»   » ಪರಸ್ಪರ ಹಾರ ಬದಲಾಯಿಸಿಕೊಂಡ ಕುಚ್ಚಿಕು ಗೆಳೆಯರು ರಿಯಾಝ್ ಗೆ ಮಸಿ ಬಳಿದರು.!

ಪರಸ್ಪರ ಹಾರ ಬದಲಾಯಿಸಿಕೊಂಡ ಕುಚ್ಚಿಕು ಗೆಳೆಯರು ರಿಯಾಝ್ ಗೆ ಮಸಿ ಬಳಿದರು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ, ಗಾರ್ಡನ್ ಏರಿಯಾದಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದ ಚಂದನ್ ಶೆಟ್ಟಿ, ದಿವಾಕರ್, ರಿಯಾಝ್, ಸಮೀರಾಚಾರ್ಯ ಅಣ್ಣ-ತಮ್ಮಂದಿರಂತೆ, ಒಟ್ಟಾಗಿ ಒಂದು ಗುಂಪಿನಂತೆ ಇದ್ದರು.

ಆದ್ರೆ, ವಾರಗಳು ಕಳೆದಂತೆ 'ರೂಲ್ಸ್' ಬಗ್ಗೆ ಹೆಚ್ಚಾಗಿ ಮಾತನಾಡುವ ರಿಯಾಝ್ ಕಂಡ್ರೆ ಚಂದನ್ ಶೆಟ್ಟಿ ಹಾಗೂ ದಿವಾಕರ್ ಗೆ ಆಗ್ಬರುತ್ತಿರಲಿಲ್ಲ. ದಿವಾಕರ್ ಹಾಗೂ ರಿಯಾಝ್ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದು, ಅನೇಕ ಬಾರಿ ಗಲಾಟೆಯೂ ನಡೆದಿತ್ತು.

'ಬಿಗ್ ಬಾಸ್' ಮನೆಯೊಳಗೆ ಕುಚ್ಚಿಕ್ಕು ಗೆಳೆಯರಾಗಿರುವ ಚಂದನ್ ಶೆಟ್ಟಿ ಹಾಗೂ ದಿವಾಕರ್ ಇದೀಗ ಮತ್ತೊಮ್ಮೆ ರಿಯಾಝ್ ರನ್ನೇ ಟಾರ್ಗೆಟ್ ಮಾಡಿದ್ದಾರೆ. ರಿಯಾಝ್ ಮುಖಕ್ಕೆ ಮಸಿ ಬಳಿದು ಅವಮಾನಿಸಿದ್ದಾರೆ.

'ಬಿಗ್ ಬಾಸ್' ನೀಡಿದ್ದ 'ಮಸಿ-ಹಾರ' ಎಂಬ ವಿಶೇಷ ಚಟುವಟಿಕೆಯಲ್ಲಿ ರಿಯಾಝ್ ಹಾಗೂ ಸಮೀರಾಚಾರ್ಯ ಮುಖಕ್ಕೆ ಹೆಚ್ಚು ಮಸಿ ಮೆತ್ತಿಕೊಳ್ತು. ಮುಂದೆ ಒದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ ಏನು.

'ಬಿಗ್ ಬಾಸ್' ಮನೆಯೊಳಗಿನ ತಮ್ಮ ಸುದೀರ್ಘ ಪ್ರಯಾಣದಲ್ಲಿ ಇತರೆ ಸದಸ್ಯರ ಬಗ್ಗೆ ತಮಗೆ ಮೂಡಿರುವ ಅಭಿಪ್ರಾಯವನ್ನ ಹಂಚಿಕೊಳ್ಳಲು 'ಮಸಿ ಮತ್ತು ಹಾರ' ಎಂಬ ವಿಶೇಷ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ತಮಗೆ ಇಷ್ಟವಾದ ಸ್ಪರ್ಧಿಗೆ ಹಾರ ಹಾಕಿದರೆ, ಇಷ್ಟವಲ್ಲದ ಸ್ಪರ್ಧಿಯ ಮುಖಕ್ಕೆ ಮಸಿ ಬಳಿಯಬೇಕಿತ್ತು.

