»   » ತೇಜಸ್ವಿನಿ ನಸೀಬು ಸರಿಯಿಲ್ಲ.! 'ಬಿಗ್ ಬಾಸ್' ಮನೆಯಿಂದ ಎರಡನೇ ಸೆಲೆಬ್ರಿಟಿ ಔಟ್.!

ತೇಜಸ್ವಿನಿ ನಸೀಬು ಸರಿಯಿಲ್ಲ.! 'ಬಿಗ್ ಬಾಸ್' ಮನೆಯಿಂದ ಎರಡನೇ ಸೆಲೆಬ್ರಿಟಿ ಔಟ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಾಲ್ಕು ವಾರಗಳಲ್ಲಿ ನಟಿ ತೇಜಸ್ವಿನಿ ನಾಮಿನೇಟ್ ಆಗಿದ್ದು ಇದೇ ಮೊದಲ ಬಾರಿಗೆ. ತಂದೆಗೆ ಹುಷಾರಿಲ್ಲ ಅಂತ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಿ, ವಾಪಸ್ ಬಂದಿದ್ದ ನಟಿ ತೇಜಸ್ವಿನಿಗೆ ಈಗ ಮತ್ತೆ ಗೇಟ್ ಪಾಸ್ ಸಿಕ್ಕಿದೆ.

ಹೌದು, ತಂದೆಯ ಅನಾರೋಗ್ಯದಿಂದಾಗಿ ಎರಡು ದಿನಗಳ ಕಾಲ 'ಬಿಗ್ ಬಾಸ್' ಮನೆಯಿಂದ ಹೊರಗಿದ್ದು ಬಂದಿದ್ದ ನಟಿ ತೇಜಸ್ವಿನಿ ಈ ವಾರ 'ದೊಡ್ಮನೆ'ಯಿಂದ ಔಟ್ ಆಗಿದ್ದಾರೆ.

'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.!

'ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮದಲ್ಲಿ ಔಟ್ ಆಗಿರುವ ಎರಡನೇ ಸೆಲೆಬ್ರಿಟಿ ಸ್ಪರ್ಧಿ ನಟಿ ತೇಜಸ್ವಿನಿ..! ಮುಂದೆ ಓದಿರಿ....

ಅತಿ ಕಡಿಮೆ ವೋಟ್

ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ತೇಜಸ್ವಿನಿ ರವರಿಗೆ ಕಮ್ಮಿ ವೋಟುಗಳು ಬಿದ್ದಿದ್ರಿಂದ ಅವರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ.

'ಬಿಗ್ ಬಾಸ್ ಕನ್ನಡ-5': ನಾಲ್ಕನೇ ವಾರ ಹೊರಬೀಳೋರು ಯಾರು.?

ಎಂಟು ಮಂದಿ ನಾಮಿನೇಟ್ ಆಗಿದ್ದರು

ಸಮೀರಾಚಾರ್ಯ, ಜಯಶ್ರೀನಿವಾಸನ್, ನಿವೇದಿತಾ ಗೌಡ, ಜಗನ್ನಾಥ್, ಸಿಹಿ ಕಹಿ ಚಂದ್ರು, ತೇಜಸ್ವಿನಿ, ಜೆಕೆ ಹಾಗೂ ಅನುಪಮಾ ಗೌಡ ನಾಮಿನೇಟ್ ಆಗಿದ್ದರು. ಎಂಟು ಮಂದಿ ಪೈಕಿ ತೇಜಸ್ವಿನಿ ಅವರಿಗೆ ಹೊರ ಹೋಗಲು ಗೇಟ್ ಪಾಸ್ ಸಿಕ್ಕಿದೆ.

ದಿಢೀರ್ ಬೆಳವಣಿಗೆ: 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರಗೆ.?

ನಾಮಿನೇಟ್ ಮಾಡಿದ್ದು ಇಬ್ಬರೇ.!

ಸಮೀರಾಚಾರ್ಯ ಮತ್ತು ದಿವಾಕರ್ ಮಾತ್ರ ತೇಜಸ್ವಿನಿ ರವರನ್ನ ನಾಮಿನೇಟ್ ಮಾಡಿದ್ದರು.

ಆಟವನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದ ತೇಜಸ್ವಿನಿ

ತಂದೆಯ ಅನಾರೋಗ್ಯದ ಕಾರಣ, 'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದ ತೇಜಸ್ವಿನಿ ಎರಡೇ ದಿನಗಳಲ್ಲಿ ವಾಪಸ್ ಆದರು. ಆದರೆ, ವೀಕ್ಷಕ ಪ್ರಭುಗಳು ತೇಜಸ್ವಿನಿ ಮೇಲೆ ಕೃಪೆ ತೋರದ ಕಾರಣ ಔಟ್ ಆಗಿದ್ದಾರೆ.

English summary
Bigg Boss Kannada 5: Week 4: Tejaswini eliminated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X