ಎಂಟ್ರಿ ಕೊಟ್ಟ ಒಂದೇ ವಾರಕ್ಕೆ ಕ್ಯಾಪ್ಟನ್ ಆದ ಜೀವಿತಾ.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ಮಾಡೆಲ್ ಕಮ್ ನಟಿ ಜೀವಿತಾ ಎಂಟ್ರಿಕೊಟ್ಟು ಇನ್ನೂ ಹತ್ತು ದಿನ ಕೂಡ ಕಳೆದಿಲ್ಲ. ಅಷ್ಟು ಬೇಗ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಜೀವಿತಾ ಆಯ್ಕೆ ಆಗಿದ್ದಾರೆ.
ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಮೇಘಶ್ರೀ, ನಿವೇದಿತಾ ಗೌಡ ಜೊತೆಗೆ ಜೀವಿತಾ ಕಳೆದ ವಾರವಷ್ಟೇ ಕಾಲಿಟ್ಟಿದ್ದರು. 'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜೀವಿತಾ, ಕ್ಯಾಪ್ಟನ್ ಪ್ರತಿಸ್ಪರ್ಧಿ ಆದರು.
ಜೀವಿತಾ ಜೊತೆಗೆ ಅಕ್ಷತಾ, ರಶ್ಮಿ, ಶಶಿ, ಧನರಾಜ್ ಕೂಡ ಕ್ಯಾಪ್ಟನ್ ರೇಸ್ ನಲ್ಲಿದ್ದರು. ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ ಚಟುವಟಿಕೆಯಲ್ಲಿ ಮೊದಲು ರಾಪಿಡ್ ರಶ್ಮಿ ಹೊರಬಿದ್ದರು. ಕೊನೆಗೆ ಶಶಿ ಮತ್ತು ಧನರಾಜ್ ಮನಸ್ಸು ಮಾಡಿ ಜೀವತಾ ರನ್ನ ಕ್ಯಾಪ್ಟನ್ ಮಾಡಿದರು.

ಸದ್ಯಕ್ಕೆ ಮನೆಯ ಅಧಿಕಾರ ವಹಿಸಿಕೊಂಡಿರುವ ಜೀವಿತಾ, ಮುಂದಿನ ವಾರ ಇಮ್ಯೂನಿಟಿ ಪಡೆದಿದ್ದಾರೆ. ಕ್ಯಾಪ್ಟನ್ ಆಗಿರುವ ಜೀವಿತಾಗೆ 'ಗುಡ್ನೆಸ್' ರಾಕೇಶ್ ಕೆಲ ಟಿಪ್ಸ್ ನೀಡಿದ್ದಾರೆ.
ಐವತ್ತು ದಿನ 'ಬಿಗ್ ಬಾಸ್' ಆಟವನ್ನು ಹೊರಗಿನಿಂದ ನೋಡಿರುವ ಜೀವಿತಾ, ಇದೀಗ ಸ್ಪರ್ಧಿಯಾಗಿ, ಕ್ಯಾಪ್ಟನ್ ಆಗಿ ಹೇಗೆ ಆಟ ಆಡುತ್ತಾರೆ ಅಂತ ನೋಡಬೇಕು.


Click it and Unblock the Notifications











