For Quick Alerts
  ALLOW NOTIFICATIONS  
  For Daily Alerts

  ರಾಪಿಡ್ ರಶ್ಮಿಯ ಮುರಿದು ಬಿದ್ದ ಮೊದಲ ಮದುವೆಯ ಕಹಿ ಅಧ್ಯಾಯ 'ಬಿಗ್' ಮನೆಯಲ್ಲಿ ಬಯಲು.!

  |

  ಎಫ್.ಎಂ ನಲ್ಲಿ ಪಟ ಪಟ ಅಂತ ಮಾತನಾಡುತ್ತಿದ್ದ ರಾಪಿಡ್ ರಶ್ಮಿಗೆ ಮದುವೆ ಆಗಿದೆ ಎಂಬ ವಿಚಾರವೇ ಅನೇಕರಿಗೆ ತಿಳಿದಿರಲಿಲ್ಲ. ಅದ್ಯಾವಾಗ 'ಬಿಗ್ ಬಾಸ್' ವೇದಿಕೆ ಮೇಲೆ ರಾಪಿಡ್ ರಶ್ಮಿ ಕಾಲಿಟ್ಟರೋ, ಆಗಲೇ ರಾಪಿಡ್ ರಶ್ಮಿ 'ಡೇವಿಸ್ ಪತ್ನಿ' ಎಂಬ ಸಂಗತಿ ಜಗಜ್ಜಾಹೀರಾಗಿದ್ದು.

  'ಬಿಗ್ ಬಾಸ್' ಮನೆಯಲ್ಲಿ ಹತ್ತು ವಾರಗಳ ಕಾಲ ಸರಾಗವಾಗಿ ಕಳೆದಿರುವ ರಾಪಿಡ್ ರಶ್ಮಿ ಜೀವನದ ಕಹಿ ಅಧ್ಯಾಯವೊಂದು 'ದೊಡ್ಮನೆ'ಯಲ್ಲಿ ಬಟಾ ಬಯಲಾಗಿದೆ.

  ಡೇವಿಸ್ ಎಂಬುವರನ್ನ ವಿವಾಹ ಮಾಡಿಕೊಳ್ಳುವ ಮೊದಲು ರಾಪಿಡ್ ರಶ್ಮಿಗೆ ಅದಾಗಲೇ ಒಂದು ಮದುವೆ ಆಗಿತ್ತು. ಆದ್ರೆ, ಕಾರಣಾಂತರಗಳಿಂದ ಆ ವಿವಾಹ ಮುರಿದು ಬಿತ್ತು. ಮೊದಲನೇ ಪತಿಯಿಂದ ಡಿವೋರ್ಸ್ ಪಡೆದ ರಾಪಿಡ್ ರಶ್ಮಿ ಬಳಿಕ ಡೇವಿಸ್ ಕೈಹಿಡಿದರು.

  ರಾಪಿಡ್ ರಶ್ಮಿಯ ಮುರಿದು ಬಿದ್ದ ಮೊದಲ ಮದುವೆಯ ಕಹಿ ಅಧ್ಯಾಯ ಇಲ್ಲಿದೆ, ಓದಿರಿ...

  ಬಿಗ್ ಬಾಸ್ ಕೊಟ್ಟಿದ್ದ ವಿಶೇಷ ಚಟುವಟಿಕೆ

  ಬಿಗ್ ಬಾಸ್ ಕೊಟ್ಟಿದ್ದ ವಿಶೇಷ ಚಟುವಟಿಕೆ

  ಸ್ಪರ್ಧಿಗಳು ತಮ್ಮ ಜೀವನ ಚರಿತ್ರೆಯನ್ನು ತೆರೆದಿಡಲು 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅದೇ 'ನನ್ನ ಕಥೆ'. ಇದರ ಅನುಸಾರ, ತಮ್ಮ ಜೀವನದ ಕಹಿ ನೆನಪೊಂದನ್ನು ರಾಪಿಡ್ ರಶ್ಮಿ ಬಿಚ್ಚಿಟ್ಟರು.

  ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ರಾಪಿಡ್ ರಶ್ಮಿಗೆ ಸುದೀಪ್ ಹೇಳಿದ್ದೇನು.?

  ಮೊದಲ ಮದುವೆ ಕಥೆ

  ಮೊದಲ ಮದುವೆ ಕಥೆ

  ''2007 ರಲ್ಲಿ ನನಗೆ ಮದುವೆ ಆಯ್ತು. ಆ ಮದುವೆ ಎರಡುವರೆ ವರ್ಷಗಳ ಕಾಲ ಇತ್ತು. ಕಾರಣಾಂತರಗಳಿಂದ ಆ ಮದುವೆ ವರ್ಕ್ ಆಗಲಿಲ್ಲ. ಮದುವೆಯಿಂದ ಹೊರ ನಡೆಯುವ ನಿರ್ಧಾರ ತೆಗೆದುಕೊಂಡಿದ್ದು ನಾನು. ಆ ಟೈಮ್ ನಲ್ಲಿ ತುಂಬಾ ಗೊಂದಲಗಳು ಇತ್ತು'' - ರಾಪಿಡ್ ರಶ್ಮಿ

  ಏನ್ ಗೊತ್ತಾ? ರಾಪಿಡ್ ರಶ್ಮಿಗೆ ಮದುವೆಯಾಗಿದೆಯಂತೆ! ಗುಟ್ಟು ರಟ್ಟಾಯ್ತಾ?

