For Quick Alerts
  ALLOW NOTIFICATIONS  
  For Daily Alerts

  ಮಾಡೋದೆಲ್ಲಾ ಮಾಡಿ ಕಣ್ಣೀರು ಹಾಕಿದ ರಾಕೇಶ್: ಹಿಂದಿದೆ ಹೊಸ ಸ್ಟ್ರಾಟೆಜಿ.!

  |

  'ಬಿಗ್ ಬಾಸ್' ನೀಡಿದ್ದ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಟಾಸ್ಕ್ ನಲ್ಲಿ ಎಂ.ಜೆ.ರಾಕೇಶ್ 'ಸೂಪರ್ ವಿಲನ್' ಆಗಿದ್ದರು. ಸದಾ 'ಗುಡ್ನೆಸ್' ಬಗ್ಗೆ ಪಾಠ ಮಾಡುವ ಎಂ.ಜೆ.ರಾಕೇಶ್ ರವರ 'ಗುಡ್ನೆಸ್' ಈ ಚಟುವಟಿಕೆಯಲ್ಲಿ ಕಾಣಲೇ ಇಲ್ಲ.

  ಚಟುವಟಿಕೆ ಶುರುವಾಗುತ್ತಿದ್ದ ಹಾಗೆ, ಆಕ್ರಮಣಕಾರಿ ಆದರು ರಾಕೇಶ್. ಹುಡುಗ-ಹುಡುಗಿ ಎಂಬುದನ್ನೂ ನೋಡದೆ, ಕೀಗಳನ್ನು ಪಡೆದು ಗೆಲುವು ಸಾಧಿಸಲು ರಾಕೇಶ್ ಮಲ್ಲಯುದ್ಧಕ್ಕೆ ನಿಂತರು. ತಳ್ಳಾಟ, ನೂಕಾಟ, ಹೊಡೆದಾಟಕ್ಕೆ ಸಾಕ್ಷಿ ಆದರು.

  ಇಷ್ಟೆಲ್ಲಾ ಆದ್ಮೇಲೆ, ಚಟುವಟಿಕೆಯ ಮೊದಲ ಹಂತದಲ್ಲಿ 'ಸೂಪರ್ ಹೀರೋ' ತಂಡ ಸೋಲು ಅನುಭವಿಸಿತು. ಗೆಲುವಿನ ಸಂಭ್ರಮವನ್ನು 'ಸೂಪರ್ ವಿಲನ್' ತಂಡ ಆಚರಿಸುವ ಮುನ್ನವೇ 'ಬಿಗ್ ಬಾಸ್' ಬಿಗ್ ಶಾಕ್ ನೀಡಿದರು. ಅದೇನಪ್ಪಾ ಅಂದ್ರೆ, ಚಟುವಟಿಕೆಯ ಎರಡನೇ ಹಂತದಲ್ಲಿ ತಂಡಗಳು ಅದಲು ಬದಲಾಗಬೇಕು. ಅರ್ಥಾತ್ ಸೂಪರ್ ವಿಲನ್ ಆಗಿದ್ದವರು ಸೂಪರ್ ಹೀರೋ ಆಗಬೇಕು. ಸೂಪರ್ ಹೀರೋ ಆಗಿದ್ದವರು ಸೂಪರ್ ವಿಲನ್ ಆಗಬೇಕು.ಈ ತಿರುವು ಸಿಗುತ್ತಿದ್ದಂತೆಯೇ, ರಾಕೇಶ್ ಎಚ್ಚರಗೊಂಡರು. ಪರಿಣಾಮ, ಅವರ ಕಣ್ಣಲ್ಲಿ ನೀರು ಸುರಿಯಿತು.! ಮುಂದೆ ಓದಿರಿ...

  ಕಣ್ಣೀರಿಟ್ಟ ರಾಕೇಶ್

  ಕಣ್ಣೀರಿಟ್ಟ ರಾಕೇಶ್

  ಚಟುವಟಿಕೆಯ ಎರಡನೇ ಹಂತದಲ್ಲಿ ತಮಗೆ ಯಾವುದೇ ಡ್ಯಾಮೇಜ್ ಆಗಬಾರದು, ಬ್ಯಾಕ್ ಫೈಯರ್ ಆಗಬಾರದು ಎಂಬ ಲೆಕ್ಕಾಚಾರದೊಂದಿಗೆ ನಿವೇದಿತಾ, ಧನರಾಜ್ ಬಳಿ ರಾಕೇಶ್ ಕಣ್ಣೀರಿಟ್ಟರು.

  ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.?

  ರಾಕೇಶ್ ಹೇಳಿದ್ದೇನು.?

  ರಾಕೇಶ್ ಹೇಳಿದ್ದೇನು.?

  ''ನಾವು ಅಸಹಾಯಕರಾಗಿದ್ವಿ. ಆಂಡಿ ಔಟ್ ಆಫ್ ಕಂಟ್ರೋಲ್ ಆಗಿದ್ದ. ಏನೂ ಮಾಡಲು ಆಗುತ್ತಿರಲಿಲ್ಲ ನಮಗೆ'' ಅಂತ ನಿವೇದಿತಾ ಮುಂದೆ ರಾಕೇಶ್ ಕಣ್ಣೀರು ಸುರಿಸಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?

  ತೂತು ಬಾಯಿ

  ತೂತು ಬಾಯಿ

  ಇದನ್ನ ಗಮನಿಸಿದ ಆಂಡಿ, ''ಎಂ.ಜೆ.ರಾಕೇಶ್ ದು ತೂತು ಬಾಯಿ. ಅವನು ಎಲ್ಲರ ಬಳಿ ಚೆನ್ನಾಗಿರಲು ಪ್ರಯತ್ನಿಸುತ್ತಿದ್ದಾನೆ. ಅವನಿಗೆ ನಾಮಿನೇಷನ್ ಭಯ. ಇದು ನಾಮಿನೇಷನ್ ನಲ್ಲಿ ಹೊಡೆಯುತ್ತೆ ಅಂತ ತಲೆ ಕೆಟ್ಟಿದೆ ಅವನಿಗೆ'' ಎಂದು ಕಾಮೆಂಟ್ ಮಾಡಿದ್ದಾರೆ.

  ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

  ಕ್ರೌರ್ಯ ಮೆರೆದ ರಾಕೇಶ್

  ಕ್ರೌರ್ಯ ಮೆರೆದ ರಾಕೇಶ್

  ಟಾಸ್ಕ್ ನಲ್ಲಿ ಗುಡ್ನೆಸ್ ಮರೆತು ಕ್ರೌರ್ಯ ಮೆರೆದ ರಾಕೇಶ್ ಗೆ ನಾಮಿನೇಷನ್ ಭಯ ಕಾಡಿದ ಪರಿಣಾಮ ಜ್ಞಾನೋದಯ ಆಗಿದೆ. ಅದಕ್ಕೆ ಈ 'ಕಣ್ಣೀರು' ಮತ್ತು 'ಅಸಹಾಯಕ' ಡ್ರಾಮಾ. ಇದು 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಸ್ಟ್ರಾಟೆಜಿ ಅಲ್ಲದೇ, ಮತ್ತೇನು.?

  English summary
  Bigg Boss Kannada 6: Day 66: Is this Rakesh's new strategy.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X