For Quick Alerts
  ALLOW NOTIFICATIONS  
  For Daily Alerts

  ಮಾತು ತಪ್ಪಿದ ಆಂಡಿ: ಈ ಚೆಂದಕ್ಕೆ ಆ ಡ್ರಾಮಾ ಬೇಕಿತ್ತಾ.?

  |
  Bigg Boss Kannada Season 6: ಮಾತು ತಪ್ಪಿದ ಆಂಡಿ: ಈ ಚೆಂದಕ್ಕೆ ಆ ಡ್ರಾಮಾ ಬೇಕಿತ್ತಾ.? | FILMIBEAT KANNADA

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಕಿರಿಕಿರಿ, ಕಿತ್ತಾಟ, ಜಗಳಕ್ಕೆ ನಾಂದಿ ಹಾಡಿರುವವರು ಆಂಡ್ರ್ಯೂ ಅಲಿಯಾಸ್ ಆಂಡಿ. ಸದಾ ಬೇರೆಯವರ ತಪ್ಪನ್ನು ಎತ್ತಿ ಹಿಡಿಯುವ ಆಂಡಿ ಈ ಬಾರಿ ತಾವೇ ಆಡಿದ ಮಾತಿನ ಪ್ರಕಾರ ನಡೆದುಕೊಂಡಿಲ್ಲ.!

  ಅಷ್ಟಕ್ಕೂ, ಆಗಿದ್ದೇನು ಅಂದ್ರೆ... 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಟಾಸ್ಕ್ ನ ಮನೆಯ ಸದಸ್ಯರಿಗೆ ಈ ವಾರ 'ಬಿಗ್ ಬಾಸ್' ನೀಡಿದ್ದರು. ಈ ಚಟುವಟಿಕೆಯಲ್ಲಿ ಎದುರಾಳಿ ತಂಡದ ಗೋಡೆಯನ್ನು ಬೀಳಿಸುವ ಅವಕಾಶ ಇತ್ತು. ಆದ್ರೆ, ಅದನ್ನ ಯಾರೂ ಮಾಡಲಿಲ್ಲ.

  ಇದಕ್ಕೆ ಶಿಕ್ಷೆಯ ರೂಪದಲ್ಲಿ 700 ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನು 'ಬಿಗ್ ಬಾಸ್' ಕಡಿತಗೊಳಿಸಿದರು. ಇದರಿಂದ ರೊಚ್ಚಿಗೆದ್ದ ಆಂಡಿ, ಮುಖಕ್ಕೆ ಬಿಳಿ ಪೌಡರ್ ಬಳಿದುಕೊಂಡು ಪ್ರತಿಭಟನೆ ಮಾಡಿದರು. ಅಲ್ಲದೇ, ಲಕ್ಷುರಿ ಬಜೆಟ್ ಪದಾರ್ಥಗಳನ್ನು ಮುಟ್ಟಲ್ಲ ಅಂತ ಶಪಥ ಮಾಡಿದರು. ಕೊನೆಗೆ ಲಕ್ಷುರಿ ಬಜೆಟ್ ನಿಂದ ಬಂದ ಡ್ರೈ ಫ್ರೂಟ್ಸ್ ಲಡ್ಡುನ ಆಂಡಿ ತಿಂದುಬಿಟ್ಟರು.! ಈ ಚೆಂದಕ್ಕೆ ಆ ಡ್ರಾಮಾ ಬ್ರೇಕಿತ್ತಾ.?

  ಇಟ್ಟಿಗೆ ಕದಿಯಲು ಮುಂದಾಗಿದ್ದ ಆಂಡಿ

  ಇಟ್ಟಿಗೆ ಕದಿಯಲು ಮುಂದಾಗಿದ್ದ ಆಂಡಿ

  ಎದುರಾಳಿ ತಂಡದಿಂದ ಇಟ್ಟಿಗೆಗಳನ್ನು ಕದಿಯಲು ಆಂಡಿ ಮುಂದಾಗಿದ್ದರು. ಆದ್ರೆ, ಆಗ ಶಶಿ ಮತ್ತು ರಶ್ಮಿ.. ಆಂಡಿನ ತಡೆದಿದ್ದರು. ''ಈ ತರಹ ಆಟ ಬೇಡ'' ಎಂದು ಆಂಡಿ ತಂದಿದ್ದ ಇಟ್ಟಿಗೆಗಳನ್ನು ವಾಪಸ್ ಮಾಡಿಸಿದರು.

  'ಅರ್ಧ ತಲೆ ಬೋಳಿಸಿಕೊಳ್ಳುವೆ' ಎಂದು ಹೊಸ ಸವಾಲೆಸೆದ ಆಂಡಿ.!

  ಕ್ರೀಡಾ ಮನೋಭಾವ ಇಲ್ಲ.!

  ಕ್ರೀಡಾ ಮನೋಭಾವ ಇಲ್ಲ.!

  ಸ್ಪರ್ಧಿಗಳಲ್ಲಿ ಕ್ರೀಡಾ ಮನೋಭಾವ ಇಲ್ಲದ ಕಾರಣಕ್ಕೆ, ಎದುರಾಳಿ ತಂಡದ ಗೋಡೆಯನ್ನು ಬೀಳಸದಿದ್ದಕ್ಕೆ 'ಬಿಗ್ ಬಾಸ್' 700 ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನು ಕಟ್ ಮಾಡಿದರು.

  'ಸುಂದರಿ' ಕವಿತಾ ಮತ್ತು ಆಂಡ್ರ್ಯೂ ನಡುವೆ ಮತ್ತೆ ವಾಗ್ಯುದ್ಧ.!

  ಮುನಿಸಿಕೊಂಡ ಆಂಡಿ

  ಮುನಿಸಿಕೊಂಡ ಆಂಡಿ

  ''ಯಾರೂ ಕ್ರೀಡಾ ಮನೋಭಾವದಿಂದ ಆಡಲಿಲ್ಲ. ಹೀಗಾಗಿ, ಲಕ್ಷುರಿ ಬಜೆಟ್ ನಿಂದ ಬರುವ ಪದಾರ್ಥಗಳನ್ನು ನಾನು ಮುಟ್ಟಲ್ಲ. ನಾನು ಆಡಲು ಹೋದಾಗ, ನನ್ನನ್ನ ನಿಲ್ಲಿಸಿದರು'' ಎನ್ನುತ್ತಾ ಮುಖದ ತುಂಬಾ ಬಿಳಿ ಪೌಡರ್ ಹಚ್ಚಿಕೊಂಡು ಆಂಡಿ ಪ್ರತಿಭಟಿಸಿದರು.

  ರಾಕೇಶ್ ಗೆ ಮಾನ, ಮರ್ಯಾದೆ ಇಲ್ಲ ಎಂದ ಆಂಡಿ: ಕಣ್ಣೀರಿಟ್ಟ ಅಕ್ಷತಾ.!

  ಶಶಿ, ಕವಿತಾ ವಿರುದ್ಧ ತಿರುಗಿಬಿದ್ದ ಆಂಡಿ

  ಶಶಿ, ಕವಿತಾ ವಿರುದ್ಧ ತಿರುಗಿಬಿದ್ದ ಆಂಡಿ

  ''ಆಡಲು ಹೋದಾಗ ಶಶಿ ನನ್ನ ಬಿಡಲಿಲ್ಲ. ಆಮೇಲೆ ನೋಡಿದ್ರೆ, ಕವಿತಾ ನನಗೆ ಕಳಪೆ ಪ್ರದರ್ಶನ ಎನ್ನುತ್ತಾರೆ'' ಅಂತ ಹೇಳ್ತಾ ಶಶಿ ಮತ್ತು ಕವಿತಾ ವಿರುದ್ಧ ಆಂಡಿ ತಿರುಗಿಬಿದ್ದರು.

  ಲಾಡು ತಿನ್ನಿಸಿದ ಜಯಶ್ರೀ

  ಲಾಡು ತಿನ್ನಿಸಿದ ಜಯಶ್ರೀ

  ಲಕ್ಷುರಿ ಬಜೆಟ್ ಪಾಯಿಂಟ್ಸ್ ನಿಂದ ಬಂದ ಡ್ರೈ ಫ್ರೂಟ್ಸ್ ಲಡ್ಡುನ ಆಂಡ್ರ್ಯೂಗೆ ಜಯಶ್ರೀ ತಿನ್ನಿಸಿದರು. ಅದಾದ್ಮೇಲೆ, ಚಿಕನ್ ತಿನ್ನಲ್ಲ ಅಂತ ಆಂಡಿ ಬಿಗ್ ಬಾಸ್ ಗೆ ಹೇಳಿದ್ದಾರೆ. ಒಂದು ಬಾರಿ ಮಾತು ತಪ್ಪಿದ ಆಂಡಿ, ಮತ್ತೆ ಮಾತಿನ ಪ್ರಕಾರ ನಡೆದುಕೊಳ್ತಾರಾ.?

  English summary
  Bigg Boss Kannada 6: Day 53: Andrew breaks his promise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X