ಚಂದನ್ ಮಾಡ್ತಿರೋದು ಮನೆಹಾಳ ಕೆಲಸ: ಗುಂಡಿ ತೋಡಿ ಮಣ್ಣು ಹಾಕ್ತಿರೋದು ಇವರೇ.!

ರಿಯಾಝ್ ಮುಖಕ್ಕೆ ಮಸಿ ಬಳಿದವರು ಯಾರು.?

''ಅವರ ಕೆಲವು ವಿಚಾರಗಳು ನನಗೆ ಇಷ್ಟ ಆಗಲ್ಲ'' ಅಂತ ದಿವಾಕರ್, ''ಅವರಿಂದ ನನ್ನ ಮನಸ್ಸಿಗೆ ನೋವಾಗಿದೆ'' ಎಂದು ಚಂದನ್ ಶೆಟ್ಟಿ ಹಾಗೂ ''ವೈಯುಕ್ತಿಕವಾಗಿ ಕೆಲವು ವಿಚಾರಗಳನ್ನು ತೆಗೆದುಕೊಳ್ಳುತ್ತಾರೆ'' ಅಂತ ನಿವೇದಿತಾ ಕಾರಣ ನೀಡಿ ರಿಯಾಝ್ ಮುಖಕ್ಕೆ ಮಸಿ ಬಳಿದರು.

'ಗೋಮುಖ ವ್ಯಾಘ್ರ' ರಿಯಾಝ್ ಔಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ.!

ಸಮೀರಾಚಾರ್ಯ ಕಂಡ್ರೆ ಅಷ್ಟಕಷ್ಟೆ

''ಸರಿಯಾಗಿ ವಿಶ್ಲೇಷಣೆ ಮಾಡುವುದಿಲ್ಲ'' ಅಂತ ಶ್ರುತಿ ಪ್ರಕಾಶ್, ''ಅವರಿಗೆ ನೀಡಿದ್ದ ಗೌರವ ಉಳಿಸಿಕೊಳ್ಳಲಿಲ್ಲ'' ಎನ್ನುತ್ತಾ ಜಯರಾಂ ಕಾರ್ತಿಕ್, ''ನಿರ್ಧಾರಗಳನ್ನ ಯೋಚನೆ ಮಾಡಿ ತೆಗೆದುಕೊಳ್ಳುವುದಿಲ್ಲ'' ಅಂತ ಅನುಪಮಾ ಗೌಡ ಕಾರಣ ನೀಡಿ ಸಮೀರಾಚಾರ್ಯ ಮುಖಕ್ಕೆ ಮಸಿ ಬಳಿದರು.

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ಎಲ್ಲ ಓಕೆ ಸಮೀರಾಚಾರ್ಯ ಯಾಕೆ.?

''ಎಲಿಮಿನೇಟ್ ಆಗಿ ವಾಪಸ್ ಬಂದ್ಮೇಲೆ ಆಕ್ಟಿಂಗ್ ಮಾಡುತ್ತಿದ್ದಾರೆ. ಅವಶ್ಯಕತೆ ಇಲ್ಲದೇ ಇದ್ದರೂ ಹೊಗಳುತ್ತಿದ್ದಾರೆ. ಆದ್ರೆ, ಅವರಿಗೆ (ದಿವಾಕರ್) ನಾನು ಮಸಿ ಬಳಿಯುವುದಿಲ್ಲ'' ಅಂತ ಹೇಳ್ತಾ ಸಮೀರಾಚಾರ್ಯ ಮುಖಕ್ಕೆ ಮಸಿ ಬಳಿದರು ರಿಯಾಝ್. ಅದಕ್ಕೆ ಅವರು ಕೊಟ್ಟ ಕಾರಣ ಹೀಗಿತ್ತು - ''ಸಮೀರಾಚಾರ್ಯ ಅವರಿಗೆ ತಾಕತ್ತು ಇದೆ. ಈ ವಾರ ಅವರು ಬೆಸ್ಟ್ ಪರ್ಫಾಮರ್ ಆಗಲೇಬೇಕು. ಈ ಮಸಿಯನ್ನ ವಿಜಯದ ತಿಲಕ ತರಹ ತೆಗೆದುಕೊಳ್ಳಬೇಕು''

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಜೆಕೆ ಮುಖಕ್ಕೂ ಮಸಿ

''ಬಿಗ್ ಬಾಸ್' ಕಾರ್ಯಕ್ರಮ ಮುಗಿದ ಮೇಲೆ ಕೆಲವರನ್ನು ಭೇಟಿ ಆಗಲ್ಲ'' ಅಂತ ಹೇಳಿದ್ದಕ್ಕೆ ಜಯರಾಂ ಕಾರ್ತಿಕ್ ಮುಖಕ್ಕೆ ಸಮೀರಾಚಾರ್ಯ ಮಸಿ ಬಳಿದರು.

