»   » ಸಿಕ್ಕಾಪಟ್ಟೆ ಬದಲಾದ ಕೃಷಿ ತಾಪಂಡ.! ಇದು ಅನುಪಮಾ ಅಭಿಪ್ರಾಯ.!

ಸಿಕ್ಕಾಪಟ್ಟೆ ಬದಲಾದ ಕೃಷಿ ತಾಪಂಡ.! ಇದು ಅನುಪಮಾ ಅಭಿಪ್ರಾಯ.!

Posted By:
Subscribe to Filmibeat Kannada
ಸಿಕ್ಕಾಪಟ್ಟೆ ಬದಲಾದ ಕೃಷಿ ತಾಪಂಡ.! ಇದು ಅನುಪಮಾ ಅಭಿಪ್ರಾಯ.! | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರ ಔಟ್ ಆಗಿದ್ದ ನಟಿ ಕೃಷಿ ತಾಪಂಡ, ಆರನೇ ವಾರ ಮರಳಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ನಟಿ ಕೃಷಿ ತಾಪಂಡ, 'ಬಿಗ್ ಬಾಸ್' ಮನೆಯೊಳಗೆ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ ಮೇಲೆ ಸಿಕ್ಕಾಪಟ್ಟೆ ಬದಲಾಗಿದ್ದಾರಂತೆ.

ಮತ್ತೆ ಸೆಲೆಬ್ರಿಟಿಗೆ ಅವಕಾಶ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕೃಷಿ ತಾಪಂಡ.!

ಎಲಿಮಿನೇಟ್ ಆಗುವ ಮುನ್ನ ಕೃಷಿ ತಾಪಂಡ ಹೇಗಿದ್ದರೋ, ಈಗ ಹಾಗಿಲ್ಲವಂತೆ. ಇದು ನಟಿ ಅನುಪಮಾ ಗೌಡ ಅಭಿಪ್ರಾಯ.

ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

ಮುಂಚೆ 'ಬಿಗ್ ಬಾಸ್' ಮನೆಯಲ್ಲಿ ಅನುಪಮಾ ಗೌಡ ಹಾಗೂ ಕೃಷಿ ತಾಪಂಡ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಅನುಪಮಾ ಜೊತೆ ಕೃಷಿ ಹೆಚ್ಚು ಕಾಲ ಕಳೆಯುತ್ತಿದ್ದರು. ಆದ್ರೀಗ, ಒಂದು ರೌಂಡ್ ಹೊರಗೆ ಹೋಗಿ ಬಂದ್ಮೇಲೆ, ಕೃಷಿ ತಾಪಂಡ ಅವರಲ್ಲಿ ತುಂಬಾ ಬದಲಾವಣೆ ಆಗಿದ್ಯಂತೆ. ಮುಂದೆ ಓದಿರಿ....

ಸಿಕ್ಕಾಪಟ್ಟೆ ಬದಲಾದ ಕೃಷಿ

'ಬಿಗ್ ಬಾಸ್' ಮನೆಯೊಳಗೆ ಕೃಷಿ ರೀಎಂಟ್ರಿ ಕೊಟ್ಟ ಮೇಲೆ, ''ಅವಳು ಮಾತನಾಡುತ್ತಿರುವ ರೀತಿ ತುಂಬಾ ಬದಲಾಗಿದೆ'' ಎಂಬ ಅಭಿಪ್ರಾಯ ಅನುಪಮಾ ಗೌಡ ರವರಿಂದ ವ್ಯಕ್ತವಾಯ್ತು.

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ಸೀಕ್ರೆಟ್ ರೂಮ್ ನಲ್ಲಿ ಇದ್ದರಂತೆ.!

ಇನ್ನೂ ಸಿಹಿ ಕಹಿ ಚಂದ್ರು ಪ್ರಕಾರ, ಕೃಷಿ ತಾಪಂಡ ಸೀಕ್ರೆಟ್ ರೂಮ್ ನಲ್ಲಿ ಇದ್ದು ಬಂದಿದ್ದಾರಂತೆ.

ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ನಿವೇದಿತಾ ತಲೆಯಲ್ಲಿ ಏನಿದೆ.?

ಸಿಹಿ ಕಹಿ ಚಂದ್ರು ಹಾಗೂ ಅನುಪಮಾ ಮಾತನ್ನ ಕೇಳಿದ್ಮೇಲೆ, ''ಸೀಕ್ರೆಟ್ ರೂಮ್ ನಲ್ಲಿ ಇರ್ಲಿಲ್ಲ. ಯಾಕಂದ್ರೆ, ಅವರು ಪ್ರಾಮಿಸ್ ಮಾಡಿದರು'' ಎಂದು ನಿವೇದಿತಾ ಗೌಡ ಹೇಳಿದರು.

ಕೃಷಿ ಔಟ್ ಆಗಿದ್ದಕ್ಕೆ ಸುದೀಪ್ ಕಾರಣ.! ಇದೇನಿದು ಹೊಸ ಆರೋಪ.?

ಎಲ್ಲರ ತಲೆಯಲ್ಲೂ ಹುಳ

'ಬಿಗ್ ಬಾಸ್' ಮನೆಯೊಳಗೆ ಕೃಷಿ ತಾಪಂಡ ರೀಎಂಟ್ರಿ ಕೊಟ್ಟ ಮೇಲೆ ಆಕೆ ಒಂದು ವಾರ ಎಲ್ಲಿದ್ದರು, ಏನು ಮಾಡಿದರು ಎಂಬ ಪ್ರಶ್ನೆ ಎಲ್ಲ ಸ್ಪರ್ಧಿಗಳ ತಲೆಯಲ್ಲೂ ಕಾಡುತ್ತಿದೆ. ಆದ್ರೆ, ಅದಾವುದಕ್ಕೂ ಕೃಷಿ ಸರಿಯಾಗಿ ಉತ್ತರ ಕೊಡುತ್ತಿಲ್ಲ. ಜೊತೆಗೆ ಹೊರಗೆ ಜಗತ್ತಿನಲ್ಲಿ ಯಾರ ಯಾರ ಮೇಲೆ ಯಾವ ಯಾವ ರೀತಿಯ ಅಭಿಪ್ರಾಯ ಮೂಡಿದೆ ಎಂಬ ಸೀಕ್ರೆಟ್ ಕೂಡ ಕೃಷಿ ಬಿಟ್ಟುಕೊಡುತ್ತಿಲ್ಲ. ಕೃಷಿ ರವರ ಗೇಮ್ ಪ್ಲಾನ್ ಸದ್ಯ ಯಾವ ರೀತಿ ವರ್ಕ್ ಆಗುತ್ತೋ, ನೋಡಬೇಕು.

English summary
Bigg Boss Kannada 5: Week 6: There is a drastic change in Krishi Thapanda says Anupama Gowda. ಎಲಿಮಿನೇಟ್ ಆಗುವ ಮುನ್ನ ಕೃಷಿ ತಾಪಂಡ ಹೇಗಿದ್ದರೋ, ಈಗ ಹಾಗಿಲ್ಲವಂತೆ. ಇದು ನಟಿ ಅನುಪಮಾ ಗೌಡ ಅಭಿಪ್ರಾಯ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada