For Quick Alerts
  ALLOW NOTIFICATIONS  
  For Daily Alerts

  ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

  |
  Bigg Boss Kannada Season 6:ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

  ಪಾಸಿಟಿವ್ ಆಗಲಿಲ್ಲ ಅಂದರೆ ನೆಗೆಟಿವ್ ಆದರೂ ಸರಿ.. ಒಟ್ನಲ್ಲಿ ಸದಾ ಸುದ್ದಿಯಲ್ಲಿ ಇರಬೇಕು, ಕ್ಯಾಮರಾ ಮುಂದೆ ಕಾಣಿಸಿಕೊಳ್ಳಬೇಕು, ಸಂಚಿಕೆಯಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಂಡು, ಗ್ರ್ಯಾಂಡ್ ಫಿನಾಲೆವರೆಗೂ ತಲುಪಬೇಕು ಅನ್ನೋದು ಆಂಡಿ ಸ್ಟ್ರಾಟೆಜಿ ಆಗಿರಬೇಕು. ಅದಕ್ಕೆ ಪ್ರತಿ ವಾರ ಏನಾದರೊಂದು ಕ್ಯಾತೆ ತೆಗೆದು ವಿವಾದದ ಕೇಂದ್ರಬಿಂದು ಆಗ್ತಾರೆ ಆಂಡಿ.

  ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡುವ ಆಂಡಿಗೆ ಈಗಾಗಲೇ ಸುದೀಪ್ ಅನೇಕ ಬಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಂದು ಸಂಚಿಕೆಯಲ್ಲಿ ಆಂಡಿ ಜೊತೆ ಸುದೀಪ್ ಮಾತು ಬಿಟ್ಟಿದ್ದ ಉದಾಹರಣೆಯೂ ಇದೆ.

  ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಂಡಿ ಅರ್ಧ ತಲೆ ಬೋಳಿಸಿಕೊಂಡಿದ್ದೂ ಆಯ್ತು. ಇಷ್ಟೆಲ್ಲಾ ಆದರೂ ಆಂಡಿ ಬುದ್ಧಿ ಕಲಿತಿಲ್ಲ. ಚಟುವಟಿಕೆಯಲ್ಲಿ ಗೆಲ್ಲಲು ಅತಿರೇಕದ ವರ್ತನೆ ತೋರಿದ್ದಾರೆ. ಸೂಪರ್ ಹೀರೋಗಳ ಕಣ್ಣಿಗೆ ಮತ್ತು ಮೂಗಿಗೆ ಮಾರಕ ಸ್ಪ್ರೇ ಹೊಡೆದಿದ್ದಾರೆ. ಮುಂದೆ ಓದಿರಿ...

  ಸೂಪರ್ ವಿಲನ್ ಆಗಿದ್ದ ಆಂಡಿ

  ಸೂಪರ್ ವಿಲನ್ ಆಗಿದ್ದ ಆಂಡಿ

  'ಬಿಗ್ ಬಾಸ್' ನೀಡಿದ್ದ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಟಾಸ್ಕ್ ನಲ್ಲಿ ಆಂಡಿ ಸೂಪರ್ ವಿಲನ್ ಆಗಿದ್ದರು. ಸೂಪರ್ ಹೀರೋಗಳಿಗೆ ಕಿರಿಕಿರಿ ಕೊಡುವುದು ಆಂಡಿ ಕೆಲಸವಾಗಿತ್ತು. ಆಂಡಿ ಕಿರಿಕಿರಿಯನ್ನ ಸಹಿಸಿಕೊಳ್ಳಲು ಆಗದೆ, ಬಝರ್ ಒತ್ತಿ ಟಾಸ್ಕ್ ನಿಂದ ಸೂಪರ್ ಹೀರೋಗಳು ನಿರ್ಗಮಿಸಬಹುದಿತ್ತು.

  ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.?

  ಕಿರಿಕಿರಿ ಮಾಡು ಅಂದ್ರೆ, ಕಿರುಕುಳ ಕೊಟ್ಟ ಆಂಡಿ

  ಕಿರಿಕಿರಿ ಮಾಡು ಅಂದ್ರೆ, ಕಿರುಕುಳ ಕೊಟ್ಟ ಆಂಡಿ

  ಈಗಾಗಲೇ ಹಲವು ಬಾರಿ ಬೇಕಾಬಿಟ್ಟಿ ವರ್ತನೆ ತೋರಿರುವ ಆಂಡಿ, 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಹೀರೋಗಳಿಗೆ ಕಿರಿಕಿರಿ ಮಾಡಬೇಕು ಎಂಬುದು ನಿಯಮ ನಿಜ. ಕಿರಿಕಿರಿ ಮಾಡಲು ನಾನಾ ವಿಧಗಳಿವೆ. ಅವೆಲ್ಲವನ್ನೂ ಬಿಟ್ಟು, ಹೀರೋಗಳ ಕಣ್ಣಿಗೆ ಮತ್ತು ಉಸಿರುಗಟ್ಟುವ ಹಾಗೆ ಮೂಗಿಗೆ ಪದೇ ಪದೇ ಸ್ಪ್ರೇ ಹೊಡೆದು ಕಿರಿಕಿರಿ ಅಲ್ಲ, ಅಕ್ಷರಶಃ ಕಿರುಕುಳ ಕೊಟ್ಟಿದ್ದಾರೆ ಆಂಡಿ. ''ಮುಖಕ್ಕೆ ಸ್ಪ್ರೇ ಹೊಡೆಯಬೇಡಿ'' ಅಂತ ಎಷ್ಟೇ ಬಾರಿ ಹೇಳಿದರೂ, ಅದನ್ನ ಕೇಳುವ ವ್ಯವಧಾನ ಕೂಡ ಆಂಡಿಗೆ ಇರಲಿಲ್ಲ.

  'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?

  ಮಾರಕ ಸ್ಪ್ರೇ ಹೊಡೆದಿದ್ರಾ ಆಂಡಿ.?

  ಮಾರಕ ಸ್ಪ್ರೇ ಹೊಡೆದಿದ್ರಾ ಆಂಡಿ.?

  ''ಆಂಡಿ ಮಾಡುತ್ತಿರುವುದು ಸರಿ ಅಲ್ಲ. ದೇಹಕ್ಕೆ ಹಾಕುವ ಸ್ಪ್ರೇ, mosquito ಗೆ ಹೊಡೆಯುವ ಸ್ಪ್ರೇ ಕಣ್ಣಿಗೆ ಹಾಕಬಾರದು. ಇದು ಮಿಸ್ ಯೂಸ್ ಆಗುತ್ತಿದೆ'' ಎಂಬ ಮಾತು 'ಸೂಪರ್ ವಿಲನ್' ರಾಕೇಶ್ ಬಾಯಿಂದಲೇ ಬಂದಿದೆ. ಹಾಗಾದ್ರೆ, ಕೇವಲ ಟಾಸ್ಕ್ ಗೆಲ್ಲಲು ಮಾರಕ ಸ್ಪ್ರೇಯನ್ನ ಇನ್ನೊಬ್ಬರ ಕಣ್ಣಿಗೆ ಆಂಡಿ ಹಾಕುತ್ತಿದ್ರಾ.?

  ವೀಕ್ಷಕರಿಗೆ ಕಿರಿಕಿರಿ ಆಗಿದೆ.!

  ವೀಕ್ಷಕರಿಗೆ ಕಿರಿಕಿರಿ ಆಗಿದೆ.!

  ವೀಕ್ಷಕರಿಗೆ ಮನರಂಜನೆ ನೀಡಬೇಕಿದ್ದ ಈ ಚಟುವಟಿಕೆ ಕಿರಿಕಿರಿ ತಂದಿರುವುದು ಅಕ್ಷರಶಃ ಸತ್ಯ. ಹೀರೋಗಳಿಗೆ ಕಿರಿಕಿರಿ ನೀಡಬೇಕಿದ್ದ ವಿಲನ್ ಗಳು, ಡೈರೆಕ್ಟ್ ಆಗಿ ವೀಕ್ಷಕರಿಗೆ ಕಿರಿಕಿರಿ ನೀಡಿರುವುದು ಮಾತ್ರ ವಿಷಾದನೀಯ. ಇದನ್ನ 'ಬಿಗ್ ಬಾಸ್' ಅರಿತು ಸ್ಪರ್ಧಿಗಳಿಗೆ ಬುದ್ಧಿ ಹೇಳಿದರೆ ಒಳಿತು.

  English summary
  Bigg Boss Kannada 6: Day 66: Andrew crosses his limits again in Super heroes v/s Super Villains Task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X