»   » ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ.!

ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಶ್ರುತಿ ಪ್ರಕಾಶ್ ರನ್ನ ಪ್ರೊಪೋಸ್ ಮಾಡಿದ ಚಂದನ್ ಶೆಟ್ಟಿ | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಮೇಲೆ ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿಗೆ ಕ್ರಷ್ ಆಗಿದೆ. ಇದನ್ನ ಚಂದನ್ ಶೆಟ್ಟಿ ಕೂಡ ಬಾಯ್ಬಿಟ್ಟು ಹೇಳಿಕೊಂಡಿದ್ದಾರೆ. ಆದ್ರೆ, ಶ್ರುತಿ ಪ್ರಕಾಶ್ ಗೆ ಚಂದನ್ ಶೆಟ್ಟಿಗಿಂತ ಜೆಕೆ ಹೆಚ್ಚು ಅಚ್ಚುಮೆಚ್ಚು.

ಸದಾ ಜೆಕೆ ಜೊತೆಗೆ ಇರುವ ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡುವ ಅವಕಾಶ ಚಂದನ್ ಶೆಟ್ಟಿಗೆ ನಿನ್ನೆ ಲಭಿಸಿತು. ಬರೀ ಶ್ರುತಿ ಪ್ರಕಾಶ್ ಗೆ ಮಾತ್ರ ಅಲ್ಲ, ಅನುಪಮಾ ಗೌಡಗೂ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದರು. ಅದು ಅಕುಲ್ ಬಾಲಾಜಿ ಕೃಪೆಯಿಂದ.! ಅಷ್ಟಕ್ಕೂ ಆಗಿದ್ದೇನು.? ಮುಂದೆ ಓದಿರಿ....

'ಬಿಗ್ ಬಾಸ್' ಮನೆಗೆ ಭೇಟಿ ಕೊಟ್ಟ ಅಕುಲ್ ಬಾಲಾಜಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ 'ಬಿಗ್ ಬಾಸ್ ಕನ್ನಡ-2' ವಿಜೇತ ಅಕುಲ್ ಬಾಲಾಜಿ ಎಂಟ್ರಿ ಕೊಟ್ಟಿದ್ದರು. 'ದೊಡ್ಮನೆ'ಯೊಳಗೆ ಅಕುಲ್ ಬಾಲಾಜಿ ಪದಾರ್ಪಣೆ ಮಾಡಿದ್ಮೇಲೆ 'ಅಕುಲ್ ಕಮಾಲ್' ಎಂಬ ವಿಶೇಷ ಚಟುವಟಿಕೆ ಪ್ರಾರಂಭ ಆಯ್ತು.

ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್.!

ಏನಿದು ವಿಶೇಷ ಚಟುವಟಿಕೆ.?

ವಿಶೇಷ ಚಟುವಟಿಕೆಯ ಅನ್ವಯ ಅಕುಲ್ ಬಾಲಾಜಿಗೆ 'ಬಿಗ್ ಬಾಸ್' ಒಂದು ಮಂತ್ರದಂಡ ಕಳುಹಿಸಿದ್ದರು. ಈ ಮಂತ್ರದಂಡವನ್ನು ಯಾರ ಮೇಲೆ ಅಕುಲ್ ಪ್ರಯೋಗಿಸುತ್ತಾರೋ, ಅವರು ಅಕುಲ್ ಆದೇಶವನ್ನು ಪಾಲಿಸಬೇಕಿತ್ತು.

ಚಂದನ್ ಮಾಡ್ತಿರೋದು ಮನೆಹಾಳ ಕೆಲಸ: ಗುಂಡಿ ತೋಡಿ ಮಣ್ಣು ಹಾಕ್ತಿರೋದು ಇವರೇ.!

ಚಂದನ್ ಶೆಟ್ಟಿ ಮೇಲೆ ಮಂತ್ರದಂಡ ಪ್ರಯೋಗ

ಚಂದನ್ ಶೆಟ್ಟಿ ಮೇಲೆ ಮಂತ್ರದಂಡ ಪ್ರಯೋಗಿಸಿದ ಅಕುಲ್ ಬಾಲಾಜಿ, ''ಮನೆಯ ಎಲ್ಲ ಹುಡುಗಿಯರಿಗೆ ಬೇರೆ ಬೇರೆ ಸ್ಟೈಲ್ ನಲ್ಲಿ ಲವ್ ಪ್ರಪೋಸ್ ಮಾಡಬೇಕು'' ಎಂದು ಆದೇಶಿಸಿದರು.

ಅಂತೂ ಚಂದನ್ ಶೆಟ್ಟಿ ನಂಬರ್ ಬಂದೇ ಬಿಡ್ತು: ಈ ಬಾರಿ ತಪ್ಪಿಸಿಕೊಳ್ಳಲು ಆಗ್ಲಿಲ್ಲ.!

ಶ್ರುತಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ

''ನಿನ್ನ ಕಾಲನ್ನ ನಾನು ತಲೆ ಮೇಲೆ ಇಟ್ಟುಕೊಂಡು ಓಡಾಡುತ್ತೇನೆ. ತರಕಾರಿ ತಿಂದು ನನ್ನ ಲವ್ ಗೆ ಸಮ್ಮತಿ ನೀಡಿ'' ಎಂದು ಶ್ರುತಿ ಪ್ರಕಾಶ್ ಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದರು.

ಅನುಪಮಾಗೆ ಪ್ರಪೋಸ್ ಮಾಡಿದ ಚಂದನ್

ಮೈ ಮೇಲೆ 'ಐ ಲವ್ ಯು' ಅಂತ ಬರೆದುಕೊಂಡು ''ಐ ಲವ್ ಯು ಅನು. ದಯವಿಟ್ಟು ನನ್ನ ಪ್ರೀತಿಯನ್ನ ಒಪ್ಪಿಕೋ'' ಎಂದು ಚಂದನ್ ಶೆಟ್ಟಿ ಅನುಪಮಾ ಗೌಡಗೆ ಪ್ರಪೋಸ್ ಮಾಡಿದರು.

ಟಾಸ್ಕ್ ಅಂತ ಎಲ್ಲರಿಗೂ ಗೊತ್ತಿತ್ತು.!

ಇದು ಟಾಸ್ಕ್ ಅಂತ ಎಲ್ಲರಿಗೂ ಗೊತ್ತಿದ್ರಿಂದ, ಎಲ್ಲರೂ ನಗುನಗುತ್ತಲೇ ಇದ್ದರು. ಯಾರೂ ಶಾಕ್ ಆಗಲಿಲ್ಲ.

English summary
Bigg Boss Kannada 5: Week 8: Chandan Shetty proposes Shruti Prakash

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada