»   » ಮತ್ತೆ ಸೆಲೆಬ್ರಿಟಿಗೆ ಅವಕಾಶ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕೃಷಿ ತಾಪಂಡ.!

ಮತ್ತೆ ಸೆಲೆಬ್ರಿಟಿಗೆ ಅವಕಾಶ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕೃಷಿ ತಾಪಂಡ.!

Posted By:
Subscribe to Filmibeat Kannada

ಕಳೆದ ವಾರವಷ್ಟೇ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದ ನಟಿ ಕೃಷಿ ತಾಪಂಡ ಇದೀಗ ಮತ್ತೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ. ಇನ್ನೇನು ಅನುಪಮಾ ಗೌಡ ಹಾಗೂ ರಿಯಾಝ್ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ನಟಿ ಕೃಷಿ ತಾಪಂಡ ಎಂಟ್ರಿಕೊಟ್ಟಿದ್ದು ಆಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.

ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

ಮೇಲ್ನೋಟಕ್ಕೆ ಇದು ವೈಲ್ಡ್ ಕಾರ್ಡ್ ಎಂಟ್ರಿ ಅಂತ ಭಾಸವಾದರೂ, ಅದರ ಹಿಂದೆ ಇರುವ ತಿರುವು ಇನ್ನೂ ಗುಟ್ಟಾಗಿ ಇದೆ. 'ದೊಡ್ಮನೆ'ಯಿಂದ ಐದನೇ ವಾರ ಹೊರ ಹೋಗಿದ್ದ ಕೃಷಿ ತಾಪಂಡ ಒಂದೇ ವಾರದಲ್ಲಿ ಮರಳಿ ಬಂದಿರುವುದು ಎಲ್ಲರಿಗೂ ಅಚ್ಚರಿ ತಂದಿರುವುದು ಸತ್ಯ. ಮುಂದೆ ಓದಿರಿ...

ವಾಪಸ್ ಬಂದ ಕೃಷಿ ತಾಪಂಡ.!

'ಬಿಗ್ ಬಾಸ್' ಆಟಕ್ಕೆ ಕೃಷಿ ತಾಪಂಡ ವಾಪಸ್ ಆಗಿದ್ದಾರೆ. ಐದವೇ ವಾರ ಔಟ್ ಆಗಿದ್ದ ಕೃಷಿ ತಾಪಂಡ ಆರನೇ ವಾರದ ಅಂತ್ಯಕ್ಕೆ 'ಬಿಗ್ ಬಾಸ್' ಮನೆಗೆ ಮರಳಿದ್ದಾರೆ.

ಕೃಷಿ ಔಟ್ ಆಗಿದ್ದಕ್ಕೆ ಸುದೀಪ್ ಕಾರಣ.! ಇದೇನಿದು ಹೊಸ ಆರೋಪ.?

ಸೆಲೆಬ್ರಿಟಿಗೆ ಮತ್ತೆ ಅವಕಾಶ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಐದು ಮಂದಿ ಔಟ್ ಆಗಿದ್ದಾರೆ. ಸುಮಾ ರಾಜ್ ಕುಮಾರ್, ಮೇಘ, ದಯಾಳ್ ಪದ್ಮನಾಭನ್, ತೇಜಸ್ವಿನಿ ಮತ್ತು ಕೃಷಿ ತಾಪಂಡ. ಈ ಐವರ ಪೈಕಿ ಸೆಲೆಬ್ರಿಟಿ ಸ್ಪರ್ಧಿಯಾಗಿದ್ದ ಕೃಷಿ ತಾಪಂಡ ಅವರಿಗೆ ಸೆಕೆಂಡ್ ಚಾನ್ಸ್ ಸಿಕ್ಕಿದೆ.

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ನೋ ಎಲಿಮಿನೇಷನ್ ವೀಕ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರ 'ನೋ ಎಲಿಮಿನೇಷನ್ ವೀಕ್'. ಹೀಗಾಗಿ, ಈ ವಾರ ಯಾರನ್ನೂ ಹೊರಗೆ ಕಳುಹಿಸಲಿಲ್ಲ. ರಿಯಾಝ್ ಹಾಗೂ ಅನುಪಮಾ ಗೌಡ ಔಟ್ ಆಗಿದ್ದಾರೆ ಎಂದು ಸುದೀಪ್ ಫೂಲ್ ಮಾಡುತ್ತಿದ್ದಂತೆಯೇ ಕೃಷಿ ತಾಪಂಡ 'ವೈಲ್ಡ್ ಕಾರ್ಡ್' ಎಂಟ್ರಿಕೊಟ್ಟರು.


ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ಮುಂದೇನಾಗುತ್ತೋ.?

ಒಂದು ವಾರ ಕಾಲ 'ಬಿಗ್ ಬಾಸ್' ಮನೆಯಿಂದ ಆಚೆ ಇದ್ದ ಕೃಷಿ ತಾಪಂಡ ಅವರಿಗೆ ವೀಕ್ಷಕರ ನಾಡಿಮಿಡಿತ ಅರ್ಥವಾಗಿದೆ. ಜೊತೆಗೆ ವೀಕ್ಷಕರು ಯಾರನ್ನ ಇಷ್ಟ ಪಡುತ್ತಿದ್ದಾರೆ, ಯಾರ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬುದನ್ನೂ ಕೃಷಿ ಗಮನಿಸಿದ್ದಾರೆ. ಇವೆಲ್ಲವನ್ನೂ ತಲೆಯಲ್ಲಿ ಇಟ್ಟುಕೊಂಡು 'ಬಿಗ್ ಬಾಸ್' ಮನೆಗೆ ಮರಳಿ ಹೋಗಿರುವ ಕೃಷಿ ಮುಂಚೆಯಂತೆ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಮಾತ್ರ ಇರ್ತಾರೋ, ಇಲ್ಲ ತಮ್ಮ ಆಟದ ವೈಖರಿಯನ್ನ ಬದಲಿಸಿಕೊಳ್ಳುತ್ತಾರೋ.. ನೋಡೋಣ.

English summary
Bigg Boss Kannada 5: Week 6: Krishi Thapanda re-enters #BBK5 house. ಕಳೆದ ವಾರವಷ್ಟೇ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದ ನಟಿ ಕೃಷಿ ತಾಪಂಡ ಇದೀಗ ಮತ್ತೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada