»   » ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!

ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎರಡನೇ ವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರ ನಡೆದಿದ್ದು, ಮನೆಯ ಅರ್ಧದಷ್ಟು ಸದಸ್ಯರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ಕಳೆದ ವಾರ ನಾಮಿನೇಟ್ ಆಗಿದ್ದ ಕೆಲವು ಸದಸ್ಯರು ಈ ವಾರವೂ ಟಾರ್ಗೆಟ್ ಆಗಿದ್ದಾರೆ. ನಿರೀಕ್ಷೆ ಮಾಡದೇ ಇದ್ದ ಕೆಲವು ಸದಸ್ಯರು ಕೂಡ ನಾಮಿನೇಟ್ ಆಗಿದ್ದಾರೆ.

ಇನ್ನೊಂದು ವಿಷ್ಯ ಅಂದ್ರೆ, ನಾಮಿನೇಟ್ ಆಗಿರುವ ಪೈಕಿ ಅರ್ಧ ಜನ ಕಾಮನ್ ಮ್ಯಾನ್ ಆಗಿದ್ದರೆ ಇನ್ನರ್ಧ ಜನರು ಸೆಲೆಬ್ರಿಟಿಗಳು.!

ಹಾಗಿದ್ರೆ, ಈ ವಾರ ಮನೆಯಿಂದ ಹೊರ ಹೋಗಲು ಯಾವೆಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ಎಂದು ಮುಂದೆ ಓದಿ.......

ದಿವಾಕರ್ ಮತ್ತೆ ಟಾರ್ಗೆಟ್.!

ಕಳೆದ ಬಾರಿ ಅತಿ ಹೆಚ್ಚು ವೋಟ್ ಪಡೆದು ನಾಮಿನೇಟ್ ಆಗಿದ್ದ ದಿವಾಕರ್ ಎರಡನೇ ವಾರವೂ ಅತಿ ಹೆಚ್ಚು ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ. ಅನುಪಮಾ, ತೇಜಸ್ವಿನಿ, ಕೃಷಿ, ಜೆಕೆ, ನಿವೇದಿತಾ ಗೌಡ ಹಾಗೂ ಸಿಹಿ ಕಹಿ ಚಂದ್ರು ಅವರು ಕಳೆದ ವಾರ ಎಲಿಮಿನೇಟ್ ಆದ ಸುಮಾ ಅವರು ನೀಡಿರುವ ಸೂಪರ್ ಅಧಿಕಾರ ಬಳಸಿ 2 ಮತ ಚಲಾಯಿಸಿದ್ದಾರೆ.

ಮೊದಲ ವಾರವೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸುಮಾ!

ಮೇಘಗೂ ಕಷ್ಟ ತಪ್ಪಿದ್ದಲ್ಲ.!

ಕಳೆದ ವಾರ ನಾಮಿನೇಟ್ ಆಗಿದ್ದ ಕೊಡಗಿನ ಕುವರಿ ಮೇಘಗೆ ಈ ವಾರವೂ ಸಂಕಷ್ಟ ಎದುರಾಗಿದೆ. ಒಟ್ಟು 5 ಮತಗಳನ್ನ ಪಡೆಯುವುದರ ಮೂಲಕ ಬಿಗ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಜಗನ್, ತೇಜಸ್ವಿನಿ, ದಯಾಳ್, ಕೃಷಿ, ಸಿಹಿ ಕಹಿ ಚಂದ್ರು ಅವರು ಮೇಘ ರನ್ನ ನಾಮಿನೇಟ್ ಮಾಡಿದ್ದಾರೆ.

'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!

ಸಮೀರಾಚಾರ್ಯ

ಮೊದಲ ವಾರ ಸೇಫ್ ಝೂನ್ ನಲ್ಲಿದ್ದ ಸಮೀರಾಚಾರ್ಯ ಅವರು ಎರಡನೇ ವಾರ ನಾಮಿನೇಟ್ ಆಗಿದ್ದಾರೆ. ಆಶಿತಾ, ದಯಾಳ್, ಜೆಕೆ, ನಿವೇದಿತಾ ಗೌಡ ಅವರು ಸಮೀರಾಚಾರ್ಯ ವಿರುದ್ಧ ವೋಟ್ ಮಾಡಿದ್ದಾರೆ.

