»   » ನಿಯಮಗಳನ್ನ ಗಾಳಿಗೆ ತೂರುತ್ತಿರುವ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ 'ಬಿಗ್ ಬಾಸ್'!

ನಿಯಮಗಳನ್ನ ಗಾಳಿಗೆ ತೂರುತ್ತಿರುವ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ 'ಬಿಗ್ ಬಾಸ್'!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳೆಲ್ಲ ಕಾಲಿಟ್ಟು ಒಂದು ವಾರದ ಮೇಲಾಗಿದೆ. ಹೀಗಿದ್ದರೂ, 'ಬಿಗ್ ಬಾಸ್' ಮನೆಯ ನಿಯಮಗಳನ್ನೆಲ್ಲ ಸ್ಪರ್ಧಿಗಳು ಶಿಸ್ತು ಬದ್ಧವಾಗಿ ಪಾಲಿಸುತ್ತಿಲ್ಲ. ಪದೇ ಪದೇ 'ಬಿಗ್ ಬಾಸ್' ಎಚ್ಚರಿಕೆ ನೀಡುತ್ತಿದ್ದರೂ, ಮನೆಯ ನಿಯಮಗಳನ್ನೆಲ್ಲ ಸ್ಪರ್ಧಿಗಳು ಗಾಳಿಗೆ ತೂರುತ್ತಿದ್ದಾರೆ.

'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾಕೆ.?

ಕೊಟ್ಟಿರುವ ಮೈಕ್ ನ ಸರಿಯಾಗಿ ಧರಿಸುವುದಿಲ್ಲ, ಕನ್ನಡದಲ್ಲಿ ಮಾತನಾಡುವುದಿಲ್ಲ, ಆಗಾಗ ನಿದ್ದೆಗೆ ಜಾರುವುದು, ಅವಶ್ಯಕತೆಗಿಂತ ಹೆಚ್ಚಾಗಿ ಗ್ಯಾಸ್ ಬಳಕೆ ಮಾಡುವುದು... ಹೀಗೆ ಹಲವು ನಿಯಮಗಳನ್ನು ಪಾಲಿಸದ ಕಾರಣ ಮನೆಯೊಳಗೆ ಟ್ರಾಫಿಕ್ ಸಿಗ್ನಲ್ ಇರಿಸಿದ್ದಾರೆ 'ಬಿಗ್ ಬಾಸ್'.! ಮುಂದೆ ಓದಿರಿ....

'ಬಿಗ್ ಬಾಸ್' ಮನೆಯೊಳಗೆ ಟ್ರಾಫಿಕ್ ಸಿಗ್ನಲ್

ಮನೆಯ ಮುಖ್ಯ ನಿಯಮಗಳನ್ನು ಎಲ್ಲರೂ ಪದೇ ಪದೇ ಉಲ್ಲಂಘಿಸುತ್ತಿರುವುದರಿಂದ, ನಿಯಮ ಪಾಲನೆ ಬಗ್ಗೆ ಜವಾಬ್ದಾರಿ ಮೂಡಿಸಲು 'ಬಿಗ್ ಬಾಸ್' ಮನೆಯ ಲಿವಿಂಗ್ ಏರಿಯಾದಲ್ಲಿ ಟ್ರಾಫಿಕ್ ಸಿಗ್ನಲ್ ಇರಿಸಲಾಗಿದೆ.

ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!

ನಿಯಮ ಮೀರಿದಾಗ...

ಪ್ರತಿ ಬಾರಿ ಮನೆಯಲ್ಲಿ ಮುಖ್ಯ ನಿಯಮ ಮೀರಿದಾಗ, ಸೈರನ್ ಬಾರಿಸಲಿದೆ ಹಾಗೂ ಟ್ರಾಫಿಕ್ ಸಿಗ್ನಲ್ ನ ಒಂದು ದೀಪ ಬೆಳಗಲಿದೆ.

'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!

ಒಂದೊಂದು ನಿಯಮಕ್ಕೆ ಒಂದೊಂದು ದೀಪ

ಮನೆಯ ಯಾವುದೇ ಸದಸ್ಯ ನಿದ್ದೆ ಮಾಡುತ್ತಿದ್ದರೆ ಕೆಂಪು ಬಣ್ಣದ ದೀಪ ಬೆಳಗಲಿದೆ. ಕನ್ನಡದಲ್ಲಿ ಮಾತನಾಡದಿದ್ದರೆ ಕಿತ್ತಲೆ ಬಣ್ಣದ ದೀಪ ಬೆಳಗಲಿದೆ. ಮೈಕ್ ನ ಸರಿಯಾಗಿ ಧರಿಸದಿದ್ದರೆ, ಹಸಿರು ಬಣ್ಣದ ದೀಪ ಬೆಳಗಲಿದೆ.

ಶಿಕ್ಷೆ ಗ್ಯಾರೆಂಟಿ

ದಿನಕ್ಕೆ ಐದಕ್ಕಿಂತ ಹೆಚ್ಚು ಬಾರಿ ದೀಪ ಬೆಳಗಿದರೆ, 'ಬಿಗ್ ಬಾಸ್' ಕೊಡುವ ಕಠಿಣ ಶಿಕ್ಷೆಯನ್ನ ಎಲ್ಲರೂ ಎದುರಿಸಬೇಕು.

ಇದೇ ಮೊದಲು

ಬಿಗ್ ಬಾಸ್ ಕನ್ನಡದ ಐದು ಆವೃತ್ತಿಗಳಲ್ಲಿ, ಮನೆಯ ಮುಖ್ಯ ನಿಯಮಗಳ ಉಲ್ಲಂಘನೆ ಈ ಮಟ್ಟಕ್ಕೆ ಆಗುತ್ತಿರುವುದು ಇದೇ ಮೊದಲು. ಹೀಗಾಗಿ, ಇದೇ ಮೊದಲ ಬಾರಿಗೆ 'ಟ್ರಾಫಿಕ್ ಸಿಗ್ನಲ್' ಸಿಸ್ಟಮ್ ಪರಿಚಯಿಸಿದ್ದಾರೆ 'ಬಿಗ್ ಬಾಸ್'.

English summary
Bigg Boss Kannada 5: Week 2 : Traffic signal inside Bigg Boss house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada