For Quick Alerts
  ALLOW NOTIFICATIONS  
  For Daily Alerts

  ರಾಕೇಶ್-ಅಕ್ಷತಾ ಟಾರ್ಗೆಟ್ ಆಗಲು ಕಾರಣ ಆಂಡ್ರ್ಯೂ ಅಂತೆ.!

  |

  ''ಅನಿಷ್ಟಕ್ಕೆಲ್ಲಾ ಶನೇಶ್ವರ ಕಾರಣ'' ಎಂಬ ಮಾತಿನಂತೆ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಾಕೇಶ್ ರನ್ನ ಜಯಶ್ರೀ, ಧನರಾಜ್ ಮತ್ತು ಸೋನು ಪಾಟೀಲ್ ಟಾರ್ಗೆಟ್ ಮಾಡಲು... ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಎಲ್ಲರೂ ಪ್ರಶ್ನೆ ಮಾಡಲು ಕಾರಣ ಆಂಡ್ರ್ಯೂ ಅಂತೆ.!

  ಹೀಗಂತ ಕಾರಣ ನೀಡಿ ಆಂಡ್ರ್ಯೂ ಮೇಲೆ ರಾಕೇಶ್ ಮುನಿಸಿಕೊಂಡಿದ್ದಾರೆ. ಯಾಕಂದ್ರೆ, 'ಕಾಲ್ ಸೆಂಟರ್' ಟಾಸ್ಕ್ ಗೂ ಮುನ್ನ 'ಬಿಗ್ ಬಾಸ್' ನೀಡಿದ್ದ ಚಟುವಟಿಕೆಯಲ್ಲಿ ಶಾವಿಗೆ ಪಾಯಸಕ್ಕೆ ಆಂಡ್ರ್ಯೂ ಖಾರದ ಪುಡಿ ಹಾಕಿದ್ದರು.

  ಇದು ಅಕ್ಷತಾಗೆ ಕಿರಿಕಿರಿ ತಂದು ಕೂಗಾಡುತ್ತಿರುವಾಗ, ಅಕ್ಷತಾ ಪರವಾಗಿ ನಿಂತ ರಾಕೇಶ್ ಗೆ ''ಗಂಡ-ಹೆಂಡತಿ'' ಎಂದು ಕಾಮೆಂಟ್ ಮಾಡಿದವರು ಆಂಡ್ರ್ಯೂ. ಆಂಡ್ರ್ಯೂ ಹೀಗೆ ''ಗಂಡ-ಹೆಂಡತಿ' ಅಂತ ಹೇಳಿದ್ದಕ್ಕೆ, ಇಡೀ ಮನೆ ನಮ್ಮ ವಿರುದ್ಧ ಬೆಟ್ಟು ತೋರಿಸುವ ಹಾಗೆ ಆಯ್ತು ಎಂಬುದು ರಾಕೇಶ್ ಆರೋಪ. ಮುಂದೆ ಓದಿರಿ...

  ಆಂಡ್ರ್ಯೂ ವಿರುದ್ಧ ರಾಕೇಶ್ ಆರೋಪ.!

  ಆಂಡ್ರ್ಯೂ ವಿರುದ್ಧ ರಾಕೇಶ್ ಆರೋಪ.!

  ''ಟಾಸ್ಕ್ ನಲ್ಲಿ ಪೂರ್ತಿ 'ಗಂಡ-ಹೆಂಡತಿ' ಬಗ್ಗೆ ಮಾತು ಬಂತು. ನೀನು (ಆಂಡ್ರ್ಯೂ) ಹಾಗೆ ಮಾತನಾಡಿದ್ದಕ್ಕೆ, ಬೇರೆಯವರು ಅದನ್ನ ಟಾಸ್ಕ್ ನಲ್ಲಿ ಬಳಸಿಕೊಂಡರು. ಅಕ್ಷತಾ ಬಿಟ್ಟರೆ ನಾನು ಜಾಸ್ತಿ ಕಾಲ ಕಳೆಯುವುದು ನಿನ್ನ ಜೊತೆಗೆ. ನೀನೇ ಈ ತರಹ ಮಾತನಾಡಿದ್ದಕ್ಕೆ ನನಗೆ ಬೇಸರ ಆಯ್ತು'' ಎಂದು ಆಂಡ್ರ್ಯೂಗೆ ಹೇಳಿದರು ರಾಕೇಶ್.

  ಅಕ್ಷತಾ ಜೊತೆ ಅಂಟಿಕೊಂಡೇ ಇರುವ ರಾಕೇಶ್ ಗೆ ಬಿಸಿ ಮುಟ್ಟಿಸಿದ 'ಬಿಗ್ ಬಾಸ್' ಸ್ಪರ್ಧಿಗಳು.!

  ಪ್ರಶ್ನೆ ಮಾಡಿದ ಆಂಡ್ರ್ಯೂ

  ಪ್ರಶ್ನೆ ಮಾಡಿದ ಆಂಡ್ರ್ಯೂ

  ''ಬಿಗ್ ಬಾಸ್' ಮನೆಯಿಂದ ಹೊರಗೆ ಹೋದ ಮೇಲೆಯೂ ಅಕ್ಷತಾ ಜೊತೆಗೆ ಆತ್ಮೀಯವಾಗಿ ಇರುತ್ತೀಯಾ'' ಅಂತ ಆಂಡ್ರ್ಯೂ ಪ್ರಶ್ನೆ ಮಾಡಿದಾಗ, ''ಹೊರಗೆ ಹೋದ ಮೇಲೆ ಅವರ ಜೀವನ, ಅವರ ಇಷ್ಟ. ಇಲ್ಲಿ ನಾವು ಸ್ನೇಹಿತರಾಗಿ ಒಬ್ಬರನ್ನೊಬ್ಬರು ಸಪೋರ್ಟ್ ಮಾಡುತ್ತಿದ್ದೇವೆ ಅಷ್ಟೇ'' ಎಂದು ಉತ್ತರಿಸಿದರು ರಾಕೇಶ್.

  ಅಕ್ಷತಾ ಕಣ್ಣೀರು ಹಾಕಿದರೂ, ರಾಕೇಶ್ ಬಿಡುವ ಹಾಗೆ ಕಾಣುತ್ತಿಲ್ಲ.!

  ಎಲ್ಲರೂ ಟಾರ್ಗೆಟ್ ಮಾಡಲು ಕಾರಣ.?

  ಎಲ್ಲರೂ ಟಾರ್ಗೆಟ್ ಮಾಡಲು ಕಾರಣ.?

  'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಮೊದಲ ದಿನ ಗ್ರಾಹಕರಾಗಿದ್ದ ರಾಕೇಶ್... ಗ್ರಾಹಕ ಸೇವಾ ಪ್ರತಿನಿಧಿಯ ಸ್ಥಾನದಲ್ಲಿ ಕುಳಿತಿದ್ದ ಜಯಶ್ರೀ, ಸೋನು ಪಾಟೀಲ್ ಮತ್ತು ಧನರಾಜ್ ಗೆ ಬೇಡದ ಪ್ರಶ್ನೆಗಳನ್ನು ಕೇಳಿ ಬೆಂಡೆತ್ತಿದ್ದರು. ''ತಮ್ಮ ಹೆಂಡತಿಯನ್ನು ಧನರಾಜ್ ಬೇರೆಯವರಲ್ಲಿ ಕಾಣುತ್ತಿದ್ದಾರೆ'' ಅಂತ ರಾಕೇಶ್ ದೂರಿದ್ದರು. ಇದರಿಂದ ಸಿಟ್ಟಿಗೆದ್ದ ಧನರಾಜ್, ರಾಕೇಶ್ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕುಳಿತಾಗ ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದರು.

  'ಐ ಲವ್ ಯು ರಾಕಿ' ಎನ್ನುವ ಅಕ್ಷತಾ-ರಾಕೇಶ್ ನಡುವಿನ ಸಂಬಂಧ ಎಂಥದ್ದು.?

  ಕೆಟ್ಟ ಹೆಸರು ಬರುತ್ತಿದೆ ಎಂದು ಕಣ್ಣೀರಿಟ್ಟ ಅಕ್ಷತಾ

  ಕೆಟ್ಟ ಹೆಸರು ಬರುತ್ತಿದೆ ಎಂದು ಕಣ್ಣೀರಿಟ್ಟ ಅಕ್ಷತಾ

  ''ನನಗೆ ಕೆಟ್ಟ ಹೆಸರು ಬರುತ್ತಿದೆ'' ಎಂದು ಅಕ್ಷತಾ ಕಣ್ಣೀರಿಟ್ಟಾಗ, ''ಹೆಸರು ಹಾಳಾಗುತ್ತಿದೆ ಅಂತ ಹೇಗೆ ಗೊತ್ತು.? ಎಂದು ರಾಕೇಶ್ ವಾದ ಮಾಡಿ ಸಮಾಧಾನ ಪಡಿಸಿದರು.

  English summary
  Bigg Boss Kannada 6: Day 39: Rakesh blames Andrew.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X