'ಬಿಗ್ ಬಾಸ್'ನಲ್ಲಿ ಅನುಪಮಾ ಗೌಡ ಕೆನ್ನೆಗೆ ಮುತ್ತು ಕೊಟ್ಟ ಸಿಹಿ ಕಹಿ ಚಂದ್ರು!

ಕೃಷಿ ತಾಪಂಡಗೆ 3 ವೋಟ್

ನಟಿ ಕೃಷಿ ತಾಪಂಡರನ್ನ ಚಂದನ್ ಶೆಟ್ಟಿ, ದಿವಾಕರ್, ರಿಯಾಜ್ ಅವರು ನಾಮಿನೇಟ್ ಮಾಡಿದ್ದಾರೆ.

'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

ಜಗನ್ ಮಿಸ್ ಆಗಲಿಲ್ಲ

ಇನ್ನು ಕಳೆದ ವಾರ 4 ವೋಟ್ ಪಡೆದುಕೊಂಡಿದ್ದ ಜಗನ್ ಈ ವಾರ 2 ಪಡೆದು ನಾಮಿನೇಟ್ ಆಗಿದ್ದಾರೆ. ದಿವಾಕರ್ ಮತ್ತು ಜಯಶ್ರೀನಿವಾಸನ್ ಅವರು ಜಗನ್ ರನ್ನ ನಾಮಿನೇಟ್ ಮಾಡಿದ್ದಾರೆ.

ಸುಮಾ ಕೃಪೆಯಿಂದ ಸಿಹಿ ಕಹಿ ಚಂದ್ರುಗೆ ಸಿಕ್ಕಿದೆ ಸೂಪರ್ ಅಧಿಕಾರ.!

ಡೈರೆಕ್ಟರ್ ದಯಾಳ್

ಕಳೆದ ವಾರ ಸೇಫ್ ಝೂನ್ ನಲ್ಲಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಮೇಘ ಮತ್ತು ರಿಯಾಜ್ ಮಾಡಿದ ವೋಟ್ ನಿಂದ ನಾಮಿನೇಟ್ ಆಗಿದ್ದಾರೆ.

ಮೊದಲ ವಾರವೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸುಮಾ!

ರಿಯಾಜ್ ಗೆ ವೋಟ್ ಮಾಡಿದವರು

ಕಾಮನ್ ಮ್ಯಾನ್ ಪಟ್ಟಿಯಲ್ಲಿ ಸ್ಪರ್ಧಿಯಾಗಿರುವ ರಿಯಾಜ್ ಗೆ ಜಗನ್ ಮತ್ತು ಆಶಿತಾ ನಾಮಿನೇಟ್ ಮಾಡಿದ್ದಾರೆ.

ಕೊನೆಯದಾಗಿ ಆಶಿತಾ

ಸೈಲೆಂಟ್ ಆಗಿರುವ ಆಶಿತಾ ಅವರ ವಿರುದ್ಧ ಸಮೀರಾಚಾರ್ಯ ಮತ್ತು ಜಯಶ್ರೀನಿವಾಸನ್ ಅವರು ವೋಟ್ ಮಾಡಿದ್ದಾರೆ.

8 ಜನರಲ್ಲಿ ಯಾರು ಎಲಿಮಿನೇಟ್?

ಒಟ್ಟು ಈ ವಾರ 8 ಜನರು ನಾಮಿನೇಟ್ ಆಗಿದ್ದಾರೆ. 4 ಜನ ಸೆಲೆಬ್ರಿಟಿಗಳು ಮತ್ತು 4 ಜನಸಾಮಾನ್ಯರು ಬಿಗ್ ಮನೆಯಿಂದ ಹೊರಹೋಗಲು ಟಾರ್ಗೆಟ್ ಆಗಿದ್ದಾರೆ. ಈ ಎಂಟು ಜನರ ಪೈಕಿ ಯಾರು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಉಳಿಯಬೇಕು..? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.

English summary
Bigg Boss Kannada 5: Week 2: Divakar, Megha, Jagannath, Ashitha, Sameeracharya, Krishi Thapanda, Dayal padmanabhan and Riyaz are nominated for 2nd week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X