗೆ ನೀಡಿದರು. ಅನುಪಮಾಗೆ ಐದು ಚೀಟಿ ಸಿಕ್ಕ ಪರಿಣಾಮ ಕ್ಯಾಪ್ಟನ್ ಆದರು.

ಚಂದನ್ ಶೆಟ್ಟಿ ಟಾರ್ಗೆಟ್

ಕ್ಯಾಪ್ಟನ್ ಪಟ್ಟಕ್ಕೆ ಏರಿದ್ಮೇಲೆ, ಚಂದನ್ ಶೆಟ್ಟಿ ಅವರನ್ನ ನೇರವಾಗಿ ನಾಮಿನೇಟ್ ಮಾಡಿದರು ಅನುಪಮಾ ಗೌಡ.

English summary
Bigg Boss Kannada 5: Week 13: Anupama Gowda becomes captain for the second time

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X