For Quick Alerts
  ALLOW NOTIFICATIONS  
  For Daily Alerts

  ಮೊಟ್ಟೆ ಹೊಡೆದ ಆಂಡಿ: ಇಡೀ ಮನೆ ಮಂದಿ ಸಿಡಿಮಿಡಿ.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಪ್ರತಿ ದಿನ ಏನಾದರೂ ಒಂದು ಕಿತಾಪತಿ ಮಾಡಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವಾತ ಆಂಡ್ರ್ಯೂ ಅಲಿಯಾಸ್ ಆಂಡಿ.

  ಇಲ್ಲಿಯವರೆಗೂ ಬಾಯಿಗೆ ಬಂದ ಹಾಗೆ ಮಾತನಾಡಿ, ಎಲ್ಲರನ್ನೂ ಕೆಣಕುತ್ತಿದ್ದ ಆಂಡ್ರ್ಯೂ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಿನಾಕಾರಣ ಇಬ್ಬರ ತಲೆ ಮೇಲೆ ಮೊಟ್ಟೆ ಹೊಡೆದಿದ್ದಾರೆ.

  ಜಯಶ್ರೀ ಮತ್ತು ಸೋನು ಪಾಟೀಲ್ ಸಸ್ಯಹಾರಿಗಳು. ಈ ಬಗ್ಗೆ ತಿಳಿದಿದ್ದರೂ, ಅವರಿಬ್ಬರನ್ನೇ ಟಾರ್ಗೆಟ್ ಮಾಡಿ ಆಂಡ್ರ್ಯೂ ಮೊಟ್ಟೆ ಹೊಡೆದಿದ್ದಾರೆ. ಇದು ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. ಮಕ್ಕಳ ಚಟುವಟಿಕೆಯಲ್ಲಿ ಮಕ್ಕಳ ಹಾಗೆ ನಡೆದುಕೊಳ್ಳದೇ, ತರ್ಲೆ ಮಾಡಲು ಹೋದ ಆಂಡಿ ವಿರುದ್ಧ ಇದೀಗ ಇಡೀ ಮನೆ ಸಿಡಿಮಿಡಿಗೊಂಡಿದೆ. ಮುಂದೆ ಓದಿರಿ...

  'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

  'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

  ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳಿಗೆ ಮತ್ತೆ ಮಕ್ಕಳಾಗುವ ಅವಕಾಶವನ್ನ 'ಬಿಗ್ ಬಾಸ್' ನೀಡಿದ್ದರು. ಅದು 'ಮಗು ಆಗೋಣ ಬಾ' ಟಾಸ್ಕ್ ಮೂಲಕ. ಇದರ ಅನುಸಾರ ಪ್ರತಿ ಬಾರಿ ಟಿವಿ ಪರದೆ ಮೇಲೆ ಯಾರ ಭಾವಚಿತ್ರ ಬರುತ್ತದೋ, ಅವರು ಮಗುವಿನ ಹಾಗೆ ವರ್ತಿಸಬೇಕಿತ್ತು. ಉಳಿದವರು ಮಗುವಿನ ಲಾಲನೆ-ಪಾಲನೆ ಮಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಆಂಡ್ರ್ಯೂ ಮತ್ತು ಆಡಮ್ ಪಾಶಾ ಅವಳ-ಜವಳಿ ಮಕ್ಕಳ ಪಾತ್ರ ನಿಭಾಯಿಸಬೇಕಿತ್ತು.

  ಆಂಡ್ರ್ಯೂ ಮಾಡಿದ್ದೇನು.?

  ಆಂಡ್ರ್ಯೂ ಮಾಡಿದ್ದೇನು.?

  ''ನಾನು ಜೀವನದಲ್ಲಿ ಯಾವತ್ತೂ ತರ್ಲೆ ಮಾಡಲ್ಲ.. ನನಗೆ ಇಬ್ಬರೂ ತುಂಬಾ ಇಷ್ಟ'' ಅಂತ ಹೇಳುತ್ತಲೇ ಜೇಬಿನಲ್ಲಿ ಇದ್ದ ಮೊಟ್ಟೆಗಳನ್ನ ತೆಗೆದುಕೊಂಡು ಸೋನು ಪಾಟೀಲ್ ಮತ್ತು ಜಯಶ್ರೀ ತಲೆ ಮೇಲೆ ಆಂಡ್ರ್ಯೂ ಹೊಡೆದರು.

  ಗೊತ್ತಿದ್ದೂ ಟಾರ್ಗೆಟ್ ಮಾಡಿದ್ದು ಯಾಕೆ.?

  ಗೊತ್ತಿದ್ದೂ ಟಾರ್ಗೆಟ್ ಮಾಡಿದ್ದು ಯಾಕೆ.?

  ''ಜಯಶ್ರೀ ಮತ್ತು ಸೋನು ಪಾಟೀಲ್ ಮೊಟ್ಟೆ ತಿನ್ನಲ್ಲ ಅಂತ ಆಂಡ್ರ್ಯೂಗೆ ಗೊತ್ತು. ಅದಕ್ಕೆ ಹೊಡೆದಿದ್ದಾನೆ. ಇವೆಲ್ಲವೂ ಕ್ಯಾಮರಾ ಸಲುವಾಗಿ'' ಅನ್ನೋದು 'ಬಿಗ್ ಬಾಸ್' ಮನೆ ಸದಸ್ಯರ ಅಭಿಪ್ರಾಯ.

