'ಬಿಗ್ ಬಾಸ್ ಕನ್ನಡ-5': ನಾಲ್ಕನೇ ವಾರ ಹೊರಬೀಳೋರು ಯಾರು.?

By Harshitha

Recommended Video

ಬಿಗ್ ಬಾಸ್ ಕನ್ನಡ-5': ನಾಲ್ಕನೇ ವಾರ ಹೊರಬೀಳೋರು ಯಾರು.? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭ ಆಗಿ ಮೂರು ವಾರಗಳು ಉರುಳಿವೆ. ಮೂವರು ಸ್ಪರ್ಧಿಗಳು ಹೊರನಡೆದಿದ್ದಾರೆ. ಸದ್ಯ 'ದೊಡ್ಮನೆ'ಯೊಳಗೆ ಉಳಿದಿರುವವರು ಹದಿನಾಲ್ಕು ಸ್ಪರ್ಧಿಗಳು ಮಾತ್ರ.

ಹದಿನಾಲ್ಕು ಸ್ಪರ್ಧಿಗಳ ಪೈಕಿ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಸೇಫ್ ಝೋನ್ ನಲ್ಲಿ ಇರುವವರು ಕೇವಲ ಆರು ಮಂದಿ.

ಹಾಗಾದ್ರೆ, ನಾಲ್ಕನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ.? ಯಾರು ಯಾರನ್ನ ನಾಮಿನೇಟ್ ಮಾಡಿದರು.? ಎಂಬುದನ್ನ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಈ ನಾಲ್ವರನ್ನ ಮುಟ್ಟುವ ಹಾಗಿರಲಿಲ್ಲ.!

ಈ ನಾಲ್ವರನ್ನ ಮುಟ್ಟುವ ಹಾಗಿರಲಿಲ್ಲ.!

ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಗೆದ್ದ ಆಶಿತಾ ಚಂದ್ರಪ್ಪ, ದಿವಾಕರ್, ಕೃಷಿ ತಾಪಂಡ ಹಾಗೂ ಶ್ರುತಿ ಪ್ರಕಾಶ್ ಈ ವಾರಕ್ಕೆ ಇಮ್ಯೂನಿಟಿ ಪಡೆದಿದ್ದರು. ಹೀಗಾಗಿ, ಈ ನಾಲ್ವರನ್ನ ಯಾರೂ ನಾಮಿನೇಟ್ ಮಾಡುವ ಹಾಗಿರಲಿಲ್ಲ.

ಕ್ಯಾಪ್ಟನ್ ರಿಯಾಝ್

ಕ್ಯಾಪ್ಟನ್ ರಿಯಾಝ್

ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ರಿಯಾಝ್ ಆಯ್ಕೆ ಆದರು. ಹೀಗಾಗಿ, ರಿಯಾಝ್ ಕೂಡ ಸೇಫ್ ಝೋನ್ ನಲ್ಲಿ ಇದ್ದರು.

ಡೇಂಜರ್ ಝೋನ್ ನಲ್ಲಿ ಸಮೀರಾಚಾರ್ಯ

ಡೇಂಜರ್ ಝೋನ್ ನಲ್ಲಿ ಸಮೀರಾಚಾರ್ಯ

ಅನುಪಮಾ ಗೌಡ, ಆಶಿತಾ, ಸಿಹಿ ಕಹಿ ಚಂದ್ರು, ಕೃಷಿ ತಾಪಂಡ, ತೇಜಸ್ವಿನಿ ಹಾಗೂ ಶ್ರುತಿ ಪ್ರಕಾಶ್ ಮತ ಚಲಾಯಿಸಿದ್ದರಿಂದ ಸಮೀರಾಚಾರ್ಯ ಈ ವಾರ ಡೇಂಜರ್ ಝೋನ್ ನಲ್ಲಿ ಇದ್ದಾರೆ.

ಜಯಶ್ರೀನಿವಾಸನ್ ಮಿಸ್ ಆಗಲಿಲ್ಲ

ಜಯಶ್ರೀನಿವಾಸನ್ ಮಿಸ್ ಆಗಲಿಲ್ಲ

ಜೆಕೆ, ಆಶಿತಾ, ಜಗನ್, ಕೃಷಿ ತಾಪಂಡ ಮತ್ತು ತೇಜಸ್ವಿನಿ... ಜಯಶ್ರೀನಿವಾಸನ್ ರವರನ್ನ ನಾಮಿನೇಟ್ ಮಾಡಿದರು.

