Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಗೆದ್ದ ಅರ್ಹ ವ್ಯಕ್ತಿ ಚಂದನ್ ಶೆಟ್ಟಿ: ವೀಕ್ಷಕರಿಗೆ ಖುಷಿಯೋ ಖುಷಿ.!
ಕನ್ನಡ ಕುಲಕೋಟಿ ವೀಕ್ಷಕರ ಇಚ್ಛೆಯಂತೆ ಕನ್ನಡ rapper ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಯಾವುದೇ ವಿವಾದಗಳಿಗೆ ಸಿಲುಕದೆ, ಗದ್ದಲ-ಗಲಾಟೆಗೆ ಆಸ್ಪದ ನೀಡದೆ, ಸ್ನೇಹಕ್ಕೆ ಹೆಚ್ಚು ಮಹತ್ವ ಕೊಟ್ಟವರು ಚಂದನ್ ಶೆಟ್ಟಿ.
ಕ್ಷಣಾರ್ಧದಲ್ಲೇ rap ಸಾಂಗ್ ಸಂಯೋಜಿಸುವ ಚಂದನ್ ಶೆಟ್ಟಿ, 'ಬಿಗ್ ಬಾಸ್' ಮನೆಯೊಳಗಿದ್ದವರಿಗೂ, ವೀಕ್ಷಕರಿಗೂ ಭರಪೂರ ಮನರಂಜನೆ ನೀಡಿದ್ದಾರೆ. ಇಂತಿಪ್ಪ ಚಂದನ್ ಶೆಟ್ಟಿ 'ಬಿಗ್ ಬಾಸ್' ವಿಜೇತರಾಗಿರುವುದಕ್ಕೆ ವೀಕ್ಷಕರಂತೂ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.
ಚಂದನ್ ಶೆಟ್ಟಿ 'ಬಿಗ್ ಬಾಸ್' ವಿನ್ನರ್ ಆಗಿರುವ ಬಗ್ಗೆ ಸಾಕಷ್ಟು ಜನ ತಮ್ಮ ಸಂತಸವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ವೀಕ್ಷಕರು ಹರ್ಷ ವ್ಯಕ್ತಪಡಿಸಿರುವ ಕೆಲ ಆಯ್ದ ಕಾಮೆಂಟ್ ಗಳು ಇಲ್ಲಿವೆ ನೋಡಿ...

ಸಂತಸ ವ್ಯಕ್ತಪಡಿಸಿದ ಮಾಜಿ 'ಬಿಗ್ ಬಾಸ್' ಸ್ಪರ್ಧಿ
ಚಂದನ್ ಶೆಟ್ಟಿ ವಿನ್ನರ್ ಆಗಿರುವುದಕ್ಕೆ ಖುಷಿ ಪಟ್ಟ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಸುಕೃತಾ ವಾಗ್ಲೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಲೋಡ್ ಮಾಡಿರುವುದು ಹೀಗೆ...

ಅರ್ಹ ವ್ಯಕ್ತಿಗೆ ಗೆಲುವು
''ಕನ್ನಡವನ್ನ ಇಂಟರ್ ನ್ಯಾಷನಲ್ ಲೆವೆಲ್ ಗೆ ತಗೊಂಡು ಹೋಗ್ತೀನಿ. ಇಂಗ್ಲೀಷ್ ಚಾನೆಲ್ ನಲ್ಲಿ ಕನ್ನಡ ಹಾಡುಗಳು ಪ್ಲೇ ಆಗಬೇಕು ಎಂಬ ಚಂದನ್ ಶೆಟ್ಟಿ ಅವರ ಈ ಮಾತು ನನ್ನ ಹೃದಯಕ್ಕೆ ಟಚ್ ಆಯ್ತು. ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಹ ವ್ಯಕ್ತಿಗೆ ಗೆಲುವು ಸಿಕ್ಕಿದೆ'' ಎಂಬುದು ವೀಕ್ಷಕರ ಅಭಿಪ್ರಾಯ.
ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!

ಮತಗಳು ವೇಸ್ಟ್ ಆಗಲಿಲ್ಲ.!
ವೀಕ್ಷಕರು ಹಾಕಿದ ಮತಗಳು ವೇಸ್ಟ್ ಆಗಲಿಲ್ಲ. ಎಲ್ಲರ ಫೇವರೇಟ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದಿದ್ದಾರೆ ಎಂಬ ಫೇಸ್ ಬುಕ್ ಮೀಮ್ ಗಳೇ ಹೆಚ್ಚಾಗಿವೆ.

ನಿರ್ಧಾರ ತೃಪ್ತಿ ತಂದಿದೆ
ಕಲರ್ಸ್ ಸೂಪರ್ ವಾಹಿನಿಯವರ ನಿರ್ಧಾರ ತೃಪ್ತಿ ತಂದಿದೆ ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ

ಶುಭಾಶಯಗಳ ಮಹಾಪೂರ
'ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸಾರ್ಥಕ ಆಯ್ತು.!
''ನಿಜವಾಗ್ಲೂ, ಸತ್ಯವಾಗ್ಲೂ, ದೇವ್ರಾಣೆಗೂ ಚಂದನ್ ಶೆಟ್ಟಿ ಗೆದ್ದಿದ್ದು ಅದ್ಭುತ. 'ಬಿಗ್ ಬಾಸ್' ಇವತ್ತಿಗೆ ರಿಯಲ್ ಅಂತ ಪ್ರೂವ್ ಆಯ್ತು. ನಾನು 50 ವೋಟ್ ಹಾಕಿದ್ದಕ್ಕೂ ಸಾರ್ಥಕ ಆಯ್ತು'' ಅಂತ ದಿವಾಕರ್ ಸ್ಟೈಲ್ ನಲ್ಲಿ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕಲರ್ಸ್ ಸೂಪರ್ ಗೆ ಜೈಕಾರ
ವೀಕ್ಷಕರ ಮತಗಳಿಗೆ ಬೆಲೆ ಕೊಟ್ಟ 'ಬಿಗ್ ಬಾಸ್' ಹಾಗೂ ಕಲರ್ಸ್ ವಾಹಿನಿಗೆ ವೀಕ್ಷಕರು ಜೈಕಾರ ಕೂಗಿದ್ದಾರೆ.

ಸೋತಿದ್ದು ಸೆಲೆಬ್ರಿಟಿಗಳ ಅಹಂಕಾರ
''ಈ ವರ್ಷ ಸರಿಯಾದ ವಿನ್ನರ್ ಆಯ್ಕೆ ಆಗಿದೆ. ಇಲ್ಲಿ ಸೋತಿದ್ದು ಸೆಲೆಬ್ರಿಟಿಗಳ ಮದ, ಅಹಂಕಾರ'' ಅಂತೆಲ್ಲ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸಾಲು ಸಾಲು ಕಾಮೆಂಟ್ಸ್
ಚಂದನ್ ಶೆಟ್ಟಿ ಗೆದ್ದಿರುವುದಕ್ಕೆ ವೀಕ್ಷಕರ ಸಂಭ್ರಮ ಹೀಗಿದೆ ನೋಡಿ...

ನಿಮ್ಮ ಅಭಿಪ್ರಾಯ ಏನು.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನ ಚಂದನ್ ಶೆಟ್ಟಿ ಗೆದ್ದಿರುವ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...