  ತಾಯಿ ಕೂಡ ವಿಚ್ಛೇದನ ಪಡೆದಿದ್ದಾರೆ

  ತಾಯಿ ಕೂಡ ವಿಚ್ಛೇದನ ಪಡೆದಿದ್ದಾರೆ

  ''ನನ್ನ ತಾಯಿ ಕೂಡ ವಿಚ್ಛೇದನ ಪಡೆದಿರುವ ಮಹಿಳೆ. ನನ್ನ ಮಗಳಿಗೂ ಹೀಗೇ ಆಗ್ಹೋಯ್ತಲ್ಲಾ.. ತಾಯಿಯಂತೆ ಮಗಳು, ನೂಲಿನಂತೆ ಸೀರೆ ರೀತಿ ಆಯ್ತಲ್ಲಾ.. ಎಂಬ ಪ್ರೆಶರ್ ಇತ್ತು. ''ನೀನೇನಾದರೂ ವಿಚ್ಛೇದನ ಪಡೆದರೆ, ನನ್ನ ಪಾಲಿಗೆ ಸತ್ತು ಹೋಗಿದ್ದೀಯಾ ಅಂದುಕೋ'' ಅಂತ ಅಮ್ಮ ಹೇಳಿದರು'' - ರಾಪಿಡ್ ರಶ್ಮಿ

  'ಬಿಗ್ ಬಾಸ್' ಮನೆಯ ವಿಷ ಸರ್ಪ, ಕುತಂತ್ರಿ, ಗೋಮುಖ ವ್ಯಾಘ್ರ ಯಾರು ಗೊತ್ತೇ.?

  ಭಯ ಇತ್ತು

  ಭಯ ಇತ್ತು

  ''ವಿಚ್ಛೇದನಕ್ಕೆ ಅಪ್ಲೈ ಮಾಡಿದೆ. ಅಮ್ಮ ನನ್ನ ಬಳಿ ಮಾತನಾಡಲಿಲ್ಲ. ಕೊನೆಗೆ ನನ್ನ ತಾಯಿಯ ಗೆಳತಿ ಮಧ್ಯೆ ಬಂದು ಮಾತನಾಡುವ ಹಾಗೆ ಮಾಡಿದರು. ಅಷ್ಟೊತ್ತಿಗೆ ನಾನು ಆರ್.ಜೆ. ವಿಚಾರ ಆಚೆ ಹೋದರೆ, ಏನಾಗುತ್ತೋ ಏನೋ ಎಂಬ ಭಯ ಇತ್ತು ನನಗೆ'' - ರಾಪಿಡ್ ರಶ್ಮಿ

  ಎರಡನೇ ಮದುವೆ ಕಥೆ

  ಎರಡನೇ ಮದುವೆ ಕಥೆ

  ''ಮುಂದಿನ ಹಂತ ಡೇವಿಸ್. ಆ ಟೈಮ್ ನಲ್ಲಿ ನಾನು ಸುಸ್ತಾಗಿದ್ದೆ. ನನ್ನ ಆಯಾಸದ ದಿನಗಳಲ್ಲಿ ನನ್ನ ಕೈಹಿಡಿದು ಆತ್ಮವಿಶ್ವಾಸ ತುಂಬಿದ್ದು ಡೇವಿಸ್. 2010-2013 ವರೆಗೂ ನಾನು-ಡೇವಿಸ್ ಪ್ರೀತಿ ಮಾಡಿದ್ವಿ. ಮದುವೆ ಆಗಲು ನಿರ್ಧಾರ ಮಾಡಿದ್ವಿ'' - ರಾಪಿಡ್ ರಶ್ಮಿ

  ಮದುವೆಗೆ ವಿರೋಧ

  ಮದುವೆಗೆ ವಿರೋಧ

  ''ಡೇವಿಸ್ ಗೆ ಇದು ಮೊದಲ ಮದುವೆ. ಹೀಗಾಗಿ ನಮ್ಮ ಮದುವೆಗೆ ಅವರ ಮನೆಯಲ್ಲಿ ವಿರೋಧ ಇತ್ತು. ಆದ್ರೆ, ಯಾರಿಗೂ ತಲೆ ಕೆಡಿಸಿಕೊಳ್ಳದೇ ಡೇವಿಸ್ ನನ್ನ ಮದುವೆಯಾದರು. ಆರು ವರ್ಷಗಳಿಂದ ವೈವಾಹಿಕ ಜೀವನ ಚೆನ್ನಾಗಿದೆ. ಡೇವಿಸ್ ತುಂಬಾ ಚೆನ್ನಾಗಿ ನನ್ನ ಅರ್ಥ ಮಾಡಿಕೊಳ್ಳುತ್ತಾರೆ. ನನ್ನ ಹನ್ನೆರಡು ವರ್ಷಗಳ ರೇಡಿಯೋ ಜೀವನದಲ್ಲಿ ಇದು ಯಾರಿಗೂ ಗೊತ್ತಿಲ್ಲ'' - ರಾಪಿಡ್ ರಶ್ಮಿ

  ಯಾರು ಮೊದಲ ಪತಿ.?

  ಯಾರು ಮೊದಲ ಪತಿ.?

  ತಮ್ಮ ಮೊದಲ ಮದುವೆ ಬಗ್ಗೆ ರಾಪಿಡ್ ರಶ್ಮಿ ಮಾತನಾಡಿದರೆ ಹೊರತು, ತಮ್ಮ ಮೊದಲ ಪತಿ ಯಾರು.? ಭಿನ್ನಾಭಿಪ್ರಾಯ ಮೂಡಿದ್ದು ಹೇಗೆ ಎಂಬುದನ್ನ ವಿವರಿಸಿಲ್ಲ.

  English summary
  Bigg Boss Kannada 6: Day 73: Rapid Rashmi speaks about her first marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X