ಪರಸ್ಪರ ಹಾರ ಬದಲಾಯಿಸಿಕೊಂಡ ಕುಚ್ಚಿಕ್ಕು ಗೆಳೆಯರು

'ಬಿಗ್ ಬಾಸ್' ಮನೆಯೊಳಗೆ ಕುಚ್ಚಿಕ್ಕು ಗೆಳೆಯರಾಗಿರುವ ಚಂದನ್ ಶೆಟ್ಟಿ ಹಾಗೂ ದಿವಾಕರ್ ಪರಸ್ಪರ ಹಾರ ಬದಲಾಯಿಸಿಕೊಂಡರು.

ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

ಅಚ್ಚರಿ ಮೂಡಿಸಿದ ಶ್ರುತಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎರಡನೇ ವಾರ ದಿವಾಕರ್ ಗೆ ಕಳಪೆ ಬೋರ್ಡ್ ಕೊಟ್ಟು ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ದ ಶ್ರುತಿ, ಇದೀಗ ಅದೇ ದಿವಾಕರ್ ಗೆ ಹಾರ ಹಾಕಿದರು. ಅದು ''ದಿವಾಕರ್ ಮನಸ್ಸು ಶುದ್ಧ'' ಎಂಬ ಕಾರಣಕ್ಕೆ.

ಹೀಗೆ ಯಾಕಾಯ್ತೋ.?

ತಮ್ಮ ಆತ್ಮೀಯ ಸ್ನೇಹಿತ ರಿಯಾಝ್ ಗೆ ಸಮೀರಾಚಾರ್ಯ ಹಾರ ಹಾಕಿದರು. ಆದ್ರೆ, ''ಮಸಿಯನ್ನೇ ವಿಜಯ ತಿಲಕ ಎಂದುಕೊಳ್ಳಿ'' ಎನ್ನುತ್ತ ಸಮೀರಾಚಾರ್ಯಗೆ ರಿಯಾಝ್ ಮಸಿ ಬಳಿದರು. ಇನ್ನೂ ವಿಚಿತ್ರ ಅಂದ್ರೆ, ಅನುಪಮಾ ಗೌಡಗೆ ರಿಯಾಝ್ ಹಾರ ಹಾಕಿದರು.

ಯಾರ್ಯಾರಿಗೆ ಹಾರ.?

ಚಂದನ್ ಶೆಟ್ಟಿಗೆ ದಿವಾಕರ್ ಹಾಗೂ ನಿವೇದಿತಾ, ಶ್ರುತಿಗೆ ಜೆಕೆ ಹಾಗೂ ಜೆಕೆಗೆ ಅನುಪಮಾ, ರಿಯಾಝ್ ಗೆ ಸಮೀರಾಚಾರ್ಯ ಹಾರ ಹಾಕಿದರು.

ಮತ್ತೆ ಮನಸ್ತಾಪ, ಭಿನ್ನಾಭಿಪ್ರಾಯ

'ಮಸಿ-ಹಾರ' ಹಾಕಿದ ಮೇಲೆ, 'ಬಿಗ್ ಬಾಸ್' ಮನೆಯೊಳಗೆ ಮತ್ತೆ ಮನಸ್ತಾಪ, ಭಿನ್ನಾಭಿಪ್ರಾಯ ಭುಗೆಲೆದ್ದಿತು. ಚಂದನ್ ಶೆಟ್ಟಿ ಹಾಗೂ ದಿವಾಕರ್ ನಡೆಗೆ ರಿಯಾಝ್ ಮುನಿಸಿಕೊಂಡರು.

English summary
Bigg Boss Kannada 5: Week 13: Riyaz Basha and Sameer Acharya was inked by other contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X