ಟಾರ್ಗೆಟ್ ಆದ ನಿವೇದಿತಾ ಗೌಡ

ಟಾರ್ಗೆಟ್ ಆದ ನಿವೇದಿತಾ ಗೌಡ

ಮನೆಯಲ್ಲಿ ಯಾವ ಕೆಲಸವನ್ನೂ ಮಾಡದ ಕಾರಣ ಈ ವಾರ ನಿವೇದಿತಾ ಗೌಡ ನಾಮಿನೇಟ್ ಆಗಿದ್ದಾರೆ. ಜೆಕೆ, ಜಗನ್, ಸಿಹಿ ಕಹಿ ಚಂದ್ರು ಹಾಗೂ ಶ್ರುತಿ ಪ್ರಕಾಶ್... ನಿವೇದಿತಾ ಗೌಡ ವಿರುದ್ಧ ವೋಟ್ ಮಾಡಿದರು.

ನಾಮಿನೇಟ್ ಆದ ಜಗನ್ನಾಥ್

ನಾಮಿನೇಟ್ ಆದ ಜಗನ್ನಾಥ್

ಇದ್ದಕ್ಕಿದ್ದಂತೆ ಉಗ್ರ ಪ್ರತಾಪ ತೋರುವ ಜಗನ್ನಾಥ್ ಈ ವಾರ ನಾಮಿನೇಟ್ ಆಗಿದ್ದಾರೆ. ಅದು ಜಯಶ್ರೀನಿವಾಸನ್, ನಿವೇದಿತಾ ಹಾಗೂ ದಿವಾಕರ್ ವೋಟ್ ಮಾಡಿದ್ರಿಂದಾಗಿ.!

ಮೊದಲ ಬಾರಿ ನಾಮಿನೇಟ್ ಆದ ತೇಜಸ್ವಿನಿ

ಮೊದಲ ಬಾರಿ ನಾಮಿನೇಟ್ ಆದ ತೇಜಸ್ವಿನಿ

ನಾಲ್ಕು ವಾರಗಳಲ್ಲಿ ಇದೇ ಮೊದಲ ಬಾರಿಗೆ ತೇಜಸ್ವಿನಿ ನಾಮಿನೇಟ್ ಆಗಿದ್ದಾರೆ. ಸಮೀರಾಚಾರ್ಯ ಹಾಗೂ ದಿವಾಕರ್, ತೇಜಸ್ವಿನಿ ರನ್ನ ಮನೆಯಿಂದ ಹೊರಗೆ ಕಳುಹಿಸಲು ಇಚ್ಛಿಸಿದರು.

ಹೊರಗೆ ಹೋಗ್ತಾರಾ ಸಿಹಿ ಕಹಿ ಚಂದ್ರು?

ಹೊರಗೆ ಹೋಗ್ತಾರಾ ಸಿಹಿ ಕಹಿ ಚಂದ್ರು?

ಸಿಹಿ ಕಹಿ ಚಂದ್ರು ವಿರುದ್ಧ ಸಮೀರಾಚಾರ್ಯ, ಜಯಶ್ರೀನಿವಾಸನ್ ಹಾಗೂ ಚಂದನ್ ಶೆಟ್ಟಿ ಮತ ಚಲಾಯಿಸಿದರು.

ಮತ್ತೆ ನಾಮಿನೇಟ್ ಆದ ಅನುಪಮಾ ಗೌಡ

ಮತ್ತೆ ನಾಮಿನೇಟ್ ಆದ ಅನುಪಮಾ ಗೌಡ

ಅನುಪಮಾ ಗೌಡ ವಿರುದ್ಧ ವೋಟ್ ಮಾಡಿದ್ದು ಇಬ್ಬರೇ (ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ). ಆದರೂ ಅನುಪಮಾ ಡೇಂಜರ್ ಝೋನ್ ನಲ್ಲಿ ಇದ್ದಾರೆ.

ನೇರವಾಗಿ ನಾಮಿನೇಟ್ ಆದ ಜೆಕೆ

ನೇರವಾಗಿ ನಾಮಿನೇಟ್ ಆದ ಜೆಕೆ

ಜೆಕೆ ಹೆಸರನ್ನ ಕ್ಯಾಪ್ಟನ್ ರಿಯಾಝ್ ಹೇಳಿದ್ದರಿಂದ, ಜೆಕೆ ಕೂಡ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಹೊರ ಹೋಗೋದು ಯಾರು.?

ಹೊರ ಹೋಗೋದು ಯಾರು.?

ಸಮೀರಾಚಾರ್ಯ, ಜಯಶ್ರೀನಿವಾಸನ್, ನಿವೇದಿತಾ ಗೌಡ, ಜಗನ್ನಾಥ್, ಸಿಹಿ ಕಹಿ ಚಂದ್ರು, ತೇಜಸ್ವಿನಿ, ಅನುಪಮಾ ಗೌಡ... ಈ ಎಂಟು ಜನರ ಪೈಕಿ ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರು ಹೊರ ಹೋಗಬೇಕು.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 5: Week 4: Niveditha Gowda, Jayasreenivasan, Anupama Gowda, Sameeracharya, Jaganath, Sihi Kahi Chandru, Tejaswini and JK are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X