  ಕಣ್ಣೀರಿಟ್ಟ ಜಯಶ್ರೀ, ಸೋನು ಪಾಟೀಲ್

  ಕಣ್ಣೀರಿಟ್ಟ ಜಯಶ್ರೀ, ಸೋನು ಪಾಟೀಲ್

  ತಮ್ಮ ಭಾವನೆಗಳಿಗೆ ಧಕ್ಕೆ ಆದ ಪರಿಣಾಮ, ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದರು. ತಮ್ಮ ತಾಯಿ ಜೊತೆಗೂ ಆಂಡ್ರ್ಯೂ ಇದೇ ರೀತಿ ನಡೆದುಕೊಳ್ಳುತ್ತಾರಾ ಅಂತ ಜಯಶ್ರೀ ಪ್ರಶ್ನಿಸಿದರು.

  ಮಾನವೀಯತೆ ಇಲ್ಲ.!

  ಮಾನವೀಯತೆ ಇಲ್ಲ.!

  ''ಆಂಡಿಗೆ ಮಾನವೀಯತೆ ಇಲ್ಲ. ಈ ತರಹ ಮಾಡಿದರೆ ಮನೆಯಲ್ಲಿ ಉಳಿದುಕೊಳ್ಳಬಹುದು ಅಂತ ಅಂದುಕೊಂಡಿದ್ದಾನೆ. ಜನರೇ ಅವನಿಗೆ ಪಾಠ ಕಲಿಸುತ್ತಾರೆ'' ಅಂತಾರೆ ಶಶಿ ಕುಮಾರ್.

  ಕ್ಲಾಸ್ ತೆಗೆದುಕೊಂಡ ಆಡಮ್

  ಕ್ಲಾಸ್ ತೆಗೆದುಕೊಂಡ ಆಡಮ್

  ''ಮನೆಯಲ್ಲಿ ನೀನು ಎರಡನೇ ರಶ್ಮಿ ಆಗಿದ್ದೀಯಾ... ನೀನು ಮಾಡಿದ್ದು ಫನ್ ಆಗಿರಲಿಲ್ಲ. ಅವಮಾನ ಮಾಡಿದ ಹಾಗಿತ್ತು. ಕ್ಯಾಮರಾಗಾಗಿ ಇದನ್ನೆಲ್ಲ ಮಾಡುತ್ತಿದ್ದರೆ, ತುಂಬಾ ತಪ್ಪು'' ಎಂದು ಆಂಡ್ರ್ಯೂಗೆ ಆಡಮ್ ಕ್ಲಾಸ್ ತೆಗೆದುಕೊಂಡರು.

  ಆಂಡ್ರ್ಯೂ ಕೊಟ್ಟ ಸಮಜಾಯಿಷಿ ಏನು.?

  ಆಂಡ್ರ್ಯೂ ಕೊಟ್ಟ ಸಮಜಾಯಿಷಿ ಏನು.?

  ''ಟಾಸ್ಕ್ ನಲ್ಲಿ ಮೊಟ್ಟೆ ಹೊಡೆಯಲು ಮೊನ್ನೆ ಹೇಳಿದ್ದರು. ಅದು ಅವಮಾನನಾ.? ಸಸ್ಯಹಾರಿಗೆ ಮೊಟ್ಟೆ ಹೊಡೆಯಬೇಕಿತ್ತು ಅಂತ ನೀವೆಲ್ಲ ಹೇಳಿದ್ರಿ. ಅದನ್ನೇ ನಾನು ಮಾಡಿದಾಗ, ಎಲ್ಲರೂ ಉಲ್ಟಾ ಹೊಡೆದ್ರಿ. ಫನ್ ಆಗಿ ಮಾಡಿದ್ದನ್ನ, ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ. ಅದಕ್ಕೆ ಧರ್ಮದ ಬಣ್ಣ ಬಳಿಯುತ್ತಾರೆ'' ಅಂತೆಲ್ಲಾ ಆಂಡ್ರ್ಯೂ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.

  ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ ಆಂಡ್ರ್ಯೂ

  ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ ಆಂಡ್ರ್ಯೂ

  ಕೊನೆಗೆ ಸೋನು ಪಾಟೀಲ್ ಮತ್ತು ಜಯಶ್ರೀಗೆ ಲಿಖಿತ ರೂಪದಲ್ಲಿ 'ಸಾರಿ' ಅಂತ ಬರೆದುಕೊಟ್ಟರೆ ವಿನಃ ನೇರವಾಗಿ ಬಂದು ಆಂಡ್ರ್ಯೂ ಕ್ಷಮೆ ಕೇಳಲಿಲ್ಲ.

  ಇದು ಸರಿನಾ.?

  ಇದು ಸರಿನಾ.?

  ಆಂಡ್ರ್ಯೂ ವರ್ತನೆ ಮತ್ತು ಅದಕ್ಕೆ ಆತ ಕೊಟ್ಟ ಸಮಜಾಯಿಷಿ ಸರಿ ಅಂತ ನಿಮಗೆ ಅನಿಸುತ್ತಾ.? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Day 25: Andrew cracks eggs on Sonu Patil and Jayashree's head.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X