»   » ತೇಜಸ್ವಿನಿ ನುಡಿದ ಭವಿಷ್ಯ ನಿಜ ಆಯ್ತು: ಈ ವಾರ ಕೃಷಿ ಔಟ್ ಆಗೇಬಿಟ್ಟರು.!

ತೇಜಸ್ವಿನಿ ನುಡಿದ ಭವಿಷ್ಯ ನಿಜ ಆಯ್ತು: ಈ ವಾರ ಕೃಷಿ ಔಟ್ ಆಗೇಬಿಟ್ಟರು.!

Posted By:
Subscribe to Filmibeat Kannada
Bigg Boss Kannada Season 5 : ಕೃಷಿ ತಾಪಂಡ ಬಗ್ಗೆ ತೇಜಸ್ವಿನಿ ನುಡಿದ ಭವಿಷ್ಯ ನಿಜವಾಯ್ತು | Oneindia Kannada

ಇದಕ್ಕೆ ಕಾಕತಾಳೀಯ ಎನ್ನಬೇಕೋ, ಅಥವಾ ಜನರ ನಾಡಿಮಿಡಿತ ತೇಜಸ್ವಿನಿಗೆ ಅರ್ಥವಾಗಿತ್ತೋ, ಇಲ್ಲ ತೇಜಸ್ವಿನಿಗೆ ಸಿಕ್ಸ್ತ್ ಸೆನ್ಸ್ ವರ್ಕ್ ಆಯ್ತು ಅಂತೀರೋ, ನೀವೇ ನಿರ್ಧರಿಸಿ. ಒಟ್ನಲ್ಲಿ, ನಟಿ ತೇಜಸ್ವಿನಿ ಬಾಯಿಂದ ಬಂದ ಮಾತು ನಿಜವಾಗಿದೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ ಕೃಷಿ ತಾಪಂಡ ಹೊರಬರುತ್ತಾರೆ ಅಂತ ಕಳೆದ ವಾರವೇ ನಟಿ ತೇಜಸ್ವಿನಿ ಭವಿಷ್ಯ ನುಡಿದಿದ್ದರು. ಅಂದು ತೇಜಸ್ವಿನಿ ಆಡಿದ ಮಾತು ಇಂದು ಅಕ್ಷರಶಃ ಸತ್ಯವಾಗಿದೆ. ನಟಿ ತೇಜಸ್ವಿನಿ ಮಾತಿನಂತೆ ಈ ವಾರ ಕೃಷಿ ತಾಪಂಡ ಔಟ್ ಆಗಿದ್ದಾರೆ. ಮುಂದೆ ಓದಿರಿ....

ಕಳೆದ ವಾರ ತೇಜಸ್ವಿನಿ ಹೇಳಿದ್ದೇನು.?

'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪನ ಜೊತೆ' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದ ನಟಿ ತೇಜಸ್ವಿನಿ ವೇದಿಕೆ ಮೇಲೆ ಸುದೀಪ್ ಜೊತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ, ''ಮುಂದಿನ ವಾರ ನಿಮ್ಮ ಜಾಗದಲ್ಲಿ ಯಾರು ನಿಂತುಕೊಳ್ಳಬಹುದು'' ಎಂದು ತೇಜಸ್ವಿನಿಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ 'ಕೃಷಿ ತಾಪಂಡ' ಎಂದು ಉತ್ತರ ಕೊಟ್ಟಿದ್ದರು ನಟಿ ತೇಜಸ್ವಿನಿ.

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ತೇಜಸ್ವಿನಿ ಲೆಕ್ಕಾಚಾರ ಕರೆಕ್ಟ್ ಆಯ್ತಲ್ಲ.!

ತೇಜಸ್ವಿನಿ ಯಾವ ಮಾನದಂಡದ ಲೆಕ್ಕಾಚಾರ ಹಾಕಿ ಹಾಗೆ ಹೇಳಿದರೋ ಗೊತ್ತಿಲ್ಲ. ಆದ್ರೆ, ತೇಜಸ್ವಿನಿ ಹೇಳಿದ ಹಾಗೆ, ಕೃಷಿ ತಾಪಂಡ ಔಟ್ ಆಗಿದ್ದಾರೆ.

ಎಂಟನೇ ಅದ್ಭುತ: ಜಯಶ್ರೀನಿವಾಸನ್ ಗೆ ಸಿಕ್ತು ಸೂಪರ್ ಅಧಿಕಾರ.!

ಕಾರಣ ಏನು ಇರಬಹುದು.?

ಸ್ಯಾಂಡಲ್ ವುಡ್ ನಲ್ಲಿ ಕೃಷಿ ತಾಪಂಡ ಇನ್ನೂ ಉದಯೋನ್ಮುಖ ನಟಿ. ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಫ್ಯಾನ್ ಫಾಲೋವಿಂಗ್ ಬೆಳೆಯುವಷ್ಟು ಕೃಷಿ ತಾಪಂಡ ಗುರುತಿಸಿಕೊಂಡಿಲ್ಲ. ಹೀಗಾಗಿ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿಯೂ ಕೃಷಿಗೆ ವೀಕ್ಷಕರ ಬೆಂಬಲ ಸಿಕ್ಕಿಲ್ಲ.

'ಬಿಗ್ ಬಾಸ್' ರನ್ನ ಪ್ರಶ್ನೆ ಮಾಡಿದ ಕನ್ನಡದ ಖ್ಯಾತ ನಟಿ

ಒಂದೇ ಗುಂಪಿನಲ್ಲಿ ಹೆಚ್ಚು ಗುರುತಿಸಿಕೊಂಡ ಕೃಷಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜನಸಾಮಾನ್ಯರೇ ಒಂದು ಗುಂಪಾಗಿದ್ದರೆ, ಸೆಲೆಬ್ರಿಟಿ ಸ್ಪರ್ಧಿಗಳೇ ಮತ್ತೊಂದು ಗುಂಪು. ಸೆಲೆಬ್ರಿಟಿ ಸ್ಪರ್ಧಿಗಳ ಗುಂಪಿನಲ್ಲಿ ಗುರುತಿಸಿಕೊಂಡ ಕೃಷಿ ತಾಪಂಡ, ಅಡುಗೆ ಮನೆ ವಿಚಾರಕ್ಕೆ ಜಾಸ್ತಿ ಕೂಗಾಡಿದ್ದರು. ಜನಸಾಮಾನ್ಯ ಸ್ಪರ್ಧಿಗಳ ವಿರುದ್ದ ಕೃಷಿ ಹೆಜ್ಜಾಗಿ ಮಾತನಾಡುತ್ತಿದ್ದರಿಂದ, ಆಕೆಗೆ ವೀಕ್ಷಕರ ಬೆಂಬಲ ಕಮ್ಮಿ ಲಭಿಸಿರುವ ಸಾಧ್ಯತೆ ಇದೆ.

English summary
Bigg Boss Kannada 5: Week 5: Tejaswini's words turns true, Krishi Thapanda eliminated. ನಟಿ ತೇಜಸ್ವಿನಿ ಹೇಳಿದ ಹಾಗೆ ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರಕ್ಕೆ ನಟಿ ಕೃಷಿ ತಾಪಂಡ ಔಟ್ ಆಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada